ಮಾಡುವುದೆಲ್ಲಾ 420 ಕೆಲಸ, ಮಾತಾಡೋದು ಮಾತ್ರ 400 ಸೀಟು ಗೆಲ್ಲುವ ಬಗ್ಗೆ: ನಟ ಪ್ರಕಾಶ್ ರಾಜ್.

Chikkamagalauru: 420 ಕೆಲಸ ಮಾಡುತ್ತಿರುವವರು ಮುಂದಿನ ಚುನಾವಣೆಯಲ್ಲಿ 400 ಸ್ಥಾನ ಗೆಲ್ಲುವ ಮಾತನಾಡುತ್ತಿದ್ದಾರೆ. ಯಾವುದೇ ಪಕ್ಷ ಹೀಗೆ ಮಾತನಾಡುವುದು ಅವರ ದುರಹಂಕಾರದ ಪ್ರತಿಬಿಂಬವಾಗಿರುತ್ತದೆ ಎಂದು ನಟ ಪ್ರಕಾಶ್ ರಾಜ್ (Prakash Raj) ಹೇಳಿದ್ದಾರೆ . ನಾನು ಲೋಕಸಭೆ ಚುನಾವಣೆಯಲ್ಲಿ ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಆಳುವ ಪಕ್ಷವನ್ನು ಪ್ರಶ್ನಿಸುವುದಷ್ಟೆ ನನ್ನ ಕೆಲಸ. ಜನರೂ ಅಷ್ಟೇ, ಪಕ್ಷ ನೋಡಿ ಮತ ಹಾಕಬಾರದು. ನಿಮಗೆ ಸಿಗುವ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಯತ್ನಿಸಬೇಕು ಎಂದಿದ್ದಾರೆ.

ಯಾವುದೇ ಪಕ್ಷವಾಗಲಿ, ಅಲ್ಲಿ ಅವರ ಅಹಂಕಾರ ಕಾಣುತ್ತೆ. ನಾನು ತೆಗೆದುಕೊಳ್ತೀನಿ ಅನ್ನೋ ಅಹಂಕಾರ ನಿಂಗೆ ಎಲ್ಲಿ ಬರುತ್ತೆ ಎಂದು ಹೇಳುವ ಮೂಲಕ ಬಿಜೆಪಿ(BJP), ಮೋದಿ(Narendra Modi) ವಿರುದ್ಧ ನಟ ಪ್ರಕಾಶ್ ರಾಜ್(Actor Prakash Raj) ಕಿಡಿಕಾರಿದರು. ಆ ಮಾತಿನ ಅಹಂಕಾರ, ಅತೃಪ್ತತೆ ಜನರಿಗೆ ಕಾಣುತ್ತಿದೆ. ಒಂದೇ ಪಕ್ಷಕ್ಕೆ ಅಷ್ಟು ದೊಡ್ಡ ಬಹುಮತ ಸಿಗಲು ಸಾಧ್ಯವಿಲ್ಲ. ಅದಕ್ಕೆ ಸಣ್ಣ ಪಕ್ಷಗಳನ್ನ ಒಡೆಯುವ, ಕೊಂಡುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.ಇಂತಹ ಕೆಲಸವನ್ನು ಮಹಾಪ್ರಭುಗಳು ಎಷ್ಟು ಚೆನ್ನಾಗಿ ಮಾಡುತ್ತಿದ್ದಾರೆ.

ಆಂಧ್ರದಲ್ಲಿ (Andhra) 3 ಪಕ್ಷಗಳ ಹಿಂದೆ ಅವರೇ ಇದ್ದಾರೆ. ಮಹಾಪ್ರಭುಗಳಿಗೆ 1% ಓಟು ಅಲ್ಲಿ, ಅದರಲ್ಲಿ ಬರಲ್ಲ ಅಂತ ಗೊತ್ತು. ಮೂರು ಪಕ್ಷಗಳನ್ನ ಇಟ್ಕೊಂಡು ಆಳುವ ಪಕ್ಷ ಕೈನಲ್ಲಿ ಇಟ್ಕೊಂಡಿದ್ದಾರೆ. ಅವರಿಗೆ ಏನು ಸ್ಯಾಂಕ್ಷನ್ ಮಾಡಬೇಕು ಮಾಡಿದ್ದಾರೆ, ಅದರಲ್ಲಿ ಕಮಿಷನ್ ಬರ್ತಿದೆ. ಇಬ್ಬರು ಪ್ರಾದೇಶಿಕ ಪಕ್ಷದವರನ್ನ ಒಳಹಾಕಿಕೊಂಡಿದ್ದಾರೆ. ಅವನು 10, ಇವನು 12 ತೆಗೆದುಕೊಂಡರೆ ಕೊನೆಗೆ ಇವ್ರಿಗೆ ತಾನೇ ಎಂದು ಚಿಕ್ಕಮಗಳೂರಿನಲ್ಲಿ ನಟ ಪ್ರಕಾಶ್ ರಾಜ್ ನಾಲಿಗೆ ಹರಿ ಬಿಟ್ಟಿದ್ದಾರೆ.

ಇನ್ನು ಚುನಾವಣಾ ಬಾಂಡ್ (Electoral Bond) ವಿಷಯದಲ್ಲಿ ಪ್ರಧಾನ ಮಂತ್ರಿ ಮತ್ತು ಗೃಹಸಚಿವರು ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಈ ಲೂಟಿ ಬಗ್ಗೆ ಯಾಕೆ ಹೇಳಲಿಲ್ಲ ಎಂದು ನಟ ಪ್ರಕಾಶ್ ರಾಜ್ ಪ್ರಶ್ನಿಸಿದರು.ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ₹6000 ಕೋಟಿ ತೆಗೆದುಕೊಂಡಿದ್ದೇವೆ, ಆದರೆ, 330 ಸಂಸದರು ಇದ್ದಾರೆ. ಕಡಿಮೆ ಸಂಸದರು ಇರುವ ಪಕ್ಷಗಳು ಜಾಸ್ತಿ ತೆಗೆದುಕೊಂಡಿದ್ದಾರೆ ಎನ್ನುತ್ತಾರೆ. ಇದರರ್ಥ ಏನು? ಹೆಚ್ಚು ತೆಗೆದುಕೊಂಡು ಹಂಚಿಕೊಂಡರೆ ಶಿಕ್ಷೆ ಕಡಿಮೆ ಆಗಬೇಕೆಂದೇ ಎಂದು ಕಿಡಿ ಕಾರಿದ್ದಾರೆ.

Exit mobile version