ಪಿಎಫ್‌ಐ ಮೇಲೆ ಮತ್ತೆ 8 ರಾಜ್ಯಗಳಲ್ಲಿ  ಧಾಳಿ ;  ಕರ್ನಾಟಕದಲ್ಲಿ 60 ಪಿಎಫ್‌ಐ ಸದಸ್ಯರ ಬಂಧನ

ಬೆಂಗಳೂರು : ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಬೆಳವಣಿಗೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFA) ಮೇಲೆ ಎರಡನೇ ಸುತ್ತಿನ ದಾಳಿ ನಡೆಸಿದೆ.  

PFI

ಎನ್‌ಐಎ ತೀವ್ರಗಾಮಿ ಸಂಘಟನೆಯ ಮೇಲೆ ತನ್ನ ದಮನವನ್ನು ಮುಂದುವರೆಸಿದ್ದು,  ಎಂಟು ರಾಜ್ಯಗಳಲ್ಲಿ (Raid on PFI) ದಾಳಿ ನಡೆಸಿ ಪಿಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದೆ.

ಕರ್ನಾಟಕ(KARNATAKA) ವಿವಿದೆಡೆ ಎರಡನೇಯ ಸುತ್ತಿನ ದಾಳಿ ನಡೆಸಿರುವ ಎನ್‌ಐಎ ಸುಮಾರು 60ಕ್ಕೂ ಹೆಚ್ಚು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದೆ.

https://vijayatimes.com/parle-g-biscuits-history/

ಎನ್‌ಐಎ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ಐ ಮುಖಂಡರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿಗಳು ಲಭಿಸಿವೆ.

ಎನ್‌ಐಎ ನೀಡಿದ ಸುಳಿವುಗಳ ಆಧಾರದ ಮೇಲೆ ಪೊಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ಎಂಟು ರಾಜ್ಯಗಳಲ್ಲಿ ದಾಳಿ ನಡೆಸಿವೆ.

ಅಸ್ಸಾಂನ (Asam) ಗೋಲ್ಪಾರಾ, ಕಮ್ರೂಪ್, ಬರ್ಪೇಟಾ, ಧುಬ್ರಿ, ಬಾಗ್ಸಾ, ದರ್ರಾಂಗ್, ಉದಾಲ್ಗುರಿ ಮತ್ತು ಕರೀಂಗಂಜ್ ಜಿಲ್ಲೆಗಳಲ್ಲಿ ದಾಳಿ ನಡೆಸಿ 21 ಪಿಎಫ್‌ಐ ಸದಸ್ಯರನ್ನು ಬಂಧಿಸಲಾಗಿದೆ.

ಇಂದು ಬೆಳಗ್ಗೆ ಆರಂಭವಾದ ದಾಳಿ ಇನ್ನೂ ಮುಂದುವರಿದಿದೆ.

ಇನ್ನೊಂದೆಡೆ ಕರ್ನಾಟಕದಲ್ಲಿ, 60 ಪಿಎಫ್‌ಐ ಸದಸ್ಯರನ್ನು ‘ತಡೆಗಟ್ಟುವ ಕಸ್ಟಡಿ’ (Raid on PFI) ಅಡಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅವರನ್ನು ಸ್ಥಳೀಯ ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಗುತ್ತದೆ.

NIA

ಈ ಪಿಎಫ್‌ಐ ಸದಸ್ಯರು ಎನ್‌ಐಎ ಸಿಬ್ಬಂದಿಯನ್ನು ತಡೆದು ಪ್ರತಿಭಟನೆ ನಡೆಸಿದ್ದರು ಅಥವಾ ಸ್ಥಳೀಯವಾಗಿ ತೊಂದರೆ ಸೃಷ್ಟಿಸಿದ್ದರು ಎಂದು ಆರೋಪಿಸಲಾಗಿದೆ.

ಇನ್ನು ಕೋಲಾರ ಜಿಲ್ಲೆಯಲ್ಲಿ ಆರು ಮಂದಿ ಪಿಎಫ್‌ಐ ಸದಸ್ಯರನ್ನು, ವಿಜಯಪುರದಲ್ಲಿ ಪಿಎಫ್‌ಐ ಜಿಲ್ಲಾಧ್ಯಕ್ಷ ಅಶ್ಫಾಕ್ ಜಮಖಂಡಿ, ಚಿತ್ರದುರ್ಗದಲ್ಲಿ ಪಿಎಫ್‌ಐ ಮುಖಂಡ ಅಫ್ಹಾನ್ ಅಲಿ,

ಬಳ್ಳಾರಿ ಜಿಲ್ಲೆಯಲ್ಲಿ ಉಗ್ರಗಾಮಿ ಸಂಘಟನೆಯ ನಾಲ್ವರನ್ನು, ಚಾಮರಾಜನಗರದಲ್ಲಿ ಇಬ್ಬರು ಪಿಎಫ್‌ಐ ಮುಖಂಡರನ್ನು  ಮತ್ತು ಚಾಮರಾಜನಗರದ ಪಿಎಫ್‌ಐ ಜಿಲ್ಲಾಧ್ಯಕ್ಷ ಕಪಿಲ್ ಮತ್ತು ಕಾರ್ಯದರ್ಶಿ ಸುಹೈಬ್ ಅವರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿದ್ದಾರೆ.

-ಮಹೇಶ್.ಪಿ.ಎಚ್

Exit mobile version