ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

ತೆಲಗು ಚಿತ್ರರಂಗದ ಪ್ರಖ್ಯಾತ ನಟ, ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ (Ram Charan Teja) ತಮ್ಮ ನಟನೆಯನ್ನು ಮುಂದುವರೆಸುತ್ತಲೇ ಚಿತ್ರ ನಿರ್ಮಾಣದತ್ತ ತಮ್ಮ ಗಮನವನ್ನು ಹರಿಸುತ್ತಿದ್ದಾರೆ.ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವುದು (Ram Charan New movie) ಅವರ ಗುರಿಗಳಲ್ಲಿ ಒಂದಾಗಿದೆ. ವೀರ ಸಾವರ್ಕರ್ ಅವರ 140 ನೇ ಜನ್ಮದಿನದ ಪ್ರಯುಕ್ತ ರಾಮ್ ಚರಣ್ ನಿರ್ಮಾಣದ ಹೊಸ ಚಿತ್ರ ‘ದಿ ಇಂಡಿಯಾ ಹೌಸ್’(The India House) ಅನ್ನು ಘೋಷಿಸಲಾಯಿತು.

‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಪಕ ಅಭಿಷೇಕ್ ಅಗರ್ವಾಲ್ (Abhishek Agarwal) ಈ ಚಿತ್ರ ನಿರ್ಮಾಣ ತಂಡವನ್ನು ಸೇರಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ಕಾಣಿಸುತ್ತಿದ್ದಾರೆ ಮತ್ತು ಈ ಚಿತ್ರವು ವೀರ ಸಾವರ್ಕರ್ (Veer Savarkar) ಅವರ ಜೀವನದ ಸುತ್ತ ಕೇಂದ್ರೀಕೃತವಾಗಿರುತ್ತದೆ,

ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಗಳನ್ನು ಎತ್ತಿ ತೋರಿಸುತ್ತದೆ. ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ನಿಖಿಲ್ ಸಿದ್ಧಾರ್ಥ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಸಾವರ್ಕರ್ ಅವರು ನಾಲ್ಕು ವರ್ಷಗಳ ಕಾಲ (1906-1910) ಲಂಡನ್‌ನ ಇಂಡಿಯಾ ಹೌಸ್‌ನಲ್ಲಿ ವಾಸಿಸುತ್ತಿದ್ದರು, ಅಲ್ಲಿ ಅವರು ಬ್ರಿಟಿಷ್ (British) ಆಳ್ವಿಕೆಯ ವಿರುದ್ಧ ಹೋರಾಡಲು ತಂತ್ರಗಳನ್ನು ಅಭಿವೃದ್ಧಿಪಡಿಸಿದರು.

ಈ ಐತಿಹಾಸಿಕ ಸ್ಥಳವು ಚಿತ್ರದ ಶೀರ್ಷಿಕೆಗೆ ಸ್ಫೂರ್ತಿಯಾಗಿದೆ. ಈ ನಡುವೆಯೂ ಈ ಸಿನಿಮಾ ನಿರ್ಮಾಣದಲ್ಲಿ ರಾಮ್ ಚರಣ್ ಭಾಗಿಯಾಗಿರುವುದಕ್ಕೆ ಕೆಲವರು (Ram Charan New movie) ವಿರೋಧ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ತೆರೆ ಕಂಡು ಅದ್ಬುತ ಪ್ರದರ್ಶನ ನೀಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’(The Kashmir Files) ಚಿತ್ರವನ್ನು ಕೂಡ ಅಭಿಷೇಕ್ ನಿರ್ಮಾಣ ಮಾಡಿದ್ದರು,ಬಿಜೆಪಿಗರ ಬೆಂಬಲ ಈ ಚಿತ್ರಕ್ಕೆ ಇತ್ತು ಎಂಬುವುದು ಸ್ವಲ್ಪ ಜನರ ಆರೋಪ.

ಈಗ ಇದೇ ರೀತಿಯ ಆರೋಪ ‘ದಿ ಇಂಡಿಯಾ ಹೌಸ್’ (The India House) ಚಿತ್ರಕ್ಕೂ ಕೇಳಿ ಬರುತ್ತಿದೆ. ಈ ಸಿನಿಮಾಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ವಿರೋಧ ಬಂದರೂ ಆಶ್ಚರ್ಯ ಏನಿರಲ್ಲ.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಎಷ್ಟು ವಿವಾದ ಸೃಷ್ಟಿಸಿದ್ದರೂ ಅಭಿಷೇಕ್ಯಾವುದಕ್ಕೂ ತಲೆ ಕೆಡಿಸಿಕೊಂಡಿರಲಿಲ್ಲ ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತು.ರಾಮ್ ಚರಣ್ ಸದಾ ವಿವಾದದಿಂದ ದೂರ ಉಳಿಯಲು ಬಯಸುತ್ತಾರೆ ಆದರೆ ಮುಂದೆ ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ರಾಮಚರಣ್ ಟಾಲಿವುಡ್ ನ (Tollywood) ಟಾಪ್ ನಟನಾಗಿರುವ ರಾಮಚರಣ್ ಇವರು ಹೈದರಾಬಾದಿನಲ್ಲಿ 1985 ಮಾರ್ಚ್ 27 ರಂದು ಜನಿಸಿದರು.

ಎರಡು ಫಿಲ್ಮ್ ಫೇರ್, ಎರಡು ನಂದಿ ಪ್ರಶಸ್ತಿ ಸೇರಿದಂತೆ ತಮ್ಮ ನಟನೆಗಾಗಿ ಹಲವು ಪ್ರಶಸ್ತಿ ಪಡೆದ್ದಿದ್ದಾರೆ.

ಚಿರುತ' ಚಿತ್ರದಿಂದ 2007 ರಲ್ಲಿ ಸಿನಿಪಯಣ ಆರಂಭಿಸಿದರು. ಇವರ ಕರಿಯರ್ ಗೆ ನಂತರಮಗಧೀರ‘(Magadheera) ಚಿತ್ರ ಬಿಗ್ ಬ್ರೇಕ್ ನೀಡಿತು.

ತಮ್ಮದೇ ಆದ ಪ್ರೊಡಕ್ಷನ್ಸ್ ಕಂಪನಿಯಾದ ಕೋನಿಡೇಲಾ ಪ್ರೊಡಕ್ಷನ್ಸ್ ಕಂಪನಿ’ ಮೂಲಕ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ.

ರಶ್ಮಿತಾ ಅನೀಶ್

Exit mobile version