ಪ್ರತಾಪ್‌ ಸಿಂಹ ಅಲ್ಲ, ತಿಮ್ಮ ಎಂದ ಶಾಸಕ ಎಚ್.ಪಿ.ಮಂಜುನಾಥ್

ಹುಣಸೂರು, ಡಿ. 04: ಮಾದ್ಯಮದ ಮುಂದೆ ಮಾತನಾಡಿದ ಶಾಸಕ ಎಚ್. ಪಿ. ಮಂಜುನಾಥ್ ಅವರು, ಕಳೆದ ಹತ್ತು ತಿಂಗಳಿನಿಂದ ನಿಮ್ಮ ಬಿಜೆಪಿ ಸರಕಾರವೇ ಸತ್ತು ಕೂತಿದೆ. ಏನು ಮಾಡುತ್ತಿದ್ದೀರಾ? ಸಂಸದರೆ ನಿಮ್ಮ ಸಾಧನೆ ಏನೆಂಬುದನ್ನು ಜನತೆ ಮುಂದಿಡಿ, ಎಂದು ಶಾಸಕ ಎಚ್.ಪಿ.ಮಂಜುನಾಥ್ ಅವರು ಸಂಸದ ಪ್ರತಾಪ್ ಸಿಂಹಗೆ ಸವಾಲೆಸೆದರು.

ಹುಣಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಕಿ ಮಾತನಾಡಿದ ಅವರು, ತಮ್ಮ ಹಾಗೂ ಜಿಲ್ಲಾಧಿಕಾರಿ ನಡುವಿನ ವಿವಾದವನ್ನು ಮಂತ್ರಿಗಳು ಮಧ್ಯ ಪ್ರವೇಶಿಸಿ ಬಗೆಹರಿಸಿದ್ದಾರೆ.  ಜಿಲ್ಲಾಧಿಕಾರಿಗಳು ಜನಸ್ಪಂದನ ನಡೆಸಲು ದೊಣ್ಣೆ ನಾಯಕನ ಅಪ್ಪಣೆ ಬೇಕಾ ಎಂದಿದ್ದಾರೆ. ಇದರ ಮರ್ಮವೇನೆಂದು ತಿಳಿಯುತ್ತಿಲ್ಲ ಎಂದಿದ್ದಾರೆ. ಯಾವುದೇ ಸರಕಾರಿ ಕಾರ್ಯಕ್ರಮವನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದು  ನಡೆಸುವುದು ಸಂಪ್ರದಾಯ. ಇದಕ್ಕೆ ವಿರುದ್ದವಾಗಿ ಸರಕಾರ ನಡೆಸುತ್ತೀರಾ? ಎಂದು ಪ್ರಶ್ನಿಸಿದರು.

ಸ್ಥಳಿಯ ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದ್ದಲ್ಲದೆ ಗಂಟೆಗಟ್ಟಲೆ ಕಾಯಿಸಿ ನಂತರ ತರಾತುರಿಯಾಗಿ ಬಂದು ಪೂಜೆ ಮಾಡಿದ್ದಲ್ಲದೆ ಶಾಸಕರನ್ನೂ ಆಹ್ವಾನಿಸಿಲ್ಲ. ಮೈಸೂರು ನಗರದಲ್ಲಿ ಎಲ್ಲರನ್ನೂ ಆಹ್ವಾನಿಸುವ‌ ಮೂಲಕ ತಮಗೆ ಅವಮಾನಿಸಿದಂತಾಗಿಲ್ಲವೇ ಎಂದು ಪ್ರಶ್ನಿಸಿದರು.

ನನ್ನ ಸಾಧನೆ ಬಗ್ಗೆ ಪ್ರಶ್ನಿಸುವ‌ ಸಂಸದರು, ಟಿವಿ ಮಾಧ್ಯಮ ಕಂಡಕೂಡಲೇ ಬಡಬಡಾಯಿಸವ ಬದಲು ತಂಬಾಕು ಬೆಳೆಗಾರರ ನೆರವಿಗೆ ನಿಲ್ಲಲಿ ಎಂದರು.

ಉಪ ಚುನಾವಣೆಯಲ್ಲಿ ಗೆದ್ದ ನಂತರ ರಾಜ್ಯಕ್ಕೆ ಮಾದರಿಯಾದ ಗ್ರಾಮದೆಡೆಗೆ ಸರಕಾರದ ನಡಿಗೆ ಕಾರ್ಯಕ್ರಮ ಮಾಡಿ ಬಡವರ ಸಮಸ್ಯೆಗೆ ಸ್ಪಂದಿಸಿದ್ದೇನೆ. ನಂತರ ಕೋವಿಡ್ ದಿಂದ ಸ್ಥಗಿತಗೊಂಡಿದೆ. ಮತ್ತೆ ಅವಕಾಶ ಕೊಟ್ಟರೆ ಮತ್ತೆ ಮಾಡುತ್ತೇನೆ ಎಂದು  ಖಾರವಾಗಿ ಹೇಳಿದರು .

Exit mobile version