ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟಿಸುವುದೇ ದೇಶದ್ರೋಹ ಎಂಬುದು ಪ್ರಜಾಪ್ರಭುತ್ವದ ಅಣಕ: ದಿನೇಶ್ ಗುಂಡೂರಾವ್

ಬೆಂಗಳೂರು: ವಿಶ್ವದ ದೊಡ್ಡ ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವುದೇ ದೇಶದ್ರೋಹವೆಂಬುದು ಪ್ರಜಾಪ್ರಭುತ್ವದ ಅಣಕ ಎಂದು ಮಾಜಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ದಿಶಾ ರವಿ ಬಂಧನದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದೇಶದ್ರೋಹದ ವ್ಯಾಖ್ಯಾನ ನೀಡುವ IPC124 ಮೋದಿ ಹಾಗೂ ಶಾ ಜೋಡಿಯ ಮಾರಕಾಸ್ತ್ರವಾಗಿದೆ. ತಮ್ಮ ವಿರುದ್ಧ ರಚನಾತ್ಮಕವಾಗಿ ಪ್ರತಿಭಟಿಸಿದವರನ್ನೂ ಈ ಜೋಡಿ ಸೆಕ್ಷನ್124 ಅಸ್ತ್ರ ಪ್ರಯೋಗಿಸಿ ದಮನ ಮಾಡುವ ಕಾರ್ಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಲ್ಲದೇ, ಸರ್ಕಾರದ ವಿರುದ್ಧ ಪ್ರತಿಭಟಿಸಿದವರ ಮೇಲೆಲ್ಲಾ ದೇಶದ್ರೋಹಿ ಕೇಸ್ ಹಾಕುವುದಾದರೆ, ಕೇಂದ್ರ ಸರ್ಕಾರ ತಮ್ಮದೇ ಪಕ್ಷದ ಸುಬ್ರಹ್ಮಣ್ಯ ಸ್ವಾಮಿ ವಿರುದ್ಧವೂ ದೇಶದ್ರೋಹದ ಕೇಸ್ ದಾಖಲಿಸಲಿದೆಯೇ? ಏಕೆಂದರೆ ಇತ್ತೀಚೆಗೆ ಕೇಂದ್ರದ ಜನ ವಿರೋಧಿ ನೀತಿಯನ್ನು ಸುಬ್ರಮಣ್ಯ ಸ್ವಾಮಿಯವರು ಪದೇ ಪದೇ ಟೀಕಿಸಿ ಪ್ರತಿಭಟಿಸಿದ್ದಾರೆ, ಹೀಗಾಗಿ ಅವರಿಗೆ ಯಾವ ಪಟ್ಟ? ಎಂದು ಪ್ರಶ್ನಿಸಿದ್ದಾರೆ.

ಟೂಲ್‌ಕಿಟ್ ಬಗ್ಗೆ ಇಂದು ಆಕಾಶ ಸೂರು ಒಂದು ಮಾಡುತ್ತಿರುವ ಬಿಜೆಪಿ ನಾಯಕರು ‘ಲೋಕಪಾಲ’ ಮಸೂದೆ ಪ್ರತಿಭಟನೆಯಲ್ಲಿ ಬಳಸಿಕೊಂಡಿದ್ದೇನು? ಅಂದು ಟೂಲ್‌ಕಿಟ್ ಬಳಸಿ ಚಳವಳಿಯ ರೂಪುರೇಷೆ ಮಾಡಿದ್ದು ದೇಶದ್ರೋಹ ಆಗಿರಲಿಲ್ಲವೆ. ಬಿಜೆಪಿಯವರ ಪ್ರಕಾರ, ತಾವು ತಿಂದರೆ‌ ಮಾತ್ರ ಅದು ಮೃಷ್ಟಾನ, ಬೇರೆಯವರು ತಿಂದರೆ ಅದು ತಂಗಳನ್ನವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಪ್ರತಿಭಟನೆ ಹಾಗೂ ಟೀಕೆಯನ್ನು ಸೈದಾಂತಿಕವಾಗಿ ಹಾಗೂ ನೈತಿಕವಾಗಿ ಎದುರಿಸಲಾಗದ ಸರ್ಕಾರವೊಂದು ಅನುಸರಿಸುವ ಹೇಡಿಯ ಮಾರ್ಗವೇ ದೇಶದ್ರೋಹದ ಕೇಸ್. ಸದ್ಯ ಕೇಂದ್ರ ಸರ್ಕಾರವೂ ಇದೇ ಹೇಡಿ ಮಾರ್ಗ ಅನುಸರಿಸಿ ಪ್ರತಿಭಟನೆಯ ದನಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಈ ಸರ್ಕಾರದ ಅಂತ್ಯದ ಆರಂಭವಷ್ಟೇ ಎಂದಿದ್ದಾರೆ

.

Exit mobile version