ರಾಜ್ಯದಾದ್ಯಂತ ಡಿಸೆಂಬರ್ 20-22ರವರೆಗೆ ಸಿಗಲ್ಲ ಮದ್ಯ

ಚಿಕ್ಕಮಗಳೂರು, ಡಿ. 10: ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ – 2020 ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯುವ ಮೊದಲು ಡಿಸೆಂಬರ್ 20 ರಿಂದ ಡಿಸೆಂಬರ್ 22ರವರೆಗೆ ಮದ್ಯವನ್ನು ನಿಷೇಧ ಮಾಡಲಾಗಿದೆ. ಹೀಗಾಗಿ ಈ ಎರಡು ದಿನ ರಾಜ್ಯದಲ್ಲಿ ಎಣ್ಣೆ ಸಿಗುವುದಿಲ್ಲ.

ಈ ಕುರಿತಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಡಾ.ಬಗಾದಿ ಗೌತಮ್, ಜಿಲ್ಲೆಯಲ್ಲಿ ಮತದಾನದ ಪಕ್ರಿಯೆಯು ಒಂದೇ ಹಂತದಲ್ಲಿ ನಡೆಯಲಿರುವ ಸಂದರ್ಭದಲ್ಲಿ ಅಭ್ಯರ್ಥಿಗಳ ಪರ ಮೆರವಣಿಗೆ, ಸಿಡಿಮದ್ದು, ಸುಡುವುದು, ಮದ್ಯಪಾನ ಮಾಡಿ ಗಲಾಟೆ ಮಾಡುವುದು ಇತ್ಯಾದಿ ಪೂರಕ ಸಂಭ್ರಮಾಚರಣೆಯ ಚಟುವಟಿಕೆಗಳನ್ನು ನಡೆಸುವ ಸಂಭವವಿದ್ದು, ಜಿಲ್ಲೆಯ ಕೆಲವು ಪ್ರದೇಶಗಳನ್ನು ಮತೀಯವಾಗಿ ಸೂಕ್ಷ್ಮವಾಗಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸಾರ್ವಜನಿಕರ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕರ್ನಾಟಕ ಅಬಕಾರಿ ಸಾಮಾನ್ಯ ಷರತ್ತುಗಳು ನಿಯಮಗಳು 1967ರ ನಿಯಮ 10ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಿಸೆಂಬರ್ 20 ರ ಬೆಳಿಗ್ಗೆ 5.೦೦ ಗಂಟೆಯಿಂದ ಡಿಸೆಂಬರ್ 22ರ ಸಂಜೆ 5.೦೦ ಗಂಟೆಯವರೆಗೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು ಮುಚ್ಚುವಂತೆ ಹಾಗೂ ಮದ್ಯ, ಬೀರ್, ಮದ್ಯಸಾರ ಇತ್ಯಾದಿ ಅಬಕಾರಿ ಪದಾರ್ಥಗಳ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Exit mobile version