ರಾಹುಲ್‌ ಗಾಂಧಿಗೆ ‘ಕೆಜಿಎಫ್‌’ ಕಾಪಿರೈಟ್‌ ಸಂಕಷ್ಟ : ಕರ್ನಾಟಕ ಹೈಕೋರ್ಟ್‌ ಪ್ರಕರಣ ರದ್ದುಗೊಳಿಸಲು ನಕಾರ

ಬೆಂಗಳೂರು : ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ(Rahul Gandhi) ವಿರುದ್ಧದ ಕಾಪಿರೈಟ್‌ ಪ್ರಕರಣವನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ರದ್ದುಪಡಿಸಲು ಹೈಕೋರ್ಟ್‌(High Court) ನಿರಾಕರಿಸಿದೆ. ಭಾರತ್‌ ಜೋಡೋ ಯಾತ್ರೆಯ ವೇಳೆ ಕಳೆದ ನವೆಂಬರ್‌ ನಡೆದ ಕೆಜಿಎಫ್‌: ಚಾಪ್ಟರ್‌ 2 ಹಾಡನ್ನು ಅನುಮತಿಯಿಲ್ಲದೇ ಬಳಸಿದ್ದರು. ಇದೀಗ ಹೈಕೋರ್ಟ್‌ ಅವರ ಮೇಲೆ ದಾಖಲಾಗಿದ್ದ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಎಂಆರ್‌ಟಿ ಮ್ಯೂಸಿಕ್‌ ಸಂಸ್ಥೆ(MRT Music Institute) ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ, ಜೈರಾಮ್‌ ರಮೇಶ್‌(Jai Ram Ramesh) ಮತ್ತು ಸುಪ್ರಿಯಾ ಶ್ರೀನಾಥೆ(Supriya Shrinathe) ವಿರುದ್ಧ ಕೆಜಿಎಫ್‌ ಚಾಪ್ಟರ್‌ 2(KGF Chapter 2) ಸಿನಿಮಾದ ಹಾಡನ್ನು ಅನುಮತಿಯಿಲ್ಲದೇ ಬಳಸಿದ್ದಕ್ಕಾಗಿ ಕಾಪಿರೈಟ್‌ ಉಲ್ಲಂಘನೆ ಪ್ರಕರಣ ದಾಖಲಿಸಿತ್ತು.ಕಾಂಗ್ರೆಸ್‌ ನಾಯಕರು ಆ ಪ್ರಕರಣವನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಿದ್ದರು. ಆದರೆ, ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ ತಿರಸ್ಕರಿಸಿದೆ.

ಇದನ್ನೂ ಓದಿ : ಹಗಲಿನಲ್ಲಿ ಬಳಸುವ ವಿದ್ಯುತ್‌ಗೆ ಶೇ.20 ಕಡಿಮೆ ಶುಲ್ಕ: ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಬದಲಾವಣೆಗೆ ಕೇಂದ್ರ ನಿರ್ಧಾರ

ವಕೀಲ ವಿಕ್ರಮ್ ಹುಯಿಲ್ಗೋಳ್ ಕಾಂಗ್ರೆಸ್(Congress) ನಾಯಕರ ಪರ ವಾದಿಸಿ ಉದ್ದೇಶಪೂರ್ವಕವಾಗಿ ನಮ್ಮ ಕಕ್ಷಿದಾರರು ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿಲ್ಲ. ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ ಇದರಲ್ಲಿ ಯಾವುದೇ ಉದ್ದೇಶ ಕೂಡ ಇರಲಿಲ್ಲ. ಅದಲ್ಲದೇ ಹಕ್ಕುಸ್ವಾಮ್ಯ ಉಲ್ಲಂಘಿಸಿ ಯಾವುದೇ ಹಣವನ್ನು ಗಳಿಸಿಲ್ಲ ಎಂದು ಹೇಳಿದ್ದರು.

ಇನ್ನು ವಕೀಲ ಎಸ್ ಶ್ರೀರಂಗ(S Sri Ranga) ಎಂಆರ್‌ಟಿ ಸಂಗೀತವನ್ನು ಪ್ರತಿನಿಧಿಸಿ ಯಾವುದೇ ಹಣವನ್ನು ಅವರು ಗಳಿಸದಿದ್ದರೂ ಸಂಪೂರ್ಣ ಯಾತ್ರೆಯ ಮೂಲಕ ತುಂಬಾ ಜನಪ್ರಿಯತೆ ಗಳಿಸಿದ್ದಾರೆ. ನಮ್ಮ ಹಾಡಿನ ಮೂಲ ಸಾಹಿತ್ಯವನ್ನು ಬ್ಲಾಕ್ ಅದಲ್ಲದೇ ಕಾಂಗ್ರೆಸ್‌ ನಾಯಕರು ತಿದ್ದಿದ್ದಾರೆ ಎಂದು ವಾದ ಮಂಡಿಸಿದ್ದರು. ಇನ್ನು ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯಲ್ಲಿ(Bharat Jodo Yatra) ಎಂಆರ್‌ಟಿ ಮ್ಯೂಸಿಕ್‌ ಮಾಲೀಕತ್ವದ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ಹಾಡನ್ನು ಬಳಸಲಾಗಿತ್ತು.

ರಶ್ಮಿತಾ ಅನೀಶ್

Exit mobile version