ಆರ್​ಟಿಇ ಶಿಕ್ಷಣದಿಂದ ವಂಚಿತರಾದ ಬಡ ಮಕ್ಕಳು: ಬೆಳಗಾವಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ

Bengaluru: ಬೆಂಗಳೂರಿನಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಮಕ್ಕಳ ದಾಖಲಾತಿ (Protest in BGM Suvarna Soudha) ಅಂತೂ ದೂರದ ಮಾತಾಗಿದ್ದು, ಆರ್​ಟಿಇ (RTE) ಕಾಯ್ದೆಯಡಿಯಲ್ಲಿ

ಖಾಸಗಿ ಶಾಲೆಗಳಿಗೆ ದಾಖಲಾತಿ ನೀಡಲಾಗುತಿತ್ತು. ಆದರೆ ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಬಳಿಕ ಆರ್​ಟಿಇ ಶಿಕ್ಷಣದಿಂದ ಬಡ ಮಕ್ಕಳು ವಂಚಿತರಾಗಿದ್ದು, ಆರ್​ಟಿಇ ಕಾಯ್ದೆಯ ಮರು ತಿದ್ದುಪಡಿಗೆ

ಆಗ್ರಹಿಸಿ ಬೆಳಗಾವಿ ಸುವರ್ಣ ಸೌಧದ (Suvarna Soudha) ಎದುರು (Protest in BGM Suvarna Soudha) ಪ್ರತಿಭಟನೆ ನಡೆದಿದೆ.

ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ (Kumaraswamy) 2019 ರಲ್ಲಿ ಸಿಎಂ ಆದ ವೇಳೆ ಶಿಕ್ಷಣ ಕಾಯ್ದೆಗೆ ತಂದ ತಿದ್ದುಪಡಿಯಿಂದ ಬೆಂಗಳೂರಿನಲ್ಲಿ ಆರ್​ಟಿಇ ಕೇವಲ ಬೆರಳೆಣೆಕೆಯಷ್ಟು

ವಾರ್ಡ್​ಗಳಲ್ಲಿ ಮಾತ್ರ ಸಿಮೀತವಾಗಿದೆ. ಆರ್​ಟಿಇ ಅಡಿಯಲ್ಲಿ ಲಕ್ಷಾಂತರ ಬಡ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಬೇಕು ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಆಸೆ

ಇಟ್ಟುಕೊಂಡಿರುತ್ತಾರೆ. ಅದರಲ್ಲೂ ಸರ್ಕಾರಿ ಶಾಲೆಗಳು ಇಲ್ಲದ ವಾರ್ಡ್ ಗಳಲ್ಲಿ ಮಕ್ಕಳಿಗೆ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಪೋಷಕರ ಕನಸಿಗೆ ಎಳ್ಳು ನೀರು ಬಿಡುವಂತಾಗಿದೆ.

ಸಾವಿರಾರು ಮಕ್ಕಳು ಶಾಲೆಯಿಂದ ಹೊರಗಡೆ ಉಳಿಯುವಂತಾಗಿದ್ದು, ಹೀಗಾಗಿ ರಾಜ್ಯದಲ್ಲಿ ಆರ್​ಟಿಇ ಕಾಯ್ದೆಗೆ ಮರು ತಿದ್ದುಪಡಿಗೆ ಎಲ್ಲೆಡೆ ಒತ್ತಾಯ ಶುರುವಾಗಿದೆ. ಖಾಸಗಿ ಶಾಲೆಗಳು ರಾಜ್ಯದಲ್ಲಿ

ಆರ್​ಟಿಇ ಮರು ಜಾರಿಗೆ ಒತ್ತಾಯ ಶುರುಮಾಡಿ ಪ್ರತಿಭಟನೆಗೆ ಮುಂದಾಗಿವೆ. ಆರ್​ಟಿಇ ಕಾಯ್ದೆಯ ಮರು ತಿದ್ದುಪಡಿಗೆ ಅಗ್ರಹಿಸಿ ಬೆಳಗಾವಿ (Belagavi) ಸುವರ್ಣ ಸೌಧದ ಎದುರು ಪ್ರತಿಭಟನೆ ನಡೆದಿದೆ.

ಈ ಹಿಂದೆ ತಂದ ತಿದ್ದುಪಡಿಯಿಂದ ಆರ್​ಟಿಇ ಕಾಯ್ದೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪ್ರಯೋಜನವಿಲ್ಲದಂತಾಗಿದೆ. ಬಿಬಿಎಂಪಿ ವಾರ್ಡ್ (BBMP Ward) ವಿಗಂಡಣೆಯ ಬಳಿಕ ಇದಕ್ಕೂ ಬ್ರೇಕ್

ಹಾಕಿದ್ದಂತಾಗಿದೆ. ಬಿಜೆಪಿ (BJP) ಸರ್ಕಾರ ಬಂದ ಬಳಿಕ 198 ವಾರ್ಡ್‌ಗಳಿಂದ 245 ವಾರ್ಡ್‌ಗಳಿಗೆ ಪುನರ್‌ವಿಂಗಡಣೆ ಮಾಡಿ ಸರ್ಕಾರ ‌ ಅಧಿಸೂಚನೆ ಬಳಿಕ ಸದ್ಯ ಬೆಂಗಳೂರಿನ ಯಾವದೇ ವಾರ್ಡ್ಗಳಲ್ಲಿಯೂ

ಆರ್​ಟಿಇ ಇಲ್ಲದಂತಾಗಿದೆ. ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಪಡೆದು ಉತ್ತಮ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ಬೆಂಗಳೂರಿನ ಯಾವ ವಾರ್ಡ್ ಗಳಲ್ಲಿಯೂ ಆರ್​ಟಿಇ

ಸೀಟು ಸದ್ಯ ಸಿಗುತ್ತಿಲ್ಲ.

right to education

ಬಿಬಿಎಂಪಿ ವಾರ್ಡ್ ವಿಭಜನೆಯ ಕಾರಣ ನೀಡಿ ಶಿಕ್ಷಣ ಇಲಾಖೆ ಬೆಂಗಳೂರಿನ ಎಲ್ಲ ವಾರ್ಡ್ ಗಳಿಂದಲೂ ಆರ್​ಟಿಇ ಅವಕಾಶ ತಗೆದು ಹಾಕಲಾಗಿದೆ. ಇಲಾಖೆ ಬೆಂಗಳೂರಿನಿಂದ ಕಂಪ್ಲೀಟ್ ಆರ್​ಟಿಇ

ಅಡಿಯ ಖಾಸಗಿ ಶಾಲೆಗಳ ಅರ್ಜಿ ಮೂಲಕ ದಾಖಲಾತಿಗೆ ಬ್ರೇಕ್ ಹಾಕಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ(Silicon City) ಗಣೇಶ ಗೂಡಿ ವಾರ್ಡ್ ಹೊರತುಪಡಿಸಿ ಬೇರೆ ಯಾವ ವಾರ್ಡ್ಗಳಲ್ಲಿಯೂ

ಆರ್​ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗುತ್ತಿಲ್ಲ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೀಗಾಗಿ ಈಗ ಪೋಷಕರು ಹಾಗೂ ಖಾಸಗಿ ಶಾಲೆಗಳು ಕಾಯ್ದೆಯ ಮರು ತಿದ್ದುಪಡಿಗೆ ಒತ್ತಾಯಸಿವೆ. ಆರ್​ಟಿಇ ಕಾಯ್ದೆ ಸರಿಪಡಿಸಿ ಬಡ ಮಕ್ಕಳ ಉಚಿತ ಶಿಕ್ಷಣಕ್ಕೆ ಅವಕಾಶ ನೀಡುವಂತೆ ಒತ್ತಾಯ

ಕೇಳಿ ಬಂದಿದೆ. ಈ ಹಿಂದೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸಿಎಂ ಆದ ವೇಳೆ ಶಿಕ್ಷಣ ಕಾಯ್ದೆಗೆ ತಂದ ತಿದ್ದುಪಡಿಯಿಂದ ಬೆಂಗಳೂರಿನಲ್ಲಿ ಆರ್​ಟಿಇ ಕೇವಲ ಬೆರಳಣೆಕೆಯಷ್ಟು ವಾರ್ಡ್​ಗಳಲ್ಲಿ

(Ward) ಮಾತ್ರ ಸಿಮೀತವಾಗಿತ್ತು. ಆದರೆ ಬಿಬಿಎಂಪಿ ವಾರ್ಡ್ ವಿಗಂಡಣೆಯ ಬಳಿಕ ಇದಕ್ಕೂ ಬ್ರೇಕ್ ಹಾಕಿದ್ದಂತಾಗಿದೆ.

ಶಿಕ್ಷಣ ಹಕ್ಕು ಕಾಯಿದೆಯಡಿ ಖಾಸಗಿ ಶಾಲೆಗಳಲ್ಲಿ ಉಚಿತ ಸೀಟು ಪಡೆದು ಉತ್ತಮ ಶಿಕ್ಷಣ ಪಡೆಯುತ್ತಿದ್ದ ಮಕ್ಕಳಿಗೆ ಇನ್ನು ಬೆಂಗಳೂರಿನ ಯಾವ ವಾರ್ಡ್​ಗಳಲ್ಲಿಯೂ ಆರ್​ಟಿಇ ಸೀಟು ಸಿಗುತ್ತಿಲ್ಲ.

ಶಿಕ್ಷಣ ಇಲಾಖೆ ಬೆಂಗಳೂರಿನಿಂದ ಆರ್​ಟಿಇ ಅಡಿಯ ಖಾಸಗಿ ಶಾಲೆಗಳ ಅರ್ಜಿ ಮೂಲಕ ದಾಖಲಾತಿಗೆ ಬ್ರೇಕ್ ಹಾಕಿದೆ.

ಇದನ್ನು ಓದಿ: ರಾಜಭವನಕ್ಕೆ ಹುಸಿ ಬಾಂಬ್ ಕರೆ: ಆಂಧ್ರದಲ್ಲಿ ಪೋಲೀಸರ ಬಲೆಗೆ ಬಿದ್ದ ಆರೋಪಿ ಭಾಸ್ಕರ್

Exit mobile version