ಅಂಡಮಾನ್‌ ಜೈಲಿನಲ್ಲಿ ಸಾವರ್ಕರ್ ಹೊರತುಪಡಿಸಿ ಉಳಿದ ಎಲ್ಲಾ ಖೈದಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದರು : ಪ್ರಿಯಾಂಕ್‌ ಖರ್ಗೆ

Priyank Kharghe

ಅಂಡಮಾನ್ ಜೈಲಿನಲ್ಲಿ(Andaman Jail) ಸಾವರ್ಕರ್(Veera Savarkar) ಜೊತೆಗೆ ಕಾಲಾಪಾನಿ ಶಿಕ್ಷೆಗೊಳಗಾದ 700ಕ್ಕೂ ಹೆಚ್ಚು ಖೈದಿಗಳಿದ್ದರು. ಬ್ರಿಟಿಷರಿಗೆ(British) ಆಪ್ತವಾಗಿದ್ದ ಸಾವರ್ಕರ್ ಹೊರತುಪಡಿಸಿ ಉಳಿದ ಎಲ್ಲಾ ಖೈದಿಗಳಿಗೆ ಕಠಿಣ ಶಿಕ್ಷೆಯನ್ನು ನೀಡುತ್ತಿದ್ದರು.

ಹೀಗಿದ್ದರೂ, ಬ್ರಿಟಿಷರಿಗೆ ಅತಿ ಹೆಚ್ಚು ಬಾರಿ ಕ್ಷಮಾಪಣೆ ಪತ್ರ ಬರೆದಿದ್ದು ಸಾವರ್ಕರ್ ಮಾತ್ರ, ಸಾವರ್ಕರ್ ಬ್ರಿಟನ್ನಲ್ಲಿದ್ದಾಗ ಪ್ರತೀಕಾರದ ಕಾರಣಕ್ಕೆ ಜಾಕ್ಸನ್ ಎಂಬ ಬ್ರಿಟಿಷ್ ಅಧಿಕಾರಿಯ ಹತ್ಯೆ ನಡೆಯುತ್ತದೆ. ಈ ಪ್ರಕರಣದಲ್ಲಿ ಬಂಧಿತರಾದಾಗ ವಿಚಾರಣೆ ಎದುರಿಸಲು ಭಾರತಕ್ಕೆ ಬರಲು ಅವರು ನಿರಾಕರಿಸುತ್ತಾರೆ.

ಬಿಜೆಪಿಯವರು ಹೇಳುವಂತೆ ಸಾವರ್ಕರ್ ಸ್ವಾತಂತ್ರ್ಯ ಸೇನಾನಿಯಾಗಿದ್ದರೆ ಭಾರತಕ್ಕೆ ಬರಲು ನಿರಾಕರಿಸಿದ್ದೇಕೆ? ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ(Priyank Kharghe) ಪ್ರಶ್ನಿಸಿದ್ದಾರೆ. ಸಾವರ್ಕರ್‌ ಕುರಿತು ಸರಣಿ ಟ್ವೀಟ್‌(Tweet) ಮಾಡಿರುವ ಅವರು, ಸಾರ್ವಕರ್ ಅವರ ವಿಚಾರಗಳನ್ನು ಸಮರ್ಥಿಸಿಕೊಳ್ಳುತ್ತಿರುವ, ಅವರನ್ನು ಸ್ವಾತಂತ್ರ್ಯ ಸೇನಾನಿ,

ಇದನ್ನೂ ಓದಿ : https://vijayatimes.com/complete-study-report-on-madrasas/

ಹಿಂದುತ್ವದ ಪಿತಾಮಹ ಎಂದು ಬಿಂಬಿಸುತ್ತಿರುವ ಬಿಜೆಪಿ(BJP) ಈ ಪಂಚ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದೇ? ಎಂದು ಪಂಚ ಪ್ರಶ್ನೆಗಳನ್ನು ಕೇಳಿದ್ದಾರೆ. ದೇಶ ವಿಭಜನೆಗೆ ನೆಹರೂ-ಗಾಂಧಿ ಕಾರಣ ಎನ್ನುವ ಬಿಜೆಪಿಗರು, ಇತಿಹಾಸ ಓದಲಿ. ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದೇ ಸಾವರ್ಕರ್.

‘ಜಿನ್ನಾ ಅವರ ದೇಶ ವಿಭಜನೆಯ ಅಭಿಪ್ರಾಯವನ್ನು ನಾನು ಸಂಪೂರ್ಣ ಒಪ್ಪುತ್ತೇನೆ’ ಎಂದಿದ್ದರು ಸಾವರ್ಕರ್. ಪ್ರತ್ಯೇಕ ಸಿಖ್ ದೇಶದ ಬೇಡಿಕೆಗೂ ಅವರ ಬೆಂಬಲವಿತ್ತು. ‘ಹಸು ಗೋಮಾತೆ ಅಲ್ಲ, ಅದು ಕೇವಲ ಉಪಯುಕ್ತ ಪ್ರಾಣಿ. ಹಿಂದುತ್ವ ಗೋವಿನ ನಾಲ್ಕು ಕಾಲುಗಳ ಮೇಲೆ ನಿಂತಿಲ್ಲ’ ಎಂದಿದ್ದರು ಸಾವರ್ಕರ್ ಈಗ ಬಿಜೆಪಿಯವರು,

ಗೋಹತ್ಯಾ ನಿಷೇದ ಕಾಯ್ದೆ ಹಿಂಪಡೆಯುತ್ತಾರಾ? ಗೋಮೂತ್ರ ಕುಡಿಯುವುದನ್ನು ನಿಲ್ಲಿಸುತ್ತಾರಾ? ಗೋ ರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ ನಿಲ್ಲಿಸುತ್ತಾರಾ? ಎಂದು ಪ್ರಶ್ನಿಸಿದ್ದಾರೆ. ಇಡೀ ದೇಶ ‘ಸಂಪೂರ್ಣ ಸ್ವರಾಜ್ಯ’ಕ್ಕೆ ಅಗ್ರಹಿಸುತ್ತಿದ್ದಾಗ ಸಾರ್ವಕರ್ ಹಿಂದೂ ಮಹಾಸಭಾ ಮೂಲಕ ಬ್ರಿಟೀಷರಿಗೆ ಬೆಂಬಲ ನೀಡಿದ್ದು ಯಾಕೆ?

ಸಾವರ್ಕರ್ ಅವರು ಕ್ವಿಟ್ ಇಂಡಿಯಾ(Quit India) ಚಳುವಳಿಗೆ ಸಹಕಾರ ನೀಡಲಿಲ್ಲ ಯಾಕೆ? ದೇಶದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಲೀಗ್ ಜೊತೆ ಸರ್ಕಾರ ಮಾಡಿದ್ದು ಯಾಕೆ? ಮಹಾತ್ಮ ಗಾಂಧಿ ಅವರೇ ಸಾರ್ವಕರ್ ಅವರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ತಿಳಿಸಿದ್ದರು ಎಂಬ ಬಿಜೆಪಿಗರ ವಾದ ಶುದ್ಧ ಸುಳ್ಳು.

ಇದನ್ನೂ ಓದಿ : https://vijayatimes.com/narendra-rai-darle-rejects-the-position/

ಗಾಂಧೀಜಿ ಅವರೇ ತಮ್ಮ ಲೇಖನದಲ್ಲಿ, ‘ಸಾರ್ವಕರ್ ಅವರು ಇನ್ನು ಮುಂದೆ ಬ್ರಿಟೀಷರ ವಿರುದ್ಧ ಯಾವುದೇ ಹೋರಾಟ ಮಾಡುವುದಿಲ್ಲ, ಅವರು ಬ್ರಿಟೀಷರ ಪರವಾಗಿ ಕೆಲಸ ಮಾಡಲು ಬಯಸಿದ್ದಾರೆ’ ಎಂದು ಬರೆದಿದ್ದರು ಎಂದಿದ್ದಾರೆ. ಬಿಜೆಪಿಯವರು, ಸಾವರ್ಕರ್ ಅವರ ಸೇವೆ ದೇಶಕ್ಕೆ ಅಗತ್ಯ ಇದ್ದಿದ್ದರಿಂದ ಕ್ಷಮಾಪಣೆ ಪತ್ರ ಬರೆದರೆಂದು ಹೇಳುತ್ತಾರೆ.

ಹಾಗಾದರೆ ಉಳಿದವರೇಕೆ ಬರೆಯಲಿಲ್ಲ? ಭಗತ್ ಸಿಂಗ್(Bhagat Singh) ಅವರ ತಂದೆಯವರೇ ಕ್ಷಮಾಪಣಾ ಪತ್ರ ಬರೆಯಲು ಹೇಳಿದರೂ ನಿರಾಕರಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಹಾಗಾದರೆ ಇವರಲ್ಲಿ ಯಾರು ನಿಜವಾದ ದೇಶಪ್ರೇಮಿ? ಎಂದು ಪ್ರಶ್ನಿಸಿದ್ದಾರೆ.

Exit mobile version