ನಿಮ್ಮ ಮೊಬೈಲ್ ಬಳಸಿ, ಬಳಸಿ ಬ್ಯಾಟರಿ ಹಾಳಾಗಿದೀಯಾ? ಹಾಗಾದ್ರೆ ಹಾಳಾಗದಂತೆ ಎಚ್ಚರಿಕೆ ವಹಿಸುವುದು ಹೇಗೆ?

ಮೊಬೈಲ್ ಬ್ಯಾಟರಿಯನ್ನು (Moblie Battery) ಫುಲ್​ ಚಾರ್ಜ್ ಮಾಡುವುದು (precaution for moblie battery) ಒಳ್ಳೆಯದಲ್ಲ. ಅದೇ ರೀತಿ ಬ್ಯಾಟರಿ ಕಡಿಮೆ ಆದಾಗಲೂ ಬ್ಯಾಟರಿ ಮೇಲೆ

ಒತ್ತಡ ಬೀಳುತ್ತದೆ. ಹಾಗಾಗಿ ಮೊಬೈಲ್​ 20 ಪ್ರತಿಶತ ಚಾರ್ಜ್​ಗೆ ಬರುತ್ತಿದ್ದಂತೆಯೇ 80 ಪ್ರತಿಶತ ಚಾರ್ಜ್​ (Charge) ಆಗುವವರೆಗೆ ಚಾರ್ಜ್ ಮಾಡಬೇಕು ಹೀಗೆ ಮಾಡಿದರೆ ಬ್ಯಾಟರಿ ದೀರ್ಘ

ಕಾಲದವರೆಗೆ (precaution for moblie battery) ಉಪಯೋಗಕ್ಕೆ ಬರುತ್ತದೆ.

ಮಾರುಕಟ್ಟೆಯಲ್ಲಿ ಇಂದು 5000mAh ನಿಂದ 7000mAh ವರೆಗಿನ ಬ್ಯಾಟರಿಯ ಸ್ಮಾರ್ಟ್​ಫೋನ್​ಗಳು (Smartphone) ಲಭ್ಯವಿದ್ದು,ದೀರ್ಘ ಸಮಯ ಚಾರ್ಜ್ ಬರುತ್ತದೆ. ಆದರೆ, ಈ ಬ್ಯಾಟರಿಯನ್ನು

ಜೋಪಾನವಾಗಿ ಕಾಪಾಡಿಕೊಳ್ಳದಿದ್ದರೆ ಕೆಲವೇ ತಿಂಗಳುಗಳಲ್ಲಿ ಹಾಳಾಗುವ ಸಾಧ್ಯತೆ ಇರುತ್ತದೆ.

ಇತ್ತೀಚೆಗೆ ಬಿಡುಗಡೆಯಾಗುವ ಹೆಚ್ಚಿನ ಸ್ಮಾರ್ಟ್​ಫೋನ್​ಗಳು ಫಾಸ್ಟ್ ಚಾರ್ಜರ್ (Fast charger) ಟೆಕ್ನಾಲಜಿ ಹೊಂದಿದ್ದು, ಇದರಿಂದ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಫುಲ್ ಆಗುತ್ತೆ. ಆದರೆ

ಇದನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಅಷ್ಟೇ ವೇಗವಾಗಿ ಬ್ಯಾಟರಿಕೆಟ್ಟು ಹೋಗುತ್ತದೆ. ಹಾಗಾದರೆ ಸ್ಮಾರ್ಟ್​ಫೋನ್ ಬ್ಯಾಟರಿ ದೀರ್ಘ ಕಾಲದವರೆಗೆ ಬಾಳಿಕೆ ಬರಲು ಏನು ಮಾಡಬೇಕು?.

೧. ಆಯಾ ಮೊಬೈಲ್​​ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ (Phone) ಅನ್ನು ಚಾರ್ಜ್ ಮಾಡಬೇಕು. ಸದ್ಯ ಎಲ್ಲ ಮೊಬೈಲ್​​ಗಳು ಯುಎಸ್‌ಬಿ ಕೇಬಲ್ ನಿಂದಲೇ ಚಾರ್ಜ್ ಆಗಲಿದ್ದು,

ಹಾಗೆಂದು ಅದನ್ನು ಕಂಪ್ಯೂಟರ್​​ಗೆ ಹಾಕಿ ಇಲ್ಲವೇ ಬೇರೆ ಕಂಪನಿಗಳ ಚಾರ್ಜರ್ ಬಳಸಿ ಚಾರ್ಜ್ ಮಾಡಿದರೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಕಂಪನಿ ನೀಡಿರುವ ಚಾರ್ಜರ್ ನಿಂದಲೇ ಚಾರ್ಜ್ ಮಾಡಿ.

ಆಗ ಬ್ಯಾಟರಿ (Battery) ಕೂಡ ದೀರ್ಘ ಕಾಲದ ವರೆಗೆ ಬಾಳಿಕೆ ಬರುತ್ತದೆ.

೨. ಬ್ಯಾಟರಿಯ ಮೇಲೆ, ಮೊಬೈಲ್​ ಓವರ್​ಹೀಟ್​ (Overheat) ಮಾಡುವುದು ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ರ್ಯಾಮ್ ಕಡಿಮೆ ಇದ್ದಾಗ ಅತಿಯಾಗಿ ಗೇಮ್​ ಆಡಿದರೆ ಮೊಬೈಲ್​ ಹೀಟ್​ ಆಗುತ್ತದೆ.

ಆಗ ಗೇಮ್ (Game) ಆಡುವುದನ್ನು ನಿಲ್ಲಿಸಿ. ಮೊಬೈಲ್​ ಕೂಲ್​ ಆಗುವವರೆಗೂ ಬಳಕೆ ಮಾಡಬೇಡಿ

೩. ಕಾರು ಅಥವಾ ಬೈಕುಗಳಲ್ಲಿರುವ ಚಾರ್ಜರ್‌ಗಳ ಮೂಲಕವೂ ಫೋನ್ ಬ್ಯಾಟರಿ ರೀಚಾರ್ಜ್ (Recharge) ಮಾಡುವ ಅಭ್ಯಾಸವನ್ನು ಸಾಧ್ಯವಾದಷ್ಟು ತಪ್ಪಿಸಬೇಕು.ಇಲ್ಲವಾದರೆ ಅದರಿಂದ ಬರುವ

ಅಧಿಕ ಪ್ರಮಾಣದ ವಿದ್ಯುತ್ ಪ್ರವಾಹವು ಫೋನ್‌ನ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ.

೪. ಸುಮಾರು ಜನರು ರಾತ್ರಿ ಮಲಗುವಾಗ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿ ರಾತ್ರಿ ಇಡೀ ಬಿಟ್ಟಿರುತ್ತಾರೆ. ಈ ರೀತಿ ಮಾಡುವುದು ಅಪಾಯಕಾರಿಯಾಗಿದ್ದು, ಇದರಿಂದ ಬ್ಯಾಟರಿಯು ದೀರ್ಘಕಾಲ ಬಾಳಿಕೆ

ಬರುವುದಿಲ್ಲ. ಅತಿಯಾಗಿ ಚಾರ್ಜ್ ಮಾಡುವುದೂ ಬೇಡ. ಶೇ 90 ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ (Charger Off) ಮಾಡಬೇಕು.

೫. ಮೊಬೈಲ್​ 20 ಪ್ರತಿಶತ ಚಾರ್ಜ್​ಗೆ ಬರುತ್ತಿದ್ದಂತೆಯೇ 80 ಪ್ರತಿಶತ ಚಾರ್ಜ್​ ಆಗುವವರೆಗೆ ಚಾರ್ಜ್ ಮಾಡಿ. ಹೀಗೆ ಮಾಡಿದರೆ ಬ್ಯಾಟರಿ ದೀರ್ಘ ಕಾಲದವರೆಗೆ ಉಪಯೋಗಕ್ಕೆ ಬರುತ್ತದೆ.

೬. ವೈಫೈ(Wi-Fi) , ಬ್ಲ್ಯೂಟೂತ್ (Bluetooth) ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ

ಮೊಬೈಲ್‌ ಬ್ಯಾಟರಿ ಬಹಲ್ ದಿನಗಳ ಕಾಲ ಬಾಳಿಕೆ ಬರುತ್ತದೆ.

ಇದನ್ನು ಓದಿ: ವರ್ತೂರು ಸಂತೋಷ್ ಧರಿಸಿದ್ದ ಹುಲಿ ಉಗುರು FSL ವರದಿಯಲ್ಲಿ ಖಚಿತವಾದರೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾದ್ಯತೆ.

Exit mobile version