Politics : ದ್ವೇಷದಿಂದ ಚುನಾವಣೆ ಗೆಲ್ಲಬಹುದು ; ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ : ರಾಹುಲ್ ಗಾಂಧಿ

Congress

New Delhi : ದ್ವೇಷ, ಹಿಂಸಾಚಾರ ಮತ್ತು ಕೋಪದಿಂದ ಚುನಾವಣೆಗಳನ್ನು ಗೆಲ್ಲಬಹುದು ಆದರೆ ಇವುಗಳಿಂದ ದೇಶ ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ ಎಂಬುದನ್ನು ಬಿಜೆಪಿ(BJP) ಸಾಬೀತುಪಡಿಸಿದೆ ಎಂದು ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಅವರು ಹೇಳಿದ್ದಾರೆ.

“ಭಾರತ್ ಜೋಡೋ”(Bharat Jodo) ಯಾತ್ರೆಯ ಎರಡನೇ ದಿನವನ್ನು ಮುಕ್ತಾಯಗೊಳಿಸಿ ಮಾತನಾಡಿದ ಅವರು, ಕೇಸರಿ ಪಕ್ಷವು ದ್ವೇಷವನ್ನು ರಾಜಕೀಯವಾಗಿ ಬಳಸಿಕೊಳ್ಳಬಹುದು ಮತ್ತು ಅದರಿಂದ ಚುನಾವಣೆ(Election) ಗೆಲ್ಲಬಹುದು ಎಂಬುದನ್ನು ಸಾಬೀತುಪಡಿಸಿದೆ.

ಇದನ್ನೂ ಓದಿ : https://vijayatimes.com/nithish-kumar-jdu-gets-shock/

ಸೌಹಾರ್ದತೆಗೆ ವಿರುದ್ಧವಾದ ನಿರ್ದಿಷ್ಟ ಸಿದ್ಧಾಂತದಿಂದ ದೇಶದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ದ್ವೇಷ, ಹಿಂಸೆ ಮತ್ತು ಕೋಪದಿಂದ ಚುನಾವಣೆ ಗೆಲ್ಲಬಹುದು, ಆದರೆ ಅದರಿಂದ ದೇಶಕ್ಕಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ. ಅದನ್ನೇ ಬಿಜೆಪಿ ಸಾಬೀತುಪಡಿಸಿದೆ.

ನಿರುದ್ಯೋಗ ಸಮಸ್ಯೆ ಅಥವಾ ಬೆಲೆ ಏರಿಕೆ ಸಮಸ್ಯೆಯನ್ನು ನೀವು ಕೋಪದಿಂದ ಪರಿಹರಿಸುವುದಿಲ್ಲ. ಇನ್ನು ಭಾರತದಲ್ಲಿ ಜನರ ಧ್ವನಿಯನ್ನು ಮೌನಗೊಳಿಸಲಾಗಿದೆ. ಸರ್ಕಾರಿ ಆಡಳಿತವು ಮಾಧ್ಯಮ ಸಂಸ್ಥೆಗಳ ಮಾಲೀಕರ ಮೇಲೆ ತಂದ ಒತ್ತಡದಿಂದಾಗಿ ಮಾದ್ಯಮಗಳು ಮೌನವಾಗಿವೆ.

ಹೀಗಾಗಿ ಅವರು ಸತ್ಯ ಏನೆಂದು ಹೇಳಲು ಹೆದರುತ್ತಾರೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಅದಕ್ಕಾಗಿಯೇ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದೇವೆ. ಇದರ ಮುಖ್ಯ ಉದ್ದೇಶವೇ, ಜನರನ್ನು ಮಾತನ್ನು ಆಲಿಸುವುದು ಮತ್ತು ಭಾರತೀಯ ಸಮಾಜದಲ್ಲಿ ಬಿಜೆಪಿ ಹರಡುತ್ತಿರುವ ದ್ವೇಷ ಮತ್ತು ಕೋಪವನ್ನು ಎದುರಿಸುವುದು ಎಂದು ಅವರು ಪ್ರತಿಪಾದಿಸಿದ್ದಾರೆ.

ಇನ್ನು ಭಾರತದ ಕನಸು ಮುರಿದುಹೋಗಿದೆ, ಆದರೆ ಚದುರಿ ಹೋಗಿಲ್ಲ. ಆ ಕನಸನ್ನು ನನಸಾಗಿಸಲು ನಾವು ಭಾರತವನ್ನು ಒಟ್ಟುಗೂಡಿಸುತ್ತಿದ್ದೇವೆ. ನಮ್ಮ ಪ್ರಯಾಣ ಮುಂದುವರೆದಂತೆ, ಜನರು ನಮ್ಮೊಂದಿಗೆ ಸೇರುತ್ತಿದ್ದಾರೆ. ಅವರ ಕಣ್ಣುಗಳಲ್ಲಿ ಭರವಸೆಯಿದೆ, ಅವರು ನಮಗೆ ಏನನ್ನಾದರೂ ಹೇಳಲು ಬಯಸುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/state-bjp-allegation-on-siddaramaiah/

ನಾವು ಸಾಧ್ಯವಾದಷ್ಟು ಜನರ ಮಾತನ್ನು ಕೇಳಲು ಪ್ರಯತ್ನಿಸುತ್ತಿದ್ದೇವೆ. ಅವರು ಭರವಸೆಯೊಂದಿಗೆ ನಮ್ಮೊಂದಿಗೆ ಸೇರುತ್ತಿದ್ದಾರೆ. ಅವರ ನಿರೀಕ್ಷೆಗಳಿಗೆ ತಕ್ಕಂತೆ ದೇಶದ ಭವಿಷ್ಯವನ್ನು ಭದ್ರಪಡಿಸುವುದು ನಮ್ಮ ಕರ್ತವ್ಯ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

Exit mobile version