ನಾವು ಬಡವರಿಗೆ ಹಣ ಕೊಟ್ಟು, ಲಕ್ಷಾಧೀಶ್ವರರನ್ನಾಗಿ ಮಾಡ್ತೇವೆ: ರಾಹುಲ್ ಗಾಂಧಿ

Bellary: ನಾವು ಬಡವರಿಗೆ ಹಣ ಕೊಟ್ಟು, ಲಕ್ಷಾಧೀಶ್ವರರನ್ನಾಗಿ ಮಾಡುತ್ತೇವೆ. ಆದರೆ ಬಿಜೆಪಿ (Rahul Gandhi Against PM) ಸರ್ಕಾರ ಅದಾನಿ ಸೇರಿದಂತೆ ದೇಶದ ಕೆಲವೇ ಉದ್ಯಮಿಗಳಿಗೆ

ಇಡೀ ದೇಶದ ಸಂಪತ್ತನ್ನು ನೀಡುತ್ತಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರ ಪರಿಹಾರ ಕೊಡವ ಬದಲು ಖಾಲಿ ಚೊಂಬು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ

ರಾಹುಲ್ ಗಾಂಧಿ (Rahul Gandhi) ಅವರು ಪ್ರಧಾನಿ ಮೋದಿ (Rahul Gandhi Against PM) ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿ ನಗರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ (Modi) ಅವರದು ಭಾರತೀಯ ಚಂಬು ಪಾರ್ಟಿಯಾಗಿದೆ. ಕರ್ನಾಟಕಕ್ಕೆ ಹಾಗೂ

ಇಡೀ ದೇಶಕ್ಕೆ ಖಾಲಿ ಖಾಲಿ ಚಂಬು ಕೊಟ್ಟಿದ್ದಾರೆ. ಕರ್ನಾಟಕಕ್ಕೆ (Karntaka) ಬರ ಪರಿಹಾರಕ್ಕಾಗಿ 18 ಸಾವಿರ ಕೋಟಿ ಕೊಡುವ ಬದಲು, ಖಾಲಿ ಚಂಬು ನೀಡಿದ್ದಾರೆ ಎಂದು ಕಿಡಿಕಾರಿದರು.

ಇನ್ನು ದೇಶದಲ್ಲಿ ಸಂವಿಧಾನ ಬರುವ ಮುನ್ನ ದಲಿತರು, ದುರ್ಬಲರಿಗೆ ಅಧಿಕಾರ ಇದ್ದಿರಲಿಲ್ಲ. ರಾಜ – ಮಹಾರಾಜರು ತಮಗೆ ಬೇಕಾದ ರೀತಿಯಲ್ಲಿ ಅಧಿಕಾರ ಚಲಾಯಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ

ಜನಸಮಾನ್ಯರೊಂದಿಗೆ ಸೇರಿ ಕಾಂಗ್ರೆಸ್ (Congress) ಪಕ್ಷ ಅನೇಕ ಹೋರಾಟಗಳನ್ನು ನಡೆಸಿ ದೇಶಕ್ಕೆ ಸ್ವಾತಂತ್ರ್ಯ, ಹಾಗೂ ಸಂವಿಧಾನ ತಂದಿದೆ. ಆದರೆ, ಬಿಜೆಪಿಯವರು ಸಂವಿಧಾನ ತೆಗೆದುಹಾಕಲು

ಯೋಜನೆ ರೂಪಿಸಿದ್ದಾರೆ. ಹೀಗಾಗಿ, ಇಂಡಿಯಾ ಮೈತ್ರಿಕ್ಕೂಟ (India Alliance) ಸಂವಿಧಾನ ಉಳಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇರುವವರೆಗೂ ಸಂವಿಧಾನವನ್ನು ಬದಲಾಯಿಸಲು

ಸಾಧ್ಯವಿಲ್ಲ ಎಂದರು.

ಬಡ ಜನರನ್ನು ಲಕ್ಷಾಧೀಶ್ವರ ಮಾಡುತ್ತೇವೆ:
ದೇಶದ ಎಲ್ಲ ಬಡವರನ್ನು ಗುರುತಿಸಿ ಅವರ ಬ್ಯಾಂಕ್ ಖಾತೆಗೆ (Bank Account) 1 ಲಕ್ಷ ರೂಪಾಯಿ ಹಾಕಲಾಗುವುದು. ಈ ಮೂಲಕ ದೇಶದ ಬಡ ಜನರನ್ನು ಲಕ್ಷಾಧೀಶರನ್ನು ಮಾಡಲಾಗುವುದು.

ಅದೇ ರೀತಿ ನಿರುದ್ಯೋಗಿಗಳಿಗೆ ನರೇಗಾ ಮೂಲಕ ಉದ್ಯೋಗ ಒದಗಿಸುವ ಯೋಜನೆ ರೂಪಿಸಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಆದಾಯ ದ್ವಿಗುಣ ಮಾಡಲಾಗುವುದು.

ರೈತರ ಎಲ್ಲ ಸಾಲ ಮನ್ನಾ ಮಾಡಲಾಗುವುದು. ಎಂಎಸ್ ಪಿ (MSP) ಜಾರಿಗೊಳಿಸಲಾಗುವುದು. ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

ಇದನ್ನು ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪುರಾಣ: ಅಶ್ಲೀಲ ವಿಡಿಯೋದಲ್ಲಿದ್ದಾರೆ ಎನ್ನಲಾಗುತ್ತಿರುವ ನ್ಯೂಸ್ ಆಂಕರ್ಸ್‌ಗಳು ಯಾರು?

Exit mobile version