ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ : ಕನ್ನಡಿಗರಿಗೆ ಅವಕಾಶ?

President

ಜುಲೈ 18ಕ್ಕೆ ರಾಷ್ಟ್ರಪತಿ ಚುನಾವಣೆ(President Election) ನಡೆಯಲಿದೆ. ಬಿಜೆಪಿ(BJP) ಬೆಂಬಲಿತ ಅಭ್ಯರ್ಥಿ ರಾಷ್ಟ್ರಪತಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಬಿಜೆಪಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂಬುದರತ್ತ ಎಲ್ಲರ ಚಿತ್ತ ನೆಟ್ಟಿದೆ.

ಮೂಲಗಳ ಪ್ರಕಾರ ಬಿಜೆಪಿ ಅಚ್ಚರಿ ಅಭ್ಯರ್ಥಿ ಆಯ್ಕೆಗೆ ಮುಂದಾಗಿದೆ. ರಾಜಕೀಯ ಕ್ಷೇತ್ರದ ಹೊರತಾದ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಲು ಬಿಜೆಪಿ ಯೋಜಿಸಿದೆ. ಹೀಗಾಗಿ ಬಿಜೆಪಿಯ ಒಂದು ತಂಡ ಅಭ್ಯರ್ಥಿಗಳ ಹುಡುಕಾಟ ನಡೆಸಿದ್ದು, ಕರ್ನಾಟಕದ ಇಬ್ಬರು ವ್ಯಕ್ತಿಗಳ ಹೆಸರುಗಳು ಬಿಜೆಪಿ ವಲಯದಲ್ಲಿ ಹರಿದಾಡುತ್ತಿವೆ. ಕರ್ನಾಟಕದ ಸುಧಾಮೂರ್ತಿ(Sudhamurthy) ಮತ್ತು ವಿರೇಂದ್ರ ಹೆಗಡೆ(Veerendra Hegde) ಅವರ ಹೆಸರುಗಳು ರಾಷ್ಟ್ರಪತಿ ರೇಸ್‍ನಲ್ಲಿ ಪ್ರಬಲವಾಗಿ ಕೇಳಿ ಬರುತ್ತಿವೆ. ಈ ಇಬ್ಬರು ವ್ಯಕ್ತಿಗಳು ಉತ್ತಮ ಇಮೇಜ್ ಹೊಂದಿದ್ದು, ಸಮಾಜಸೇವೆಯಲ್ಲಿ ಉತ್ತಮ ಹೆಸರು ಮಾಡಿದ್ದಾರೆ.

ಇಬ್ಬರಿಗೂ ಉತ್ತಮ ಭಾಷಾಜ್ಞಾನ, ಆಡಳಿತ ಜ್ಞಾನ ಮತ್ತು ನಿಷ್ಕಕಳಂಕ ಚಾರಿತ್ರ್ಯ ಹೊಂದಿದ್ದಾರೆ. ಹೀಗಾಗಿ ಅವರನ್ನು ರಾಷ್ಟ್ರಪತಿ ಮಾಡಿದರೆ ಪಕ್ಷದ ಇಮೇಜ್ ಹೆಚ್ಚಾಗಲಿದೆ ಎಂಬುದು ಬಿಜೆಪಿಯ ಒಂದು ವಲಯದ ಲೆಕ್ಕಾಚಾರ. ಇನ್ನೊಂದೆಡೆ ಪಕ್ಷದಲ್ಲಿನ ಕೆಲವು ಹಿರಿಯರನ್ನು ರಾಷ್ಟ್ರಪತಿ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ವೆಂಕಯ್ಯ ನಾಯ್ಡು, ಆನಂದಿಬೆನ್ ಪಟೇಲ್, ಸುಮಿತ್ರಾ ಮಹಾಜನ್, ಆರಿಫ್ ಮೊಹಮ್ಮದ್ ಖಾನ್, ತಮಿಳಿಸೈ ಸೌಂದರರಾಜನ್, ಮುಖ್ತಾರ್ ಅಬ್ಬಾಸ್ ನಖ್ವಿ, ದ್ರೌಪದಿ ಮುರ್ಮ ಅವರ ಆಯ್ಕೆ ಸಂಬಂಧ ಚರ್ಚೆ ನಡೆದಿದೆ.


ಇನ್ನು ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಮತ ಏಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ ತಿಳಿಸಿದ್ದಾರೆ. ಲೋಕಸಭೆಯ ಸದಸ್ಯರು, ರಾಜ್ಯಸಭಾ ಸದಸ್ಯರು, ದೆಹಲಿ, ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಸದಸ್ಯರು, ಎಲ್ಲ ರಾಜ್ಯಗಳ ವಿಧಾನಸಭಾ ಸದಸ್ಯರು ಸೇರಿ ಒಟ್ಟು 4809 ಸದಸ್ಯರು ಮತದಾನ ಮಾಡಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.

Exit mobile version