300 ಅಡಿ ಆಳಕ್ಕೆ ಬಿದ್ದ 6 ವರ್ಷದ ಬಾಲಕ ; 9 ಗಂಟೆಗಳ ನಿರಂತರ ಕಾರ್ಯಾಚರಣೆ ಫಲಿಸಲಿಲ್ಲ!

Punjab

ಪಂಜಾಬ್‌ನ(Punjab) ಹೋಶಿಯಾರ್‌ಪುರದ(Hoshiyapur) ಗಾದ್ರಿವಾಲಾ(Gadriwala) ಗ್ರಾಮದಲ್ಲಿ 300 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಆರು ವರ್ಷದ ಬಾಲಕ ಭಾನುವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ರಕ್ಷಣಾ ಪಡೆ ನಡೆಸಿದ ನಿರಂತರ 9 ಗಂಟೆಗಳ ಕಾಲ ಕಾರ್ಯಾಚರಣೆ ಬಾಲಕನನ್ನು ಉಳಿಸುವಲ್ಲಿ ವಿಫಲವಾಗಿದೆ.

Image source : India Today

ರಿತಿಕ್ ಎಂಬ 6 ವರ್ಷದ ಬಾಲಕನನ್ನು ಚಿಕಿತ್ಸೆಗಾಗಿ ಹೊಶಿಯಾರ್‌ಪುರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿಗಳ ಪ್ರಕಾರ ರಕ್ಷಣಾ ಕಾರ್ಯಾಚರಣೆಗೆ ಸೇನೆಯನ್ನು ಕರೆಸಲಾಗಿತ್ತು. ಬೋರ್‌ವೆಲ್ ಕಡೆಗೆ ಸುರಂಗ ಕೊರೆಯಲು ಜೆಸಿಬಿ ಯಂತ್ರವನ್ನು ಅಳವಡಿಸಲಾಗಿತು. ಬಾಲಕ ಬೋರ್‌ವೆಲ್‌ಗೆ ತಲೆಕೆಳಗಾಗಿ ಬಿದ್ದಿದ್ದರಿಂದ ರಕ್ಷಕರು ಕ್ಲಿಪ್ ಸಹಾಯದಿಂದ ಬಾಲಕನನ್ನು ಹೊರತೆಗೆಯಲು ಯತ್ನಿಸಿದ್ದಾರೆ.

ಒಂದೂವರೆ ಗಂಟೆಯಲ್ಲಿ 15 ಅಡಿ ಮಾತ್ರ ಅಗೆಯಲು ಈ ಯಂತ್ರಕ್ಕೆ ಸಾಧ್ಯವಾಗಿದೆ. ಬಾಲಕ ಬೋರ್‌ವೆಲ್‌ನಲ್ಲಿ 65 ಅಡಿಯ ಜಾಗದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಭಾನುವಾರ ಬೆಳಗ್ಗೆ 9 ಗಂಟೆಗೆ ಈ ಘಟನೆ ನಡೆದಿದ್ದು, ಮಗು ಬೀದಿನಾಯಿಗಳಿಂದ ರಕ್ಷಿಸಿಕೊಳ್ಳಲು ಓಡಿ ಹೋಗುತ್ತಿದ್ದಾಗ ಎಡವಿ ಕೊಳವೆ ಬಾವಿಯೊಳಗೆ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ.

ರಕ್ಷಕರು ಆರು ವರ್ಷದ ಮಗುವಿನ ಸ್ಥಿತಿಯನ್ನು ಸ್ಥಿರವಾಗಿಡಲು ಆಮ್ಲಜನಕವನ್ನು ಒದಗಿಸಿದ್ದಾರೆ. ಆದ್ರೆ, ಬಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ಮೂಲಗಳು ವರದಿಯಲ್ಲಿ ತಿಳಿಸಿವೆ.

Exit mobile version