ಕಾರ್ಕಳದಿಂದಲೇ ಸ್ಪರ್ಧೆ: ಪ್ರಮೋದ್‌ ಮುತಾಲಿಕ್ ಅಧಿಕೃತ ಘೋಷಣೆ

Udupi : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ(Karkala) ವಿಧಾನಸಭಾ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ಕ್ಷೇತ್ರವನ್ನು 7-8 ಬಾರಿ ಸುತ್ತಿದ್ದೇನೆ, ಜನರು ನನಗೆ ಬೆಂಬಲ (Pramod Muthalik official announcement) ವ್ಯಕ್ತಪಡಿಸಿದ್ದಾರೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ್‌ ಮುತಾಲಿಕ್ (Pramod Muthalik)ಅಧಿಕೃತ ಘೋಷಣೆ ಮಾಡಿದ್ದಾರೆ.

ಕಾರ್ಕಳದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾವಿರಾರೂ ಹಿಂದು ಕಾರ್ಯಕರ್ತರ ನೋವಿನ ಧ್ವನಿಯಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ.

ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವಂತೆ ಅನೇಕ ಕಾರ್ಯಕರ್ತರು ಒತ್ತಡ ಹೇರಿದ್ದರು. ಹೀಗಾಗಿ ಕಾರ್ಕಳದಿಂದಲೇ ಸ್ಪರ್ಧೆ ಮಾಡಲು ನಿರ್ಧರಿಸಿದ್ದೇನೆ. ಕಾರ್ಕಳದಲ್ಲಿ ಹಿಂದುಗಳಿಗೆ(Hindu) ನೋವಾಗಿದೆ.

ಇಲ್ಲಿಯ ಶಾಸಕರು ಯಾರನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ.

ಹಿಂದುತ್ವ ಮತ್ತು ಭ್ರಷ್ಟಾಚಾರ ಎರಡೂ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ಹೀಗಾಗಿ ಭ್ರಷ್ಟಾಚಾರದ ವಿರುದ್ದ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇವೆ(Pramod Muthalik official announcement) ಎಂದು ಭರವಸೆ ನೀಡಿದರು.

ನಾನು ಬಿಜೆಪಿ(BJP) ಪಕ್ಷ ಮತ್ತು ಬಿಜೆಪಿ ಸಿದ್ದಾಂತದ ವಿರೋಧಿಯಲ್ಲ. ಆದರೆ ಬಿಜೆಪಿ ಪಕ್ಷದಲ್ಲಿರುವ ಕೆಲವರ ತತ್ವ-ಸಿದ್ದಾಂತದ ವಿರೋಧಿ. ನನಗೆ ಬಿಜೆಪಿ ಮಾಡಿದ ಅವಮಾನವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಹಿಂದುತ್ವದ ಕುರಿತು ಬಿಜೆಪಿಗೆ ಪ್ರಾಮಾಣಿಕತೆ ಇದ್ದರೆ, ಕಾರ್ಕಳದಲ್ಲಿ ನನಗೆ ಬೆಂಬಲ ನೀಡಬೇಕು.

ಗುರುವಿಗಾಗಿ ಶಿಷ್ಯ ಸುನೀಲ್‌ ಕುಮಾರ್‌(Sunil Kumar) ಕ್ಷೇತ್ರವನ್ನು ಬಿಟ್ಟು ಕೊಡುತ್ತಾರಾ ಎಂಬುದನ್ನು ಕಾದುನೋಡಬೇಕು ಎಂದರು.

ಇನ್ನು ಸದ್ಯ ಕಾರ್ಕಳ ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಕ್ಷೇತ್ರದಿಂದ ಗೆದ್ದು ಸಚಿವರಾಗಿದ್ದಾರೆ.

ಒಂದು ಕಾಲದಲ್ಲಿ ಸುನೀಲ್‌ ಕುಮಾರ್‌ ಅವರಿಗೆ ಗುರುವಾಗಿದ್ದ ಪ್ರಮೋದ್‌ ಮುತಾಲಿಕ್ ಅವರು ಈ ಕ್ಷೇತ್ರಕ್ಕೆ ಕಾಲಿಟ್ಟಿರುವುದು ಕ್ಷೇತ್ರದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿದೆ.

ಹಿಂದು ಫೈಯರ್‌ ಬ್ರಾಂಡ್‌(Hindu fire brand) ಎಂದೇ ಖ್ಯಾತಿ ಗಳಿಸಿರುವ ಮುತಾಲಿಕ್‌ ಕಾರ್ಕಳದಿಂದ ಸ್ಪರ್ಧೆ ಮಾಡಿದರೆ, ಹಿಂದುಗಳ ಮತ ವಿಭಜನೆಯಾಗುತ್ತದೆ.

ಇದರ ಪ್ರಭಾವ ಸುನೀಲ್‌ ಕುಮಾರ್‌ ಅವರ ಮೇಲಾಗುತ್ತದೆ ಎನ್ನಲಾಗುತ್ತಿದೆ. ಇನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌(Congress) ಪಕ್ಷದ ಗೋಪಾಲ ಭಂಡಾರಿ(Gopal Bhandary) ವಿರುದ್ದ ಕೇವಲ 4254 ಮತಗಳ ಅಂತರದಿಂದ ಗೆದ್ದ ಸುನೀಲ್‌ ಕುಮಾರ್‌ 2018ರಲ್ಲಿ ಮತ್ತೆ ಗೋಪಾಲ್‌ ಭಂಡಾರಿ ಅವರ ವಿರುದ್ದ 42566 ಮತಗಳ ಬೃಹತ್ ಅಂತರದಿಂದ ಗೆದ್ದು ಸಚಿವರಾಗಿದ್ದಾರೆ.

ಸತತ ಎರಡು ಬಾರಿ ಗೆದ್ದಿರುವ ಸುನೀಲ್‌ ಕುಮಾರ್‌ ಅವರಿಗೆ ಈ ಬಾರಿಯ ಸ್ಪರ್ಧೆ ಕಠಿಣವಾಗಲಿದೆ.

Exit mobile version