ಸಂಸತ್ತಿನ ಸಂಸದರ ಅಮಾನತು: ವಿಪಕ್ಷಗಳ 143 ಸಂಸದರ ಅಮಾನತು ಖಂಡಿಸಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ

ಲೋಕಸಭೆಯಲ್ಲಿ ನಡೆಯುತ್ತಿದ್ದ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳ 143 ಸಂಸದರ (Protest on Dec22 at Delhi) ಅಮಾನತು ಹಾಗೂ ಲೋಕಸಭೆ ಭದ್ರತಾ ಲೋಪದ ಕುರಿತು ಹೇಳಿಕೆ ನೀಡಲು

ಗೃಹ ಸಚಿವ (Home Minister) ಅಮಿತ್ ಶಾ (Amit Shah) ಅವರ ನಿರಾಕರಣೆ ವಿರೋಧಿಸಿ ‘ಐಎನ್‌ಡಿಐಎ’ (INDIA) ಕೂಟದ ಪ್ರತಿಪಕ್ಷಗಳ ಸಂಸದರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಾಳೆ

(ಡಿ.22) ಧರಣಿ ನಡೆಸುವುದಾಗಿ (Protest on Dec22 at Delhi) ಬುಧವಾರ ಘೋಷಿಸಿದೆ.

ಅದೇ ಸಂದರ್ಭದಲ್ಲಿ ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲು ಇಂಡಿಯಾ ಒಕ್ಕೂಟದ ನಾಯಕರು ನಿರ್ಧರಿಸಿದ್ದು, ಜಂತರ್ ಮಂತರ್‌ನಲ್ಲಿ (Jantar Mantar) ಸಂಸದರು ಪ್ರತಿಭಟನೆ ನಡೆಸಲು

ನಿರ್ಧಾರ ಮಾಡಿದೆ. ಇದೇ ವರ್ಷದ ಮೇ ನಂತರ ಪ್ರತಿ ಪಕ್ಷಗಳು ಒಂದುಗೂಡಲು ನಿರ್ಧರಿಸಿದ ನಂತರ ಇದು ಮೊದಲ ಜಂಟಿ ಪ್ರತಿಭಟನಾ (Joint protest) ಕಾರ್ಯಕ್ರಮವಾಗಿದೆ.

ಲೋಕಸಭೆ ಭದ್ರತಾ ಉಲ್ಲಂಘನೆಯ ಕುರಿತು ಶಾ ಅವರು ಹೇಳಿಕೆ ನೀಡುವುದಕ್ಕೆ ನಿರಾಕರಿಸಿದ್ದರಿಂದ ಉಭಯ ಸದನಗಳಲ್ಲಿ ಇಂಡಿಯಾ ಒಕ್ಕೂಟದ ಸಂಸದರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರದ ನಡೆ ಖಂಡಿಸಿ ಬುಧವಾರ ರಾಜ್ಯಸಭಾ ವಿರೋಧ ಪಕ್ಷದ (Rajya Sabha opposition party) ಸಂಸದರು ಸಭಾತ್ಯಾಗ ಮಾಡಿ ಸದನಕ್ಕೆ ಮರಳಲಿಲ್ಲ.

ವಿರೋಧ ಪಕ್ಷದ ಸಂಸದರು ಅಮಿತ್ ಶಾ ಉತ್ತರ ನೀಡುವಂತೆ ಒತ್ತಾಯಿಸಿ ಗುರುವಾರವೂ ಸದನದಲ್ಲಿ ತಮ್ಮ ಬೇಡಿಕೆ ಮುಂದುವರಿಸುವ ಸಾಧ್ಯತೆಯಿದ್ದು, ಮುಂಗಾರು ಅಧಿವೇಶನದಿಂದ ಅಮಾನತುಗೊಂಡಿರುವ

ಎಎಪಿಯ ಸಂಜಯ್ ಸಿಂಗ್ (AAP’s Sanjay Singh) ಸೇರಿದಂತೆ 237 ಐಎನ್‌ಡಿಐಎ ಸಂಸದರಲ್ಲಿ ಒಟ್ಟು 144 ಮಂದಿಯನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಲೋಕಸಭೆಯು ಬುಧವಾರ ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಎವಿಡೆನ್ಸ್ ಆಕ್ಟ್ (Criminal Procedure Code and Evidence Act) ವಿಧೇಯಕಗಳನ್ನು

ಅಂಗೀಕರಿಸುವುದರೊಂದಿಗೆ ಪ್ರತಿಪಕ್ಷಗಳು ಗುರುವಾರ ರಾಜ್ಯಸಭೆಗೆ ಬರುತ್ತವೆ ಎಂದು ಸರ್ಕಾರ ನಿರೀಕ್ಷಿಸುತ್ತಿದೆ. ಆದರೆ, ಅವರು ಅದರಲ್ಲಿ ಭಾಗವಹಿಸದೇ ಇರಬಹುದು.

ಇಂಡಿಯಾ ಬ್ಲಾಕ್‌ನ (India Block) ನಾಯಕರ ಸಭೆಯಲ್ಲಿ, ಡಿಎಂಕೆ ಸಂಸದ ಟಿ ಎಸ್ ಇಲಾಂಗೋ, ಐಪಿಸಿ ನಿಯಮ (TS Ilango, IPC Rule) ಬದಲಿಸುವ ಮೂರು ಮಸೂದೆಗಳ ಬಗ್ಗೆ

ನಾಯಕರಿಗೆ ವಿವರಿಸಿದರು.

ಇದನ್ನು ಓದಿ: ನಿರೀಕ್ಷೆಗೂ ಮೀರಿ ಭಾರತದ GDP ಬೆಳವಣಿಗೆ: ಮೊದಲ ಸ್ಥಾನದಲ್ಲಿ ಭಾರತ – ಯಾವ ದೇಶದ್ದು ಎಷ್ಟು?

Exit mobile version