ಮೋದಿ ಕುರಿತು ಕೀಳು ಮಟ್ಟದ ಕಮೆಂಟ್ ಮಾಡಿದ ಪ್ರಕಾಶ್ ರಾಜ್!

prakash raj

ಪ್ರಧಾನಿ(Prime Minister) ನರೇಂದ್ರ ಮೋದಿ(Narendra Modi) ಅವರ ಬಗ್ಗೆ ಕೀಳು ಮಟ್ಟದ ವ್ಯಂಗ್ಯಭರಿತ ಕಮೆಂಟ್ ಮಾಡಿ ಹೊಸ ವಿವಾದ ಸೃಷ್ಟಿಸಿದ್ದಾರೆ ನಟ(Actor) ಮತ್ತು ರಾಜಕಾರಣಿ(Politician)ಪ್ರಕಾಶ್ ರಾಜ್(Prakash Raj). ‘ಪ್ರಧಾನಿ ನರೇಂದ್ರ ಮೋದಿಯವರು ನಿದ್ರಾಹೀನತೆ ರೋಗದಿಂದ ಬಳಲುತ್ತಿದ್ದಾರೆ, ಹೀಗಾಗಿ ಅವರಿಗೆ ಚಿಕಿತ್ಸೆ ಕೊಡಿಸಿ’ ಎಂದು ಪ್ರಕಾಶ್ ರಾಜ್ ಟ್ವೀಟ್(Tweet) ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ.

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದ್ರಕಾಂತ ಪಾಟೀಲ್ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿ ಬಗ್ಗೆ ಮಾತನಾಡುತ್ತಾ, ‘ನಮ್ಮ ಪ್ರಧಾನಿಗಳು ದೇಶಕ್ಕಾಗಿ ಸದಾ ಶ್ರಮಿಸುತ್ತಾರೆ. ಅವರೊಬ್ಬ ಶ್ರಮಜೀವಿಯಾಗಿದ್ದು, ಪ್ರತಿದಿನ ಸುಮಾರು 22 ಗಂಟೆಗಳ ಕಾಲ ಕೆಲಸ ಮಾಡುವ ಸಾಮಥ್ರ್ಯವುಳ್ಳವರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೋದಿಯವರು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಶ್ರಮಜೀವಿ ಎಂಬುದನ್ನು ಹೇಳಿದ್ದರು. ಆದರೆ ಅದನ್ನೇ ವ್ಯಂಗ್ಯವಾಗಿ ಟೀಕಿಸಿರುವ ಪ್ರಕಾಶ್ ರಾಜ್, “ದಿನಕ್ಕೆ ಕೇವಲ ಎರಡು ಗಂಟೆಗಳ ಕಾಲ ನಿದ್ದೆ ಮಾಡುವುದು ಒಳ್ಳೆಯದಲ್ಲ.

ಅದೊಂದು ರೋಗವಾಗಿರಬಹುದು. ವೈದ್ಯಕೀಯ ಪರಿಭಾಷೆಯಲ್ಲಿ ದಿನಕ್ಕೆ ಎರಡು ಗಂಟೆ ಮಾತ್ರ ನಿದ್ರೆ ಮಾಡುವುದನ್ನು ‘ನಿದ್ರಾಹೀನತೆ’ ಎನ್ನುತ್ತಾರೆ. ಹೀಗಾಗಿ ನಿಮ್ಮ ನಾಯಕರಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸಿ” ಎಂದು ಕೀಳು ಮಟ್ಟದ ವ್ಯಂಗ್ಯವಾಡಿದ್ದರು. ಇನ್ನು ಪ್ರಕಾಶ್ ರಾಜ್ ಅವರ ಈ ಟೀಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. “ಮೋದಿಯವರ ಕೆಲಸವನ್ನು ಟೀಕಿಸಿ, ಆದರೆ ಮೋದಿಯನ್ನಲ್ಲ. ಈ ನಿಮ್ಮ ಟೀಕೆ ನಿಮ್ಮ ಹತಾಶೆ ಮನಸ್ಥಿತಿಯನ್ನು ತೋರಿಸುತ್ತದೆ” ಎಂದು ವಿಶಾಲ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅದೇ ರೀತಿ ಪ್ರಜ್ವಲ್ ಎಂಬುವವರು, “ಪ್ರಕಾಶ್ ರಾಜ್ ಅವರ ಕುರಿತು ಈ ಹಿಂದೆ ಬಿಜೆಪಿಯವರು ವೈಯಕ್ತಿಕ ದಾಳಿ ನಡೆಸಿದಾಗ ‘ನನ್ನ ಮೇಲೆ ವೈಯಕ್ತಿಕ ಟೀಕೆ ಮಾಡುತ್ತಿರುವುದು ಬಿಜೆಪಿಯ ಕೀಳು ಮನಸ್ಥಿತಿಯ ಸಂಕೇತ’ ಎಂದು ಹೇಳಿದ್ದರು. ಆದರೆ ಇದೀಗ ಅವರೇ ಮೋದಿಯವರ ಬಗ್ಗೆ ವೈಯಕ್ತಿಕ ಕೀಳು ಮಟ್ಟದ ಹೇಳಿಕೆ ನೀಡುತ್ತಿದ್ದಾರೆ” ಎಂದಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ‘ಕಾಶ್ಮೀರ್ ಫೈಲ್ಸ್’ ಚಿತ್ರದ ಬಗ್ಗೆಯೂ ವ್ಯಂಗ್ಯವಾಡಿದ್ದ ಪ್ರಕಾಶ್ ರಾಜ್, ‘ಗೋದ್ರಾ ಫೈಲ್ಸ್’ ‘ಡಿಮಾನಿಟೈಸೇಷನ್ ಫೈಲ್ಸ್’ ‘ಜಿಎಸ್‍ಟಿ ಫೈಲ್ಸ್’ ‘ಗಂಗಾ ಫೈಲ್ಸ್’ ‘ದೆಹಲಿ ಫೈಲ್ಸ್’ ಚಿತ್ರಗಳನ್ನು ಯಾವಾಗ ನಿರ್ಮಿಸುತ್ತೀರಿ? ಎಂದಿದ್ದರು.

Exit mobile version