ಹೂವಿನ ಪಲ್ಲಕ್ಕಿಯಲ್ಲಿ ಪುನೀತ್ ಅಂತ್ಯಸಂಸ್ಕಾರ

 ಬೆಂಗಳೂರು ಅ 31 : ಅಂತ್ಯ ಸಂಸ್ಕಾರದ ವೇಳೆ ಪುನೀತ್ ಪಾರ್ಥಿವ ಶರೀರವನ್ನು ಪಲ್ಲಕ್ಕಿಯಲ್ಲಿ ಇಟ್ಟು ವಿಧಿ ವಿಧಾನ ಪೂರೈಸಲಾಯಿತು. ಈ ದೃಶ್ಯ ಕಂಡು ಪುನೀತ್ ಪತ್ನಿ ಅಶ್ವಿನಿ ರೋಧಿಸುತ್ತಿದ್ದರು. ಪುತ್ರಿ ಧೃತಿ ಅಮ್ಮ ಹಾಗೂ ತಂಗಿಯ ಕೈಗಳನ್ನು ಬಿಗಿಯಾಗಿ ಹಿಡಿದು ಧೈರ್ಯ ತುಂಬುತ್ತಿರುವ ದೃಶ್ಯ ಕಂಡುಬಂದಿತ್ತು. ಪಲ್ಲಕ್ಕಿಯಲ್ಲಿ ತಣ್ಣಗೆ ಮಲಗಿದ್ದ ಪುನೀತ್‌ಗೆ ಪೂಜೆ ಮಾಡುವ ವೇಳೆ ಮಡುಗಟ್ಟಿದ ದುಃಖ ಉಮ್ಮಳಿಸಿ ಬರುತ್ತಿತ್ತು.

 ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್‌, ಅವರ ಪತ್ನಿ ಮಂಗಳಾ, ಮಗ ಯುವ ರಾಜ್‌ಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಪ್ರೀತಿಯ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು.

Exit mobile version