ಆಳ್ವಾರ್ ದೇವಾಲಯ ಧ್ವಂಸದ ಹಿಂದೆ ಕಾಂಗ್ರೆಸ್ ಕೈವಾಡವಿದೆ : ಬಿಜೆಪಿ!

ರಾಜಸ್ಥಾನದಲ್ಲಿ(Rajasthan) ಸರಿಸುಮಾರು 300 ವರ್ಷಗಳಷ್ಟು ಹಳೆಯದಾದ ಶಿವನ ಮಂದಿರವನ್ನು ಕೆಡವಿದ ಪ್ರಕರಣದ ಹಿನ್ನಲೆ ತನಿಖೆಗಾಗಿ ಭಾರತೀಯ ಜನತಾ ಪಕ್ಷ (BJP) ಐದು ಸದಸ್ಯರ ಸಮಿತಿಯನ್ನು ರಚಿಸಿದೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ(Alwar District) ಸರಾಯ್ ಮೊಹಲ್ಲಾದಲ್ಲಿ ದೇವಾಲಯವನ್ನು ಕೆಡವಿದ್ದಾರೆ.

ಸಿಕರ್ ಸಂಸದ ಸ್ವಾಮಿ ಸುಮೇಧಾನಂದ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಬಿಜೆಪಿ ಸಮಿತಿಯು, ಮೂರು ದಿನಗಳಲ್ಲಿ ರಾಜ್‌ಗಢಕ್ಕೆ ಭೇಟಿ ನೀಡಿ, ವಾಸ್ತವ ವರದಿಯನ್ನು ಸಿದ್ಧಪಡಿಸಿ, ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ಅವರಿಗೆ ಹಸ್ತಾಂತರಿಸಲಿದೆ ಎಂದು ಹೇಳಲಾಗಿದೆ. ಸ್ತಳೀಯ ಸುದ್ದಿವಾಹಿನಿ ಜೊತೆ ಮಾತನಾಡಿದ ಬಿಜೆಪಿ ನಾಯಕ ಸಂಜಯ್ ನರುಕಾ, “ಸಮಿತಿಯಲ್ಲಿ ಚಂದ್ರಕಾಂತ ಮೇಘವಾಲ್, ರಾಜೇಂದ್ರ ಸಿಂಗ್ ಶೇಖಾವತ್, ಬ್ರಜ್ ಕಿಶೋರ್ ಉಪಾಧ್ಯಾಯ ಮತ್ತು ಭವಾನಿ ಮೀನಾ ಇದ್ದಾರೆ” ಎಂದು ಹೇಳಿದರು.

ಘಟನೆಯ ವಿಡಿಯೋವನ್ನು ಗುರುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರೌಲಿ ಮತ್ತು ಜಹಾಂಗೀರಪುರಿಯಲ್ಲಿ ಕಣ್ಣೀರು ಸುರಿಸಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತಿರುವುದು ಕಾಂಗ್ರೆಸ್‌ನ ಜಾತ್ಯತೀತತೆಯಾಗಿದೆ ಎಂದರು. ಮತ್ತೊಂದು ಟ್ವೀಟ್‌ನಲ್ಲಿ, ಅಮಿತ್ ಮಾಳವಿಯಾ ಆರೋಪಿಸಿದ್ದು, “ಏಪ್ರಿಲ್ 18 ರಂದು, ಯಾವುದೇ ಸೂಚನೆ ನೀಡದೆ, ಆಡಳಿತವು ರಾಜಸ್ಥಾನದ ರಾಜ್‌ಗಢ ಪಟ್ಟಣದಲ್ಲಿ 85 ಹಿಂದೂಗಳ ಪಕ್ಕಾ ಮನೆಗಳು ಮತ್ತು ಅಂಗಡಿಗಳ ಮೇಲೆ ಬುಲ್ಡೋಜರ್‌ಗಳನ್ನು ಚಲಾಯಿಸಿದೆ.

ರಾಜಸ್ಥಾನದಲ್ಲಿ ಮಂದಿರ ಧ್ವಂಸ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೌನ ವಹಿಸಿದ್ದಾರೆ ಎಂದು ಬಿಜೆಪಿ ಮುಖಂಡ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ. “ಗಲಭೆಕೋರರ ವಿರುದ್ಧ ಬುಲ್ಡೋಜರ್ – ಕೋಮುವಾದಿ, ಹಿಂದೂ ನಂಬಿಕೆಯ ಮೇಲೆ ಬುಲ್ಡೋಜರ್-ಜಾತ್ಯತೀತ” ಎಂದು ಹೇಳುವ ಮೂಲಕ ಕಾಂಗ್ರೆಸ್‌ಗೆ ಮಾತಿನ ಚಾವಟಿ ಬೀಸಿದ್ದಾರೆ.

Exit mobile version