ಒಂದೇ ದಿನದಲ್ಲಿ ಮಸೀದಿ, ಫಿಲೋಮಿನಾ ಚರ್ಚ್ ಮತ್ತು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ರಾಹುಲ್‌ ಗಾಂಧಿ

Mysuru : ನಾಡಹಬ್ಬ ದಸರೆಯ(Dasara) ಸಂದರ್ಭದಲ್ಲಿ ಭಾರತ್ ಜೋಡೋ ಯಾತ್ರೆಯ(Bharat Jodo Yatra) ಭಾಗವಾಗಿ ಕಾಂಗ್ರೆಸ್‌ ನಾಯಕ (Congress Leader) ರಾಹುಲ್‌ ಗಾಂಧಿ (Rahul Gandhi) ಅವರು ಅರಮನೆ ನಗರಿ ಮೈಸೂರಿನ ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.

ಭಾರತ ಐಕ್ಯತಾ ಯಾತ್ರೆಯು ಮೈಸೂರು(Mysuru) ಮೂಲಕ ಸಾಗುವ ವೇಳೆಯಲ್ಲಿ ಅಪಾರ ಸಂಖ್ಯೆಯ ಜನರು ರಾಹುಲ್‌ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಈ ವೇಳೆ ರಾಹುಲ್‌ ಗಾಂಧಿಯವರು ಮೈಸೂರು ನಗರದಲ್ಲಿರುವ ಮಸಜಿದ್-ಇ-ಅಝಮ್ ಮಸೀದಿಗೆ ಭೇಟಿ ನೀಡಿ ಪ್ರಾರ್ಥಿಸಿ, ಮುಸ್ಲಿಂ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ನಂತರ ಮೈಸೂರಿನ ಐತಿಹಾಸಿಕ ಸಂತ ಫಿಲೋಮಿನಾ ಚರ್ಚ್ಗೆ(St. Philomina Church) ಭೇಟಿ ನೀಡಿ, ಕ್ರಿಶ್ಚೀಯನ್ ಧರ್ಮಗುರುಗಳ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಕೆ.ಸಿ.ವೇಣುಗೋಪಾಲ ಮತ್ತಿತರ ಕಾಂಗ್ರೆಸ್ ನಾಯಕರು ಹಾಜರಿದ್ದರು.

ಇದನ್ನೂ ಓದಿ : https://vijayatimes.com/use-20-20-20-law-for-eye-health/

ಇದಕ್ಕೂ ಮುನ್ನ ಎಐಸಿಸಿ ನಾಯಕರಾದ ರಾಹುಲ್‌ ಗಾಂಧಿ ಅವರು, ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ (Rahul Gandhi visits chammundi hill) ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕರಾದ ಸಿದ್ದರಾಮಯ್ಯ(Siddaramaiah) ಅವರು ಉಪಸ್ಥಿತರಿದ್ದರು.

ದುರ್ಗಾಮಾತೆಯ ಮೂರ್ತಿ ನೀಡಿ ಭಾರತ ಐಕ್ಯತಾ ಯಾತ್ರೆ ಯಶಸ್ವಿಯಾಗಲಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀಗಳು ಹಾರೈಸಿದರು. ಇದೇ ವೇಳೆ ರಾಹುಲ್‌ ಗಾಂಧಿ ಅವರು ಚಾಮುಂಡಿ ಬೆಟ್ಟಕ್ಕೂ (Rahul Gandhi visits chammundi hill) ಭೇಟಿ ನೀಡಿ, ಚಾಮುಂಡೇಶ್ವರಿಯ ಆರ್ಶೀವಾದ ಪಡೆದರು.

https://fb.watch/fWq74_BabU/

ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌(State Congress) ಈ ಕುರಿತು ಟ್ವೀಟ್‌(Tweet) ಮಾಡಿದ್ದು, ಕರ್ನಾಟಕದಲ್ಲಿ ಬಸವಳಿದಿರುವ ಜೈನ ಬಸದಿಗಳು, ಹಾಗೂ ತೀರ್ಥಂಕರ ಪ್ರತಿಮೆಗಳನ್ನು ಮರುಸ್ಥಾಪಿಸುತ್ತೇವೆ ಎಂದಿತ್ತು ಬಿಜೆಪಿ. ಒಂದೇ ಒಂದು ಬಸದಿಗೂ ಕಾಯಕಲ್ಪ ನೀಡಲಿಲ್ಲ, ಪ್ರತಿಮೆ ಸ್ಥಾಪಿಸಲಿಲ್ಲ. ಬದಲಿಗೆ ಪಠ್ಯಪುಸ್ತಕದಲ್ಲಿ ಜೈನ ತೀರ್ಥಂಕರರಿಗೆ ಅವಮಾನಿಸಿತ್ತು ಸರ್ಕಾರ. ಕೊಟ್ಟ ಮಾತು ಮರೆತಿದ್ದೇಕೆ? ಎಂದು ಪ್ರಶ್ನಿಸಿದೆ.

Exit mobile version