ಗೋಮೂತ್ರ ಬಹಳ ಪವಿತ್ರವಾದದ್ದು ಎಂದು ಹೇಳಿದವರೇ ನೀವೇ ಕುಡಿದು ಪವಿತ್ರವಾಗಿರಿ : ಪ್ರಕಾಶ್ ರೈ

Mysore : ಜೈ ಭೀಮ್ ಕೋರೆಗಾಂವ್(Jai Bheem Koregaon) ವಿಜಯೋತ್ಸವ ಸಮಿತಿ ವತಿಯಿಂದ ಭೀಮ ಕೋರೆಗಾಂವ್ 20ನೇ ವರ್ಷದ ಸಂಭ್ರಮಾಚರಣೆಯನ್ನು ಅಶೋಕ ಪುರಂ, ಜಯನಗರ ರೈಲ್ವೆ ಗೇಟ್ ಹತ್ತಿರ ಏರ್ಪಡಿಸಿದ್ದ 20ನೇ ವರ್ಷದ ಭೀಮ್ ಕೋರೆಗಾಂವ್ ಸಂಭ್ರಮಾಚರಣೆದ ಜೊತೆಗೆ ದಲಿತರ ಸ್ವಾಭಿಮಾನ ಜಾಗೃತಿ ದಿನ ಕಾರ್ಯಕ್ರಮ ಉದ್ಘಟಿಸಿ ಮಾತನಾಡಿದ ಪ್ರಕಾಶ್ ರೈ(Prakash Rai Statement) ರವರು,

ಬಿಜೆಪಿ(BJP) ನಾಯಕರು ಹಾಗೂ ಆರ್ ಎಸ್ ಎಸ್(RSS) ವಿರುದ್ಧ ಪರೋಕ್ಷವಾಗಿ ಭಾಷಣ ಮಾಡಿದ ನಟ ಪ್ರಕಾಶ್ ರೈ ರವರು,

ದೇಶಕ್ಕೆ ಇತಿಹಾಸ ಬಹಳ ಮುಖ್ಯ ಎಂಬುದು ಇಂದಿನ ಆಳುವ ಎಡಬಿಡಂಗಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದಲೇ ಸಾಮಾಜಿಕ ಜಾಣತಾಣಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಾ ನಿಜ ಚರಿತ್ರೆಯನ್ನು ತಿರುಚುವ ಹುನ್ನಾರ ಮಾಡುತ್ತಿದ್ದಾರೆ ಎಂದು ಪ್ರಕಾಶ್ ರೈ ಆಕ್ರೋಶ ಹೊರಹಾಕಿದ್ದಾರೆ.

ದೇಶಕ್ಕೆ ಒಂದು ಸಮಾಜಕ್ಕೆ ಹಾಗೂ ಮನುಕುಲಕ್ಕೂ ಇವರು ಬಹಳ ಡೇಂಜರಸ್ಸಿಂದ ಬಹಿಷ್ಕಾರ ಮಾಡಿರುವಂಥದ್ದು ಅವರು ನಮ್ಮ ನಿಮ್ಮೆಲ್ಲರ ತೆರಿಗೆಯ ಹಣದಿಂದ 3000 ಕೋಟಿಗೆ ಅದೇ ಪಟೇಲರ ಒಂದು ಶಿಲೆಯನ್ನು ನೆನೆಸಿ ಸೆಲ್ಫಿ ತೆಗೆಯೋ ಜಾತಿಯವರು,

ಇದನ್ನೂ ಓದಿ : https://vijayatimes.com/nalinkumar-tweeted-against-congress/

ದೇಶಕ್ಕೆ , ಸಮಾಜಕ್ಕೆ ಹಾಗೂ ಮನುಕುಲಕ್ಕೂಇಂತಹ ಸಂಘಟನೆಗಳು(Prakash Rai Statement) ಅಪಾಯಕಾರಿ,

ಆದರಿಂದಲೇ ಇಂತಹ ಸಂಘಣೆಗಳನ್ನು ಬಹಿಷ್ಕಾರ ಮಾಡಿರುವಂಥದ್ದು. ಅವರು ನಮ್ಮ ನಿಮ್ಮೆಲ್ಲರ ತೆರಿಗೆಯ ಹಣದಿಂದನೇ 3000 ಕೋಟಿ ವೆಚ್ಚದಲ್ಲಿಅದೇ ಪಟೇಲರ ಒಂದು ಪ್ರತಿಮೆ ನಿರ್ಮಾಣ ಮಾಡಿ ಸೆಲ್ಫಿ ತೆಗೆಯೋ ಜಾತಿಯವರು.

ಇವರ ಮೋಸದ ಕಥೆಗಳನ್ನು ಜನರು ಎಂದಿಗೂ ನಂಬುವುದಿಲ್ಲ.

ಗೋಮೂತ್ರ ಕುಡಿದರೆ ಪವಿತ್ರವಾಗುತ್ತಾರೆ ಎಂದು ಹೇಳುವವರು ಕುಡಿದು ತೋರಿಸಲಿ ಜೈ ಭೀಮ್(Jai Bheem) ಆಸ್ಮಿತೆಯುಳ್ಳವರನ್ನು ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿಯೇ RSS ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : https://vijayatimes.com/dinesh-gundurao-criticized-bjp/

ಕಳೆದುಕೊಳ್ಳುವ ಶ್ರೀಮಂತ ನಾನು, ಹೊರತು ಬಚ್ಚಿಟ್ಟುಕೊಳ್ಳುವ ದರಿದ್ರ ತನ ನನಗಿಂದು ಬಂದಿಲ್ಲ. ನನ್ನ ಶ್ರೀಮಂತಿಕೆಯೇ ನನ್ನ ಅಂಬೇಡ್ಕರ್,

ಕುವೆಂಪು, ಲಂಕೇಶ್, ನನ್ನ ತೇಜಸ್ವಿ, ಶ್ರೀಮಂತನಿಗೂ ಬಡವನಿಗೂ ಇರುವುದು ಒಂದೇ ಕೆಂಪು ರಕ್ತ ಆದರೆ ರಕ್ತದಿಂದ ಪಾಠ ಕಲಿಯದ ಇವರು ದೇಶಕ್ಕಾಗಿ ಏನು ಮಾಡುತ್ತಾರೆ ? ಎಂದು ಪ್ರಶ್ನಿಸಿದರು.

ಇತಿಹಾಸ ಇಲ್ಲದವರಿಗೆ, ಭವಿಷ್ಯ ಇರಲ್ಲ ಹಾಗಾಗಿ ಪ್ರಪಂಚದ ಬಲಪಂಥೀಯರಿಗೆ ಇತಿಹಾಸವೇ ಇಲ್ಲ .

ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಡಾ. ಬಿಆರ್ ಅಂಬೇಡ್ಕರ್ ಅವರ ಮಾತು ಸತ್ಯ.

ಸುಳ್ಳು ಎಂಬುದು ಒಂದು ತರ ಆಯಸ್ಕಾಂತ ವಿದ್ದಂತೆ ಅದರಿಂದಲೇ ಜನಬೇಗ ಸುಳ್ಳನ್ನು ನಂಬುತ್ತಾರೆ ಹೊರತು ಸತ್ಯ ನಂಬುವುದಿಲ್ಲ.

ಆದರೆ ಒಂದಲ್ಲ ಒಂದು ದಿನ ಸತ್ಯ ಬೆಳಕಿಗೆ ಬಂದೆ ಬರಲಿದೆ. ಎಲ್ಲರೂ ಕೇಳಲಿ ಎಂದು ನಾನು ಹಾಡುವುದಿಲ್ಲ ಹಾಡೋದು ನನಗೆ ಅನಿವಾರ್ಯ ಕರ್ಮ .

ಅದರಂತೆ ಕರ್ಮದ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ ಎಂದು ಹೇಳಿಕೆ ನೀಡುವುದರ ಜೊತೆಗೆ,

ಮಹಾರಾಷ್ಟ್ರದಲ್ಲಿ(Maharashtra) ಭೀಮ ಕೋರಿಂಗಾವ್ ವಿಜಯೋತ್ಸವ ಸಂಭ್ರಮದ ಆಯೋಜಿಸಿದ್ದಕ್ಕೆ ಸಾಮಾಜಿಕ ಹೋರಾಟಗಾರ ಸ್ಟ್ರಾಂಗ್ ಸ್ವಾಮಿ(Strong Swami) ಅವರನ್ನು ಬಂಧಿಸಲಾಯಿತು.

ಸಮಾಜದ ಅವ್ಯವಸ್ಥೆಯನ್ನು ಪ್ರಶ್ನಿಸುವುದು ತಪ್ಪೇ? ಇವರು ಸಮಾಜದಲ್ಲಿ ಶಾಂತಿ ಹಾಳು ಮಾಡುತ್ತಿದ್ದಾರೆ ಹೊರತು ಸಮಾಜದ ಯೋಚನೆ ಇವರಿಗಿಲ್ಲ ಎಂದು ಪ್ರಕಾಶ್ ರೈ ಆಕ್ರೋಶ ವ್ಯಕ್ತಪಡಿಸಿದರು.

Exit mobile version