ಒಲಿಂಪಿಕ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳ ಜೊತೆ ಐಸ್ ಕ್ರೀಮ್ ಸವಿದ ಪ್ರಧಾನಿ

ನವದೆಹಲಿ, ಆ. 16: ಭಾರತೀಯ ಕ್ರೀಡಾ ಪಟುಗಳು ಒಲಿಂಪಿಕ್ ಗೆ ತೆರಳುವ ಮುನ್ನ ಮೋದಿ ಅವರಿಗೆ ಶುಭಾಶಯ ಕೋರಿದ್ದರು ಜೊತಗೆ ಟೋಕಿಯೋದಿಂದ ಬಂದ ಮೇಲೆ ಒಟ್ಟಾಗಿ ಐಸ್ ಕ್ರೀಮ್ ತಿನ್ನುವುದಾಗಿ ಹೇಳೀದ್ದರು. ಈದೀಗ ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಮಾತಿನಂತೆ ಅವರ ತಮ್ಮ ನಿವಾಸದಲ್ಲಿ ಪಿ.ವಿ. ಸಿಂಧು ಅವರೊಂದಿಗೆ ಐಸ್ ಕ್ರೀಮ್ ಸವಿದು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ..

ಕಳೆದ ತಿಂಗಳ ಜುಲೈನಲ್ಲಿ ಒಲಂಪಿಕ್ಸ್​ಗೆ ಟೋಕಿಯೋಗೆ ಹೋಗುವ ಮುನ್ನ ಸ್ಪರ್ಥಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ನಡೆಸಿ ಮಾತನಾಡಿದ್ದರು. ಈ ವೇಳೆ ಅವರಿಗೆ ಸ್ಪರ್ಧಾಳುಗಳಿಗೆ ಹುರುದುಂಬಿಸಿದ್ದ ಪ್ರಧಾನಿ  ಮೋದಿ ಅವರ ಕಠಿಣ ಅಭ್ಯಾಸದ ಕುರಿತು ಮಾತನಾಡಿದ್ದರು. ಈ ವೇಳೆ ಮಾತನ್ನು ಆಡಿದ್ದ ಪಿವಿ ಸಿಂಧು, ಪದಕ ಗೆಲ್ಲುವ ವಿಶ್ವಾಸದಿಂದ ಕಠಿಣ ಅಭ್ಯಾಸ ಮಾಡುತ್ತಿದ್ದು, ತಮಗಿಷ್ಟವಾದ ಐಸ್ ​ಕ್ರೀಂ ಅನ್ನು ಡಯಟ್​ ದೃಷ್ಟಿಯಿಂದ ತ್ಯಜಿಸಿರುವುದಾಗಿ ತಿಳಿಸಿದ್ದರು. ಇದರಿಂದ ತಮಗಿಷ್ಟವಾದ ಐಸ್​ಕ್ರೀಂ ಅನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದರು ಈ ವೇಳೆ ಮಾತನಾಡಿದ ಪ್ರಧಾನಿಗಳು ಒಲಂಪಿಕ್ಸ್​ನಲ್ಲಿ ಪದಕ ಗೆದ್ದು ಬಂದ ಬಳಿಕ ನಿಮ್ಮೊಟ್ಟಿಗೆ ನಾನು ಐಸ್​ಕ್ರೀಂ ತಿನ್ನುತ್ತೇನೆ ಎಂದು ಭರವಸೆ ನೀಡಿದ್ದರು.

ನಮ್ಮ ದೇಶಕ್ಕೆ ಹೆಮ್ಮೆ ತಂದಿರುವ ಅಥ್ಲೀಟ್​ಗಳು ಇಂದು ನಮ್ಮೊಂದಿಗೆ ಇದ್ದಾರೆ. ಒಂದು ಕಾಲದಲ್ಲಿ ಕ್ರೀಡೆಯನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಯಾವಾಗಲೂ ಆಟವಾಡುತ್ತಿದ್ದರೆ ಅದು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಪೋಷಕರು ಸದಾ ಬೈಯುತ್ತಿದ್ದರು. ಆದರೀಗ ಕ್ರೀಡೆ ಮತ್ತು ಫಿಟ್​ನೆಸ್ ಬಗ್ಗೆ ಜನರ ಅಭಿಪ್ರಾಯಗಳು ಬದಲಾಗಿವೆ. ಆ ಕಾರಣದಿಂದಲೇ ಭಾರತ ಈ ಬಾರಿ ಒಲಿಂಪಿಕ್ಸ್​ನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಕ್ರೀಡಾಪಟುಗಳು ಪದಕ ಗೆದ್ದು ನಮ್ಮ ಹೃದಯ ಗೆದ್ದಿದ್ದು ಮಾತ್ರವಲ್ಲದೆ ಮುಂದಿನ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ ಎಂದು ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವೇಳೆ ಚಿನ್ನದ ಪದಕ ವಿಜೇತರಾದ ನೀರಜ್ ಚೋಪ್ರಾ ಅವರೊಂದಿಗೆ ವಿಶೇಷ ಮಾತುಕತೆ ನಡೆಸಿದ್ದಾರೆ.

Exit mobile version