ಹರಿಯಾಣ, ಯುಪಿಗೆ ಭರ್ಜರಿ ಗೆಲುವು!

kabbadi

ಬೆಂಗಳೂರಿನ ವೈಟ್ ಫೀಲ್ಡ್ ಶೆರ್ಟಾನ್ ಗ್ರ್ಯಾಂಡ್ ಹೋಟೆಲ್ನಲ್ಲಿ ನಡೆದ ಪ್ರೊ ಕಬಡ್ಡಿ ಲೀಗ್ನ 108ನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್ ತಂಡವು ಹರಿಯಾಣ ಸ್ಟೀಲರ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಪಂದ್ಯದ ಮೊದಲಾರ್ಧದಲ್ಲಿ ಪುಣೇರಿ ಪಲ್ಟನ್ಸ್ ಬರೋಬ್ಬರಿ 26 ಪಾಯಿಂಟ್ಸ್ ಕಲೆಹಾಕಿದ್ರೆ, ಹರಿಯಾಣ ಸ್ಟೀಲರ್ಸ್ ಕೇವಲ 7 ಪಾಯಿಂಟ್ಸ್ ಕಲೆಹಾಕಿ ಹಿನ್ನಡೆ ಕಂಡಿತು. ಎರಡನೇ ಹಂತದಲ್ಲಿ ಸ್ವಲ್ಪ ಹೋರಾಟ ಪ್ರದರ್ಶಿಸಿದ ಹರಿಯಾಣ ಸ್ಟೀಲರ್ಸ್ 20 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರೆ, ಪುಣೇರಿ ಪಲ್ಟನ್ 19 ಪಾಯಿಂಟ್ಸ್ ಗೆದ್ದು ಬೀಗಿತು.

ಅಂತಿಮವಾಗಿ ಪುಣೇರಿ ಪಲ್ಟನ್ 45-27 ಅಂತರದಲ್ಲಿ ಪಂದ್ಯ ಗೆದ್ದು ಬೀಗಿತು. ಪುಣೇರಿ ಪಲ್ಟನ್ ಪರ ಉತ್ತಮ ರೈಡಿಂಗ್ ಮಾಡಿದ ಮೋಹಿತ್ ಗೋಯತ್ 12 ಪಾಯಿಂಟ್ಸ್ಗಳಿಸಿದ್ರು. ಅಸ್ಲಾಂ ಇನಾಮ್ದಾರ್ 8 ಪಾಯಿಂಟ್ಸ್ ತನ್ನದಾಗಿಸಿಕೊಂಡ್ರು. ಇನ್ನು ಹರಿಯಾಣ ಸ್ಟೀಲರ್ಸ್ ಪರ ಆಶಿಶ್ 8 ಪಾಯಿಂಟ್ಸ್ ಕಲೆಹಾಕುವ ಮೂಲಕ ಮಿಂಚಿನ ಆಟ ನಿರ್ವಹಿಸಿದರು. ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ದ ಯುಪಿ ಯೋಧಾ ಮುಖಾಮುಖಿಯಾದವು. ಮೊದಲಾರ್ಧದಲ್ಲಿ ಉಭಯ ತಂಡಗಳು 19-18 ಪಾಯಿಂಟ್ಸ್ ಮೂಲಕ ಸಮಬಲ ಸಾಧಿಸಿದವು. ದ್ವಿತಿಯಾರ್ಧದಲ್ಲಿ ಮೇಲುಗೈ ಸಾಧಿಸಿದ ಯುಪಿ ಯೋಧಾ 23 ಪಾಯಿಂಟ್ಸ್ ಗಳಿಸಿದರೆ, ಜೈಪುರ ಪಿಂಕ್ ಪ್ಯಾಂಥರ್ಸ್ 15 ಪಾಯಿಂಟ್ಸ್ ಪಡೆಯಿತು.

ಅಂತಿಮವಾಗಿ ಯುಪಿ ಯೋಧಾ 41-34 ಪಾಯಿಂಟ್ಸ್ ಅಂತರದಲ್ಲಿ ಗೆಲುವು ಸಾಧಿಸಿತು. ಈ ಪಂದ್ಯದ ಫಲಿತಾಂಶದ ಬಳಿಕವೂ ಪಾಟ್ನಾ ಪೈರೇಟ್ಸ್ ಟೇಬಲ್ ಟಾಪರ್ ಆಗಿಯೇ ಉಳಿದಿದ್ದು, 18 ಪಂದ್ಯಗಳಲ್ಲಿ 13 ಜಯಗಳಿಂದ ಒಟ್ಟು 70 ಪಾಯಿಂಟ್ಸ್ ಕಲೆಹಾಕಿದೆ. ಎರಡನೇ ಸ್ಥಾನದಲ್ಲಿ ದಬಾಂಗ್ ಡೆಲ್ಲಿ 60 ಪಾಯಿಂಟ್ಸ್ನಿಂದ ಜಿಗಿತ ಕಂಡಿದ್ದು. ಹರಿಯಾಣ ಸ್ಟೀಲರ್ಸ್ 58 ಪಾಯಿಂಟ್ಸ್ ಮೂಲಕ ಮೂರನೇ ಸ್ಥಾನಕ್ಕೆ ಕುಸಿದಿದೆ.

Exit mobile version