ವರದಕ್ಷಿಣೆಗೋಸ್ಕರ ಪತ್ನಿಗೆ ಸಂಬಂಧಿಕರಿಂದಲೇ ಸಾಮೂಹಿಕ ಅತ್ಯಾಚಾರ ಮಾಡಿಸಿ ವೀಡಿಯೋ ಮಾಡಿದ ಪತಿ!

rajasthan

ರಾಜಸ್ಥಾನದ ಭರತ್‌ಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಹೆಂಡತಿಯಿಂದ 1.5 ಲಕ್ಷ ರೂಪಾಯಿ ವರದಕ್ಷಿಣೆ ತಂದುಕೊಡು ಎಂದು ಪೀಡಿಸಿದ್ದಾನೆ. ಇದಕ್ಕೆ ಒಪ್ಪದ ಹೆಂಡತಿಗೆ ತನ್ನ ಸಂಬಂಧಿಕರಿಗೆ ಹೇಳಿ ಸಾಮೂಹಿಕ ಅತ್ಯಾಚಾರ ಮಾಡಿಸಿದ್ದಾನೆ.

ಸಂಬಂಧಿಕರು ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವುದನ್ನು ವೀಡಿಯೋ ಮಾಡಿ ಅದನ್ನು ಅಶ್ಲೀಲ ವೆಬ್‌ಸೈಟ್ ನಲ್ಲಿ ಹಾಕಿ ದುಡ್ಡು ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ತನ್ನ ಹೆಂಡತಿ ಮೇಲೆ ಸಂಬಂಧಿಕರಿಂದ ಅತ್ಯಾಚಾರ ಮಾಡಿಸಿ ವೀಡಿಯೊವನ್ನು ಬಲವಂತವಾಗಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಲೈಂಗಿಕ ದೌರ್ಜನ್ಯದ ವಿಡಿಯೋವನ್ನು ಅಪ್‌ಲೋಡ್ ಮಾಡುವ ಮೂಲಕ ವರದಕ್ಷಿಣೆ ಹಣವನ್ನು ಪಡೆಯುವುದಾಗಿ ಪತಿ ತನ್ನ ಹೆಂಡತಿಗೆ ಸವಾಲ್ ಹಾಕಿದ್ದಾನೆ ಎಂಬುದು ಪೊಲೀಸರಿಂದ ತಿಳಿದುಬಂದಿದೆ. ಸಂತ್ರಸ್ತೆ ತನ್ನ ಪತಿ ಮತ್ತು ಆತನ ಸಂಬಂಧಿಕರಿಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

ಭರತ್‌ಪುರದ ಕಮಾನ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ದೌಲತ್ ಸಾಹು ಅವರು, “ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆತನ ಇಬ್ಬರು ಸಂಬಂಧಿಕರು ನನ್ನ ಮೇಲೆ ಅತ್ಯಾಚಾರ ಮಾಡಿ, ಅದನ್ನು ವೀಡಿಯೋ ಮಾಡಿಕೊಂಡು ವರದಕ್ಷಿಣೆ ಕೊಡು ಎಂದು ಹಿಂಸಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ. ವಿಡಿಯೋ ಅಶ್ಲೀಲ ವೆಬ್‌ಸೈಟ್ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ಸಮಯದಲ್ಲಿ, ಇದು ಇನ್ನೂ ದೃಢೀಕರಿಸಲ್ಪಟ್ಟಿಲ್ಲ ಎಂದು ಹೇಳಿದರು.

ಈ ಬಗ್ಗೆ ಸಂತ್ರಸ್ತೆ ಮಾತನಾಡಿ, “ನನ್ನ ಅತ್ತೆ ವರದಕ್ಷಿಣೆಗಾಗಿ ನನಗೆ ಕಿರುಕುಳ ನೀಡುತ್ತಿದ್ದರು. ಅವರಿಗೆ ವರದಕ್ಷಿಣೆ ನೀಡದಿದ್ದಾಗ, ನನ್ನ ಪತಿ ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಮತ್ತು ಆ ಘಟನೆಯನ್ನು ಚಿತ್ರೀಕರಿಸಿ, ಅಶ್ಲೀಲ ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಿ ಹಣ ಪಡೆಯುತ್ತೀನಿ ಎಂದು ಬೆದರಿಕೆ ಹಾಕಿದರು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version