ರಾಮ ಜನ್ಮಭೂಮಿ‌ ಹೋರಾಟ ಪ್ರಕರಣ: ಹಳೆ ಪ್ರಕರಣಕ್ಕೆ ಹುಬ್ಬಳ್ಳಿ ಪೊಲೀಸರಿಂದ ಮತ್ತೆ ಮರುಜೀವ

Hubballi: ಹುಬ್ಬಳ್ಳಿಯ (Hubballi) ರಾಮ ಜನ್ಮಭೂಮಿ ಪಕರಣಕ್ಕೆ ಸಂಬಂಧಪಟ್ಟಂತೆ 31 ವರ್ಷದ ಬಳಿಕ ಮರುಜೀವ ಬಂದಿದ್ದು, ಆ ಮೂಲಕ ರಾಮಜನ್ಮಭೂಮಿ ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ. ಇನ್ನು 31 ವರ್ಷದ ಬಳಿಕ ಓರ್ವ ಆರೋಪಿಯನ್ನ‌ ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ.

ಇನ್ನು ಈ ಹಳೆಯ ಪ್ರಕರಣಕ್ಕೆ‌ ಮರುಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದು, ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ (Rama Janmabhoomi) ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದು, ಹುಬ್ಬಳ್ಳಿ ಪೊಲೀಸರಿಂದ ಅಂದಿನ ಆರೋಪಿಗಳಿಗಾಗಿ ಏಕಾಏಕಿ ಹುಡುಕಾಟ ಆರಂಭಿಸಿದ್ದಾರೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು (Srikanth Poojari) ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಪ್ರಕರಣ ದಾಖಲಾದಾಗ ಆರೋಪಿತ ವ್ಯಕ್ತಿಗಳು 30 ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ (Gurunathsa Katigara), ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಏನಿದು ಪ್ರಕರಣ:
ಡಿಸೆಂಬರ್ (December) 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿದ್ದು, ಕರಸೇವೆಗೂ ಮುನ್ನ, ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿತ್ತು. ಸದ್ಯ ಈ ಹಳೆ ಪ್ರಕರಣಕ್ಕೆ‌ ಮರುಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ.

ಆಸ್ತಿತೆರಿಗೆ ಬಾಕಿ ಉಳಿಸಿಕೊಂಡವರಿಗೆ ಬಿಬಿಎಂಪಿ ಎಚ್ಚರಿಕೆ:
ಆಸ್ತಿ ತೆರಿಗೆ (Income Tax) ಕಟ್ಟದೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕೆಲವು ದಿನಗಳ ಹಿಂದೆ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇದೀಗ ಮತ್ತೆ 6 ಲಕ್ಷ ಮಂದಿಗೆ ಬಾಕಿ ತೆರಿಗೆ ಪಾವತಿಸುವಂತೆ ಆದೇಶ ಹೊರಡಿಸಿದೆ. ಸುಮಾರು 500 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ 6 ಲಕ್ಷ ಮಂದಿಗೆ ಸಂದೇಶ ಕಳುಹಿಸಲಾಗಿದೆ.

ಆದಾಗ್ಯೂ ಅವರು ತೆರಿಗೆ ಬಾಕಿ ಪಾವತಿ ಮಾಡದಿದ್ದರೆ ಈ ಸಂದೇಶದಲ್ಲಿ ಉಲ್ಲೇಖಿಸಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ (BBMP) ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್​ ತಿಳಿಸಿದ್ದಾರೆ.

ಬಿಬಿಎಂಪಿ ಸಂದೇಶದಲ್ಲೇನಿದೆ?
‘ಈ ಅಪ್ಲಿಕೇಷನ್ (Application) ಸಂಖ್ಯೆಯ (ನಿರ್ದಿಷ್ಟ ಅರ್ಜಿ ಸಂಖ್ಯೆಯನ್ನು ಉಲ್ಲೇಖಿಸಿ) ಆಸ್ತಿಯ ತೆರಿಗೆಯನ್ನು ಪಾವತಿ ಮಾಡಲಾಗಿಲ್ಲ. ದಯವಿಟ್ಟು ಗಮನಿಸಿ, ತೆರಿಗೆ ಪಾವತಿಸದೇ ಇರುವುದರಿಂದ ನಿಮ್ಮನ್ನು ‘ಬಿಬಿಎಂಪಿ ಕಾಯ್ದೆ 2020’ರ ಅಡಿಯಲ್ಲಿ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ. ಇದರಲ್ಲಿ ಚರಾಸ್ತಿಗಳ ಸೀಲಿಂಗ್, ಮುಟ್ಟುಗೋಲು, ಸಬ್-ರಿಜಿಸ್ಟ್ರಾರ್ (Sub-Registrar) ನೀಡಿದ ಎನ್ಕಂಬರೆನ್ಸ್ ಸರ್ಟಿಫಿಕೇಟ್ ವಶಪಡಿಸಿಕೊಳ್ಳುವಿಕೆ, ಹಿಂಪಡೆಯುವಿಕೆ, ಕ್ರಿಮಿನಲ್ ಪ್ರಕರಣ (Criminal Case) ದಾಖಲಿಸುವುದು ಸೇರಿವೆ.

ತೆರಿಗೆ ಪಾವತಿಸಲು ಈ ಲಿಂಕ್ https:// bbmptax.karnataka.gov.in/ ಕ್ಲಿಕ್ ಮಾಡಿ. ಯಾವುದೇ ಸ್ಪಷ್ಟೀಕರಣಕ್ಕಾಗಿ ನಿಮ್ಮ ಸ್ಥಳೀಯ ವಾರ್ಡ್ ಅಥವಾ ಎಆರ್​ಒ (Ward or ARO) ಕಚೇರಿಯನ್ನು ಸಂಪರ್ಕಿಸಿ. ಈಗಾಗಲೇ ತೆರಿಗೆ ಪಾವತಿಸಿದ್ದರೆ ದಯವಿಟ್ಟು ನಿರ್ಲಕ್ಷಿಸಿ’ ಎಂದು ಬಿಬಿಎಂಪಿಯು ತೆರಿಗೆದಾರರಿಗೆ ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಭವ್ಯಶ್ರೀ ಆರ್ ಜೆ

Exit mobile version