ಬಿಜೆಪಿಯ ‘ಉದ್ಯೋಗ ಮಾರಾಟ’ ಕರ್ನಾಟಕದ ಯುವಕರ ಕನಸನ್ನು ನುಚ್ಚುನೂರು ಮಾಡಿದೆ : ರಾಹುಲ್‌ ಗಾಂಧಿ

BJP

ಬಿಜೆಪಿಯ(BJP) ಭ್ರಷ್ಟಾಚಾರ(Corruption) ಮತ್ತು ‘ಉದ್ಯೋಗ ಮಾರಾಟ’ ಕರ್ನಾಟಕದ(Karnataka) ಸಾವಿರಾರು ಯುವಕರ ಕನಸನ್ನು ನುಚ್ಚುನೂರು ಮಾಡಿದೆ.

ಅಂದಿನ ಗೃಹ ಸಚಿವರಾಗಿದ್ದ ಮುಖ್ಯಮಂತ್ರಿಗಳನ್ನು ನ್ಯಾಯಯುತ ತನಿಖೆಗಾಗಿ ವಜಾಗೊಳಿಸಬೇಕು(Rahul Gandhi demands bommai resignation).

ಪ್ರಧಾನಿಗಳು ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಇದು ಬಿಜೆಪಿಯ ‘ಎಲ್ಲರೂ ತಿನ್ನುತ್ತೇವೆ, ಎಲ್ಲರಿಗೂ ತಿನ್ನಿಸುತ್ತೇವೆ’ ನೀತಿಯಲ್ಲವೇ? ಎಂದು ಕಾಂಗ್ರೆಸ್‌ ನಾಯಕ(Congress Leader) ರಾಹುಲ್‌ ಗಾಂಧಿ(Rahul Gandhi) ಟ್ವೀಟ್‌(Tweet) ಮೂಲಕ ಪ್ರಶ್ನಿಸಿದ್ದಾರೆ.

ಇನ್ನು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸರ್ಜೆವಾಲಾ ಪಿಎಸ್‌ಐ ಅಕ್ರಮದ ಕುರಿತು ಪ್ರತಿಕ್ರಿಯಿಸಿ, ಪಿಎಸ್ಐ ಹಗರಣದ ಹೊಣೆಗಾರಿಕೆ ಆಗಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರದ್ದೇ. ಹೆಚ್ಚು, ಕಡಿಮೆ ಏನೂ ಇಲ್ಲ. 
https://vijayatimes.com/utsav-plans-among-congress-leaders/

ಎಡಿಜಿಪಿ ಬಂಧನ ಸಾಕಾಗುವುದಿಲ್ಲ. ಸಿಎಂ ಬೊಮ್ಮಾಯಿಯವರು ರಾಜೀನಾಮೆ ಕೊಡಬೇಕು ಅಥವಾ ಅವರನ್ನು ವಜಾಗೊಳಿಸಬೇಕು! ಯುವಕರು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಪಿಎಸ್ಐ ಹಗರಣದಲ್ಲಿ ಭ್ರಷ್ಟಾಚಾರದ ಮತ್ತಷ್ಟು ಪದರಗಳು ಬೆಳಕಿಗೆ ಬರುತ್ತಿದೆ, ಕೇವಲ 2 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ -:

  1. ಬಿಜೆಪಿಯ ರಾಜಕೀಯ ಗುರುಗಳ ಸಹಕಾರವಿಲ್ಲದೆ ಪಿಎಸ್ಐ ಹಗರಣ ನಡೆಯಬಹುದೇ?
  2. ಹಗರಣ ನಡೆಯುವ ಸಮಯದಲ್ಲಿ ಗೃಹ ಮಂತ್ರಿಯಾಗಿದ್ದವರು ಯಾರು?
    ಇದಕ್ಕೆ ಉತ್ತರ, ಶ್ರೀ. ಬಸವರಾಜ ಬೊಮ್ಮಾಯಿ ಎಂದು ಟ್ವೀಟ್‌ ಮಾಡಿದ್ದಾರೆ.

ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ಕೂಡಾ ಬಿಜೆಪಿ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ಪಿಎಸ್‌ಐ ಹಗರಣ ಕಾಂಗ್ರೆಸ್ನ ಸುಳ್ಳು ಆರೋಪ, ಕಾಂಗ್ರೆಸ್ ಟೂಲ್ ಕಿಟ್ ಎನ್ನುತ್ತಾ ಅಕ್ರಮ ನಡೆಸಿದವರಿಗೆ ಬೆಂಬಲಿಸುತ್ತಿದ್ದ ಬಿಜೆಪಿಯ ಐಟಿ ಸೆಲ್ ಈಗ ಏನು ಹೇಳುತ್ತದೆ?

ಎಡಿಜಿಪಿ ಬಂಧನ ಯಾವ ಟೂಲ್ ಕಿಟ್? ಬಿಜೆಪಿ ಸರ್ಕಾರದ ಮಂತ್ರಿಗಳ ತಲೆ ಉಳಿಸುವ ಟೂಲ್ ಕಿಟ್ ಆಗಿದೆಯೇ? ಅಕ್ರಮವೇ ಆಗಿಲ್ಲ ಎಂದಾದರೆ ಈ ಬಂಧನ ಏಕೆ? ಭ್ರಷ್ಟಾಚಾರ ಆರೋಪಗಳಿಗೆ ಬಂಡತನವನ್ನೇ ಗುರಾಣಿ ಮಾಡಿಕೊಂಡಿದೆ ಬಿಜೆಪಿ.

ಹಗರಣ ಮಲ್ಲೇಶ್ವರದ ಬಿಜೆಪಿ ಕಛೇರಿಯೇ ‘ಕಂಟ್ರೋಲ್ ರೂಮ್’ ಆಗಿದೆ.

ಈ ಹಗರಣದ ಸಂಪೂರ್ಣ ಸತ್ಯ ಬಯಲಾಗಬೇಕೆಂದರೆ ಸಚಿವರಾದ ಅಶ್ವಥ್ ನಾರಾಯಣ್, ಹಾಗೂ ಅರಗ ಜ್ಞಾನೇಂದ್ರರನ್ನು ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿಗಳೇ, ನಿಮ್ಮಿಂದ ಈ ಕೆಲಸ ಸಾಧ್ಯವೇ? ಎಂದು ಪ್ರಶ್ನಿಸಿದೆ.
Exit mobile version