ಸದ್ಯದಲ್ಲೇ ಕರ್ಫ್ಯೂ ನಿಯಮ ಸಡಿಲಿಕೆ – ಆರ್‌ ಅಶೋಕ್‌

r ashok

ಬೆಂಗಳೂರು ಜ 18 : ರಾಜ್ಯದಲ್ಲಿ ಹೇರಲಾಗಿರುವ ವೀಕೆಂಡ್‌ ಕರ್ಪ್ಯೂ ಹಿನ್ನೆಲೆಯಲ್ಲಿ ರಾಜ್ಯದ ಮಂದಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಹಿರಿಯ ಸಚಿವ ಆರ್‌. ಅಶೋಕ್‌ ಮಾತನಾಡಿ  ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿರುವ ಕೊರೊನಾ ನಿಯಮಗಳಲ್ಲಿ ಮತ್ತಷ್ಟು ರಿಲೀಫ್ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.

ಇಂದು ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ವರ್ಚುವಲ್ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಲಾಕ್‍ಡೌನ್ ಇಲ್ಲ. ಶುಕ್ರವಾರ ಸಭೆ ನಡೆಸಿ ಮತ್ತೆ ವೀಕೆಂಡ್ ಲಾಕ್‍ಡೌನ್ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಡಬ್ಲ್ಯೂಎಚ್‍ಒ, ತಜ್ಞರ ಸಮಿತಿ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸೋಂಕು ಲಕ್ಷಣಗಳು ಕಡಿಮೆ ಆದ ತಕ್ಷಣ ಇರುವ ನಿಯಮಗಳನ್ನು ಸಡಿಲಿಕೆ ಮಾಡುತ್ತೇವೆ ಎಂದರು.

ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆದಿದೆ. ಬಂದಿದ್ದ ಎಲ್ಲಾ ತಜ್ಞರು ವ್ಯಾಕ್ಸಿನೇಷನ್ ಹಾಗೂ ಟೆಸ್ಟಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಟೆಸ್ಟಿಂಗ್ ಜಾಸ್ತಿ ಮಾಡುವ ಅವಶ್ಯಕತೆ ಇಲ್ಲಾ ಎಂದಿದ್ದಾರೆ. ತಜ್ಞರೆಲ್ಲರ ಅಭಿಪ್ರಾಯದಂತೆ ಜನವರಿ ಅಂತ್ಯದ ವೇಳೆ ಹೆಚ್ಚಾಗಬಹುದು ಎಂದು ಬೇರೆ ರಾಜ್ಯಗಳ ಬೆಳವಣಿಗೆ ನೋಡಿ, ಕಂಪೇರ್ ಮಾಡಿ ಈ ರೀತಿ ಹೇಳಿದ್ದಾರೆ. ಸೋಂಕು ಹೆಚ್ಚಳಗೊಂಡು ನಂತರ ಕಡಿಮೆ ಆಗಬಹುದು. ಇದೀಗ ಜಾರಿಯಲ್ಲಿರುವ ನಿಯಮ ಹೀಗೆ ಮುಂದುವರಿಯುತ್ತದೆ. ಶುಕ್ರವಾರದವರೆಗೆ ಯತಾಸ್ಥಿತಿ ಶುಕ್ರವಾರದ ಬಳಿಕ ಮುಂದಿನ ತೀರ್ಮಾನವನ್ನು ಕಾದು ನೋಡಿ ಎಂದರು.

ಬೆಂಗಳೂರಿನಲ್ಲಿ ಮುಂದುವರೆದ ನೈಟ್‌ ಕರ್ಫ್ಯೂ :  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನವರಿ 31ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ನಗರದಲ್ಲಿ ಸೆಕ್ಷನ್ 144 ಸೆಕ್ಷನ್ ವಿಸ್ತರಣೆ ಮಾಡಿ  ಇಂದು ಸಂಜೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಜನವರಿ 31 ರವರೆಗೆ 144 ಸೆಕ್ಷನ್ ವಿಸ್ತರಣೆ ಮಾಡಿದ್ದಾರೆ. ರಾತ್ರಿ ಅಷ್ಟೇ ಅಲ್ಲ ಡೇ ಟೈಂನಲ್ಲಿಯೂ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ವೇಳೆ ಯಾವುದೇ ರ್ಯಾಲಿ, ಪ್ರತಿಭಟನೆ, ಸಭೆ ಹಾಗೂ ಸಮಾರಂಭಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದರು.

ಇಷ್ಟು ಮಾತ್ರವಲ್ಲದೆ ಐದು ಜನಕ್ಕಿಂತ ಹೆಚ್ಚು ಮಂದಿ ಗುಂಪು ಕೂಡದಂತೆ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಒಂದು ವೇಳೆ ಈ ಆದೇಶ ಉಲ್ಲಂಘಿಸಿದರೆ ಎನ್ ಡಿಎಂಎ ಆಕ್ಟ್ ಅಡಿ ಕಾನೂನು ಕ್ರಮ ಜರಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ

Exit mobile version