‘ದಿಂಬುಗಳೊಂದಿಗೆ ಸಂಭೋಗ ಮಾಡಿ’ ಎಂದು ಹುಡುಗಿಯರಿಗೆ ಹಿಂಸೆ ; ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್ ಆರೋಪ!

raging

ಇಂದೋರ್‌ನ(Indore) ಮಹಾತ್ಮ ಗಾಂಧಿ ಮೆಮೋರಿಯಲ್(MGM) ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ತಮ್ಮ ಸೀನಿಯರ್ಸ್(ಮೂರನೇ ವರ್ಷದ ವಿದ್ಯಾರ್ಥಿಗಳು) ತಮ್ಮ ಮೇಲೆ ರ‍್ಯಾಗಿಂಗ್(Raging), ಕಿರುಕುಳ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಕೆಲ ಸೀನಿಯರ್ಸ್ ದಿಂಬುಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸಿದರು ಮತ್ತು ತಮ್ಮ ಮಹಿಳಾ ಸಹಪಾಠಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ಅನುದಾನ ಆಯೋಗದ(UGC) ಆ್ಯಂಟಿ ರ‍್ಯಾಗಿಂಗ್ ಸಹಾಯವಾಣಿಗೆ ದೂರು ಸಲ್ಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಅಸ್ವಾಭಾವಿಕ ಲೈಂಗಿಕತೆ ಸೇರಿದಂತೆ ಅಸಭ್ಯ ಮತ್ತು ಅಶ್ಲೀಲ ಕೃತ್ಯಗಳನ್ನು ನಡೆಸಲು ಸೀನಿಯರ್ಸ್ ತಮಗೆ ಒತ್ತಾಯಿಸಿದ್ದಾರೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಯುಜಿಸಿಯ ಆ್ಯಂಟಿ ರ‍್ಯಾಗಿಂಗ್ ಘಟಕವು ಎಂಜಿಎಂಎಂ ಕಾಲೇಜಿಗೆ ದೂರಿನ ಬಗ್ಗೆ ತಿಳಿಸಿದ್ದು, ಎಫ್‌ಐಆರ್(FIR) ದಾಖಲಿಸುವಂತೆ ತಿಳಿಸಿತ್ತು. ಬಳಿಕ ಸೂಕ್ತ ಕ್ರಮಕ್ಕಾಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಎಂಜಿಎಂ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸಂಜಯ್ ದೀಕ್ಷಿತ್, “ನೊಂದ ವಿದ್ಯಾರ್ಥಿಯು ಕೆಲವು ದಿನಗಳ ಹಿಂದೆ, ಯುಜಿಸಿಯ ರ‍್ಯಾಗಿಂಗ್ ವಿರೋಧಿ ಸಹಾಯವಾಣಿಗೆ ದೂರು ನೀಡಿದ್ದರು. ಇದರ ನಂತರ, ಮೇಲ್ ಸ್ವೀಕರಿಸಿದ ತಕ್ಷಣ ರ‍್ಯಾಗಿಂಗ್ ವಿರೋಧಿ ಸಮಿತಿಯ ಸಭೆಯನ್ನು ಕರೆಯಲಾಯಿತು. ಎಫ್ಐಆರ್ ಅನ್ನು ಅನುಮೋದಿಸಲಾಗಿದೆ ಮತ್ತು ಪೊಲೀಸರಿಗೆ ಪತ್ರವನ್ನು ಕಳುಹಿಸಲಾಗಿದೆ. ವಿದ್ಯಾರ್ಥಿಗಳು ಆರೋಪದ ಪತ್ರವನ್ನು ನಾವು ಗಮನಕ್ಕೆ ತಂದಿದ್ದೇವೆ.


ಈ ಕುರಿತು ಮಾತನಾಡಿದ ಸಂಯೋಗಿತಾ ಗಂಜ್ ಠಾಣೆ ಪ್ರಭಾರಿ ತಹಜೀಬ್ ಖಾಜಿ, ಎಂಜಿಎಂ ಕಾಲೇಜಿನ ದೂರಿನ ಮೇರೆಗೆ ರ‍್ಯಾಗಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು, 8 ರಿಂದ 10 ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್ ತಡೆ ಕಾಯ್ದೆಯ ಸೆಕ್ಷನ್ 294, 323, 506ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Exit mobile version