ಈಗ ಮನೆ ಕೆಡವಿದ್ದಾರೆ, ಇನ್ನು ನಾವು ಸುಮ್ಮನಿದ್ದರೆ ಅತೀ ಶೀಘ್ರವೇ ಇಡೀ ದೇಶವನ್ನು ಕೆಡವುತ್ತಾರೆ : ಪ್ರಕಾಶ್ ರಾಜ್!

prakash raj

ದೆಹಲಿಯ(Delhi) ಜಹಾಂಗೀರ್‍ಪುರಿಯಲ್ಲಿ(Jahangirpuri) ಬುಲ್ಡೋಜರ್ ಬಳಸಿ ಗಲಭೆಗೆ ಸಂಬಂಧಿತ ಆರೋಪಿಗಳ ಮನೆ, ಶೆಡ್‍ಗಳನ್ನು ಧ್ವಂಸ ಮಾಡಲಾಯಿತು!

ಅಂಗಡಿ, ಶಡ್ ಸೇರಿದಂತೆ ಮಸೀದಿ ಗೇಟ್‍ಗಳು, ಮುಂಭಾಗದ ಗೋಡೆಗಳನ್ನು ಕೆಡವಿದ್ದಾರೆ. ಸುಪ್ರೀಂ ಆದೇಶಕ್ಕೆ ಬಗ್ಗದೆ ಧ್ವಂಸ ಕಾರ್ಯಾಚರಣೆಯನ್ನು ಜೆಸಿಬಿ ಮುಂದುವರೆಸಿತು, ಈ ಬೆನ್ನಲ್ಲೇ ಸುಪ್ರೀಂ ಎರಡನೇ ಆದೇಶ ಹೊರಡಿಸುವ ಮೂಲಕ ಧ್ವಂಸ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಸೂಚಿಸಿತು! ಇದಾದ ಬಳಿಕ ಸಾಕಷ್ಟು ಚರ್ಚೆಗಳು ಬುಗಿಲೆದ್ದು ಬಿಜೆಪಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾಯಿತು. ಬುಲ್ಡೋಜರ್ ಕಿಚ್ಚು ಎಂಬ ಶೀರ್ಷಿಕೆಯಡಿ ಆಕ್ರೋಶಗಳು ವ್ಯಾಪಕವಾಗಿ ವ್ಯಕ್ತವಾಯಿತು.

ಈ ಕುರಿತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, ಬಿಜೆಪಿ ಸರ್ಕಾರ ಅವರನ್ನೆಲ್ಲಾ ಗುರಿಯಾಗಿಸಿಕೊಂಡು ಬುಲ್ಡೋಜರ್ ಬಳಸಿ ಕಟ್ಟಡಗಳ ಧ್ವಂಸ ಮಾಡಿಸುವ ಯೋಜನೆ ರೂಪಿಸಿದೆ. 15 ವರ್ಷಗಳಿಂದ ಲಂಚ ಸ್ವೀಕರಿಸಿ ಈ ಕಟ್ಟಡಗಳನ್ನು ನಿರ್ಮಿಸಲು ಅವಕಾಶ ನೀಡಿದ ನಾಯಕರ ಮನೆಗಳನ್ನು ಬಿಜೆಪಿ ಬುಲ್ಡೋಜರ್‍ಗಳು ಯಾವಾಗ ನೆಲಸಮ ಮಾಡಲಿದೆ ಎಂದು ಪ್ರಶ್ನಿಸುವ ಮುಖೇನ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬುಲ್ಡೋಜರ್ ದ್ವೇಷ ಎಂಬ ಆರೋಪಗಳ ಸುರಿಮಳೆ ನಡುವೆ ನಟ ಪ್ರಕಾಶ್ ರಾಜ್ ಅವರ ವಾಕ್ಯಗಳು ಕೂಡ ಗಮನಾರ್ಹವಾಗಿದ್ದು,

ಜಹಾಂಗೀರ್‍ಪುರಿಯಲ್ಲಿ ನಡೆದ ಘಟನೆಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಅವರು, “ಪ್ರತಿಮೆಗಳು ಕಟ್ಟುವುದು, ಅನಾವರಣಗೊಳಿಸುವುದು..ಮನೆಗಳನ್ನು ಧ್ವಂಸಗೊಳಿಸುವುದು. ಇನ್ನು ನಾವು ಮಾತನಾಡದೆ ಸುಮ್ಮನೆ ಇದ್ದರೆ ಅತೀ ಶೀಘ್ರವೇ ಇಡೀ ದೇಶವನ್ನು ಧ್ವಂಸ ಮಾಡಲಿದ್ದಾರೆ” ಎಂದು ಪರೋಕ್ಷವಾಗಿ ಬಿಜೆಪಿ ಸರ್ಕಾರವನ್ನು ಗುರಿ ಮಾಡಿ ಟಾಂಗ್ ಕೊಟ್ಟಿದ್ದಾರೆ. ಸದ್ಯ ಪ್ರಕಾಶ್ ರಾಜ್ ಅವರ ಈ ಟ್ವೀಟ್‍ಗೆ ಸಾಕಷ್ಟು ರೀ-ಟ್ವೀಟ್ ಹರಿದುಬಂದಿದ್ದು, ಟ್ವೀಟ್ ಸಮರ ಆರಂಭಗೊಂಡಿದೆ!

Exit mobile version