ಸೋನಿಯಾಜೀ ಇಟಾಲಿಯನ್‌ ಮೂಲದವರಾಗಿರಬಹುದು, ಆದ್ರೆ ಅವರು ಭಾರತೀಯರಿಗಿಂತ ಹೆಚ್ಚು ಭಾರತೀಯರು : ನಟಿ ರಮ್ಯಾ

Bengaluru : ಸೋನಿಯಾ ಗಾಂಧಿಜೀಯವರು ಬಹುಶಃ ಇಟಾಲಿಯನ್ ಮೂಲದವರಾಗಿರಬಹುದು ಆದರೆ ಅವರು ಹೆಚ್ಚು ಭಾರತೀಯರು ಎಂದು ಕನ್ನಡದ ನಟಿ ರಮ್ಯಾ (Ramya Tweet To Sonia Gandhi) ಹೇಳಿದ್ದಾರೆ.

ಈ ಕುರಿತು ಟ್ವೀಟ್‌ (Tweet) ಮಾಡಿರುವ ಅವರು, “ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಟಾಲಿಯನ್ ಮೂಲದವರು. ಆದರೆ ಅವರು ಭಾರತೀಯರಿಗಿಂತ ಹೆಚ್ಚು ಭಾರತೀಯರು ಎಂದು ಮಾಜಿ ಕಾಂಗ್ರೆಸ್‌ ಸಂಸದೆ ಮತ್ತು ನಟಿ ರಮ್ಯಾ ಹೇಳಿದ್ದಾರೆ.

ಇತ್ತೀಚೆಗಷ್ಟೇ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ (Ramya Tweet To Sonia Gandhi)ಜೊತೆಗೂಡಿ ಅಚ್ಚರಿ ಮೂಡಿಸಿದ್ದ ರಮ್ಯಾ ಟ್ವೀಟ್ ಮಾಡಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

2019ರ ಲೋಕಸಭಾ ಚುನಾವಣೆಯ ನಂತರ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಂಸದೆ ರಮ್ಯಾ,

ರಮ್ಯಾ ಟ್ವೀಟ್ : https://twitter.com/divyaspandana/status/1584809008321335297?s=20&t=KnS7enNDXvjGf2Nd7dZQCw

ಇದೀಗ ಭಾರತ್‌ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ರಮ್ಯಾ ಮರು ಆಗಮನ ಹೊಸ ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.

ಇದನ್ನೂ ಓದಿ : https://vijayatimes.com/bjp-slams-aravind-kejrival/

ಮಂಡ್ಯದಲ್ಲಿ ಸೋತ ನಂತರ ರಾಜಕೀಯ ಕ್ಷೇತ್ರದಿಂದ ಹೊರಗುಳಿದ ರಮ್ಯಾ ಕಾಂಗ್ರೆಸ್‌ನಿಂದ ದೂರವಾಗಿದ್ದರು. ಆದರೆ, ಆಕೆಯ ಇತ್ತೀಚಿನ ಟ್ವೀಟ್ ರಾಜಕೀಯಕ್ಕೆ ಮತ್ತೆ ಕಾಲಿಡುವ ಸೂಚನೆಯನ್ನು ಸೂಚಿಸುತ್ತದೆ.

ನಟಿ ರಮ್ಯಾ ಅವರು ಕಾಂಗ್ರೆಸ್(Congress) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಭಿನಂದಿಸಿದರು.

“ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಖರ್ಗೆ ಅವರಿಗೆ ಅಭಿನಂದನೆಗಳು, ಬಿಸಿಸಿಐ ಅಧ್ಯಕ್ಷರು, ಬ್ರಿಟಿಷ್ ಪ್ರಧಾನಿ  ಮತ್ತು ಕಾಂತಾರ ಭಾರತೀಯ ಗಲ್ಲಾಪೆಟ್ಟಿಗೆಯನ್ನು ಆಳುತ್ತಿದ್ದಾರೆ. ಕನ್ನಡಿಗರು ಮತ್ತು ಕರ್ನಾಟಕ ಧ್ವಜವು ಎತ್ತರಕ್ಕೆ ಹಾರುತ್ತಿದೆ”ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಮ್ಯಾ ಟ್ವೀಟ್ : https://twitter.com/divyaspandana/status/1585179471803359232?s=20&t=KnS7enNDXvjGf2Nd7dZQCw

ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ರಾಷ್ಟ್ರ ರಾಜಧಾನಿಯ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ಅವರು ಉನ್ನತ ಹುದ್ದೆಗೆ ಆಯ್ಕೆಯಾದ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

https://youtu.be/lLC_P0d_2kQ ಮಾರುಕಟ್ಟೆಗೆ ಕೃತಕ ಮಾಂಸ ! Watch out meat lovers!

ಈ ಸಂದರ್ಭದಲ್ಲಿ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ನಾಯಕರು ಮತ್ತು ಸಂಸದರು ಉಪಸ್ಥಿತರಿದ್ದರು.
Exit mobile version