ರಾಹುಲ್ ಗಾಂಧಿ ಒಬ್ಬ ತಲೆಯಿಲ್ಲದ ನಾಯಕ ಕಣ್ರೀ : ಪ್ರಹ್ಲಾದ್ ಜೋಶಿ!

congress

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಅವರು ನಿನ್ನೆ ರಾಹುಲ್ ತಮ್ಮ ಭಾಷಣದಲ್ಲಿ ಮಾತನಾಡಿದ ಮಾತುಗಳನ್ನು ಆಲಿಸಿ, ರಾಹುಲ್ ಗಾಂಧಿ ಮಾತುಗಳನ್ನು ಖಡಖಂಡಿತವಾಗಿ ವಿರೋಧಿಸಿದ್ದಾರೆ. 45 ನಿಮಿಷಗಳ ಕಾಲ ಭಾಷಣವನ್ನು ಮಾಡಿದ ರಾಹುಲ್ ಗಾಂಧಿ, ಈ ಬಾರಿಯ ಗಣರಾಜ್ಯೋತ್ಸವಕ್ಕೆ ಭಾರತವು ಗಣ್ಯ ಅತಿಥಿಯನ್ನು ಕುರಿಸಿ ಗೌರವಿಸಲಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ನೀವೇ ಪ್ರಶ್ನಿಸಿಕೊಳ್ಳಿ. ಭಾರತ ಒಂದು ದ್ವೀಪದಂತೆ ಉದ್ಬವಗೊಂಡಿದೆ. ಈ ದ್ವೀಪಕ್ಕೆ ವೈರಿಗಳ ಸರ್ಪಗಾವಲು ಎದುರಾಗಿದೆ ಎಂದು ಹೇಳಿದ್ದಾರೆ.

ನವದೆಹಲಿಯ ಸಂಸತ್ತಿನಲ್ಲೇ ತಮ್ಮ ಧ್ವನಿ ಎತ್ತಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ರಾಹುಲ್ ಗಾಂಧಿಯವರಿಗೆ ಲೋಕ ಜ್ಞಾನವಿದೆಯಾ? ನಮ್ಮ ರಾಷ್ಟ್ರವನ್ನು ಕಡೆಗಣಿಸಿ ಮಾತನಾಡುವ, ಹಿಯಾಳಿಸುವ ವ್ಯಕ್ತಿ ನಮಗೇಕೆ ಎಂಬುದು ತಿಳಿಯುತ್ತಿಲ್ಲ. ಭಾರತ ಒಂದು ರಾಷ್ಟ್ರವಲ್ಲ ಬದಲಾಗಿ ಎರಡು ರಾಷ್ಟ್ರವಾಗಿದೆ. ಚೀನಾ ದೃಷ್ಟಿಕೋನ ಸ್ಪಷ್ಟವಾಗಿದೆ ಎಂದು ನಮ್ಮ ವೈರಿ ರಾಷ್ಟ್ರ ವನ್ನು ಹಾಡಿ ಹೊಗಳುತ್ತಾರೆ ಎಂದರೆ ಇಂಥವರಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ ಎಂದು ತೀವ್ರವಾಗಿ ಮಾತಿನ ಚಾವಟಿ ಬೀಸಿದ್ದಾರೆ. ಚೀನಾ ರಾಷ್ಟ್ರಕ್ಕೆ ಅದ್ಭುತವಾದ ದೃಷ್ಟಿಕೋನ ಇದೆ. ತಾವೇನು ಮಾಡುತ್ತಿದ್ದೇವೆ ಎಂಬ ಅರಿವು ಸ್ಪಷ್ಟತೆ ಚೀನಾ ದೇಶಕ್ಕೆ ಇದೆ. ಆದರೆ ಭಾರತದ ಪ್ರಧಾನಿ ಮೋದಿ ಅವರ ಸರ್ಕಾರ ಏನು ಮಾಡುತ್ತಿದೆ? ಮಾಡಿರುವುದಾದರೂ ಏನು?

ಚೀನಾ ರಾಷ್ಟ್ರ ಮತ್ತು ಪಾಕಿಸ್ತಾನ ರಾಷ್ಟ್ರವನ್ನು ಒಟ್ಟಿಗೆ ಸೇರಿಸುವ ವಿದೇಶಾಂಗ ನೀತಿಯಲ್ಲಿ ನಮ್ಮ ಮೋದಿ ಸರ್ಕಾರ ಮೂಲಭೂತ ತಪ್ಪು ಮಾಡಿದೆಎಂದು ಹೇಳುವ ಮೂಲಕ ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ತಲೆಯಿಲ್ಲದ ನಾಯಕ ರಾಹುಲ್ ಗಾಂಧಿ ಎಂದು ಹೇಳಿ ತಿರುಗೇಟು ನೀಡಿದ್ದಾರೆ. ಸದ್ಯ ರಾಹುಲ್ ಗಾಂಧಿಯ ಹೇಳಿಕೆ ಭಾರಿ ಸಂಚಲನ ಉಂಟು ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಲವು ಟೀಕೆಗಳು ಕೇಳಿ ಬರುತ್ತಿವೆ.

Exit mobile version