ಅಟ್ಟಾರಿ ಗಡಿ ಬಳಿ ಸಿಕ್ಕ ಸಿಧು ವಾಲಾ ಹಂತಕರು ; ಎನ್‌ಕೌಂಟರ್ ಮಾಡಿದ ಪಂಜಾಬ್ ಪೊಲೀಸ್

Sidhu wala

ಜುಲೈ 20, ಬುಧವಾರ ಅಮೃತಸರದ(Amritsar) ಅಟ್ಟಾರಿ ಬಳಿ ಸಿಧು ಮೂಸ್ ವಾಲಾ(Sidhu Moose Wala) ಹತ್ಯೆ(Murder) ಪ್ರಕರಣದಲ್ಲಿ ತನಿಖೆ ಮಾಡುತ್ತಿರುವ ಪಂಜಾಬ್ ಪೊಲೀಸರು(Punjab Police) ಮತ್ತು ಹಂತಕರ ನಡುವೆ ಸೆಣಸಾಟ ನಡೆದಿದೆ. ಮೂಲಗಳ ಪ್ರಕಾರ, ಗಾಯಕ ಮತ್ತು ರಾಜಕಾರಣಿ ಸಿಧು ಮೂಸ್ ವಾಲಾ ಹತ್ಯೆಯಲ್ಲಿ ಯಾವ ಹಂತಕರ ಗ್ಯಾಂಗ್ ಭಾಗಿಯಾಗಿರಬಹುದು ಎಂಬ ಮಾಹಿತಿ ಪಂಜಾಬ್ ಪೊಲೀಸರಿಗೆ ಲಭಿಸಿದೆ. ಅಮೃತಸರದ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಚಿಚಾ ಭಕ್ನಾ ಗ್ರಾಮದಲ್ಲಿ ಗ್ಯಾಂಗ್ ತಲೆಮರೆಸಿಕೊಂಡಿದೆ.

ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಹಂತಕರಾದ ರೂಪ ಮತ್ತು ಮನ್ನು ಕೂಸ ಅಲ್ಲಿ ಅಡಗಿಕೊಂಡಿದ್ದರು ಎನ್ನಲಾಗಿದೆ. ಪೊಲೀಸರು ಶೀಘ್ರವೇ ಪ್ರದೇಶವನ್ನು ಸುತ್ತುವರೆದು, ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಈ ಸಂದರ್ಭದಲ್ಲಿ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆದಿದೆ. ಒಂದೆಡೆ ಹಂತಕರ ಗ್ಯಾಂಗ್ ಪೊಲೀಸರ ತಂಡಕ್ಕೆ ಗುಂಡು ಹಾರಿಸಿದರೆ, ಅತ್ತ ಪೊಲೀಸರ ತಂಡ ಗ್ಯಾಂಗ್ ನತ್ತ ಗುಂಡು ಹಾರಿಸಿದ್ದಾರೆ. ಗ್ಯಾಂಗ್ ನಲ್ಲಿದ್ದ ಈ ಇಬ್ಬರು ಸಿದ್ದು ಮೂಸ್ ವಾಲಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಶಾರ್ಪ್ ಶೂಟರ್‌ಗಳೆಂದು ಶಂಕಿಸಲಾಗಿದೆ.

ಭಾನುವಾರ, ಮೇ 29 ರಂದು ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದಲ್ಲಿ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುರಿಯಾಗಿಸಿಕೊಂಡು ಗುಂಡಿಕ್ಕಿ ಕೊಂದರು. ಸಿಧು ಮೂಸ್ ವಾಲಾ ಅವರನ್ನು ಹತ್ಯೆಗೈದ ಹಂತಕರ ಗುಂಪನ್ನು ಸೆರೆಹಿಡಿಯುವಲ್ಲಿ ಪಂಜಾಬ್ ಪೊಲೀಸರು ವಿಶೇಷ ತಂಡವನ್ನು ರಚಿಸಿ, ಕಳೆದ ಎರಡು ತಿಂಗಳಿಂದ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚುತ್ತಿದ್ದಾರೆ. ಇಂದು ಪೊಲೀಸರಿಗೆ ದೊರೆತ ಮಾಹಿತಿಯ ಅನುಸಾರ, ಗ್ಯಾಂಗ್ ಇರುವ ಸ್ಥಳ ಪತ್ತೆಯಾಗಿದ್ದು,

ಪೊಲೀಸರು ಹಾಗೂ ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಮಧ್ಯೆ ಒಬ್ಬ ಆರೋಪಿಯನ್ನು ಪೊಲೀಸರು ಸ್ಥಳದಲ್ಲೇ ಎನ್ ಕೌಂಟರ್ ಮಾಡಿದ್ದಾರೆ.

Exit mobile version