ಮುಳುಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಿಸಿದ ವೀರ ಪೊಲೀಸರು ; ವಿಡಿಯೋ ವೈರಲ್

Uttarkhand : ಉತ್ತರಾಖಂಡ್ನ ತನಕ್ಪುರದ ಶಾರದಾ ಘಾಟ್ನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ಉತ್ತರಾಖಂಡ ಪೊಲೀಸರು (Uttarkhand Police) ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಇದನ್ನೂ ಓದಿ : https://vijayatimes.com/aravind-kejrival-against-ed-raid/

ಈ ಘಟನೆಯ ವಿಡಿಯೋವನ್ನು ಉತ್ತರಾಖಂಡ ರಾಜ್ಯ ಪೊಲೀಸರು ತಮ್ಮ ಟ್ವಿಟ್ಟರ್(Twitter) ಖಾತೆಯಲ್ಲಿ ಹಂಚಿಕೊಂಡಿದ್ದು, ಪೊಲೀಸರ ಈ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಬ್ಬರು ಯುವಕರು ನದಿಯಲ್ಲಿ ಮುಳುಗುತ್ತಿದ್ದಾಗ, ಒಬ್ಬ ವ್ಯಕ್ತಿಯು ಅವರ ಕಡೆಗೆ ಈಜುತ್ತಾ ಧಾವಿಸುತ್ತಾನೆ.

ನಂತರ ಸುರಕ್ಷತಾ ಜಾಕೆಟ್ನಲ್ಲಿ ಇನ್ನೊಬ್ಬ ವ್ಯಕ್ತಿ ನದಿಗೆ ಧುಮುಕುವುದು (Police Saved two people lives) ಕಂಡುಬರುತ್ತದೆ. ಸೆಕೆಂಡುಗಳ ನಂತರ, ಅವರು ಇಬ್ಬರು ಸೇರಿ ಮುಳುಗುತ್ತಿದ್ದ ಯುವಕರನ್ನು ಸುರಕ್ಷಿತವಾಗಿ ಕರೆತರುತ್ತಿರುವುದನ್ನು ಕಾಣಬಹುದು.

ಇಬ್ಬರು ಯುವಕರನ್ನು ರಕ್ಷಿಸಿದ ಪೊಲೀಸರನ್ನು ರವೀಂದರ್ ಪೆಹೆಲ್ವಾನ್ ಮತ್ತು ಸೂರಜ್ ಎಂದು ಉತ್ತರಾಖಂಡ್ ಪೊಲೀಸರು ತಿಳಿಸಿದ್ದಾರೆ.

ಇನ್ನು ಉತ್ತರ ಪ್ರದೇಶದ ಇಟಾಹ್ನ ಇಬ್ಬರು ಯುವಕರು ಶ್ರೀ ಮಾ ಪೂರ್ಣಗಿರಿಯನ್ನು ನೋಡಲು (Police Saved two people lives) ಬಂದಿದ್ದರು. ತನಕ್ಪುರದ ಶಾರದಾ ಘಾಟ್ನಲ್ಲಿ ನದಿಯಲ್ಲಿ ಸ್ನಾನ ಮಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲು ಪ್ರಾರಂಭಿಸಿದರು.

ಉತ್ತರಾಖಂಡ ಪೊಲೀಸರಾದ ರವೀಂದರ್ ಪೆಹೆಲ್ವಾನ್ ಮತ್ತು ಸೂರಜ್ ಮುಳುಗುತ್ತಿದ್ದ ಇಬ್ಬರನ್ನೂ ರಕ್ಷಿಸಿದರು ಎಂದು ಪೊಲೀಸರು ಟ್ವೀಟ್‌(Tweet) ಮಾಡಿದ್ದಾರೆ.

ಯುವಕರ ಜೀವ ಉಳಿಸಿದ ಪೊಲೀಸರ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಶ್ಲಾಘಿಸಿದರು. ಒಬ್ಬ ಟ್ವೀಟರ್‌ ಬಳಕೆದಾರ “ಒಳ್ಳೆಯ ಕೆಲಸ” ಎಂದು ಬರೆದಿದ್ದಾರೆ. ಇನ್ನೊಬ್ಬರು, “ಅತ್ಯುತ್ತಮ ಕಾರ್ಯ. ಇಬ್ಬರೂ ಪ್ರಶಸ್ತಿಗೆ ಅರ್ಹರು. ಉತ್ತರಖಂಡ್ ಕಾಪ್ಸ್ನಿಂದ ಉತ್ತಮ ಕೆಲಸ ಮಾಡಲಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


https://twitter.com/uttarakhandcops/status/1577944093925089280?s=20&t=XRX1zgxU_tQTlpdcAAYAgQ


ಏತನ್ಮಧ್ಯೆ, ಉತ್ತರಾಖಂಡ ಪೊಲೀಸರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಈ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದು, ನೀರಿಗಿಳಿಯುವ ಮುನ್ನ ಎಚ್ಚರ ಇರಲಿ ಎಂಬ ಸಂದೇಶವನ್ನು ನೀಡಿದ್ದಾರೆ.

Exit mobile version