ನಗ್ನ ಫೋಟೋಶೂಟ್ನಲ್ಲಿರುವ ಫೋಟೋವನ್ನು ಟ್ಯಾಂಪರ್ ಮಾಡಿ ಮಾರ್ಫ್ ಮಾಡಲಾಗಿದೆ : ರಣವೀರ್ ಸಿಂಗ್

Ranveer Singh

Mumbai : ನಗ್ನ ಫೋಟೋಶೂಟ್(Nude Photoshoot) ಪ್ರಕರಣದಲ್ಲಿ ಮುಂಬೈ ಪೊಲೀಸರು(Mumbai Police) ಬಾಲಿವುಡ್‌ ನಟ(Bollywood Actor) ರಣವೀರ್ ಸಿಂಗ್(Ranveer Singh) ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಯಾರೋ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿ ನಂತರ ಮಾರ್ಫ್‌ಮಾಡಿದ್ದಾರೆ ಎಂದು ಪೊಲೀಸರ ಮುಂದೆ ರಣವೀರ್‌ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್‌ ನಟ ರಣವೀರ್ ಸಿಂಗ್ ಅವರ ಹೇಳಿಕೆಯ ಪ್ರಕಾರ, ಫೋಟೋವನ್ನು ನಗ್ನ ರೀತಿಯಲ್ಲಿ ಚಿತ್ರೀಕರಿಸಲಾಗಿಲ್ಲ. ಯಾರೋ ತನ್ನ ಫೋಟೋವನ್ನು ಟ್ಯಾಂಪರ್ ಮಾಡಿ ನಂತರ ಮಾರ್ಫ್‌ ಮಾಡಿದ್ದಾರೆ. ಅದರಲ್ಲಿ ನನ್ನನ್ನು ನಗ್ನ ರೀತಿಯಲ್ಲಿ ಬಿಂಬಿಸಿದ್ದಾರೆ ಎಂದಿದ್ದಾರೆ. ಮುಂಬೈ ಪೊಲೀಸರು ರಣವೀರ್ ಸಿಂಗ್ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : https://vijayatimes.com/bjp-target-attack-over-siddaramaiah/

ಏನಿದು ಪ್ರಕರಣ? : ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, 294 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ 509 ಮತ್ತು 67 (ಎ) ಅಡಿಯಲ್ಲಿ ರಣವೀರ್‌ ಸಿಂಗ್ ಮೇಲೆ ಅಶ್ಲೀಲತೆಯ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆತನ ವಿರುದ್ಧ ಚೆಂಬೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು,

ಪೊಲೀಸರಿಗೆ ಬಂದಿರುವ ದೂರಿನಲ್ಲಿ ರಣವೀರ್ ಸಿಂಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿತ್ತು. ನಟನು ತನ್ನ ಛಾಯಾಚಿತ್ರಗಳ ಮೂಲಕ ಮಹಿಳೆಯರ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಮತ್ತು ಅವರ ನಮ್ರತೆಯನ್ನು ಅವಮಾನಿಸಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ.

https://youtu.be/XGIwmxD2cKA ಸಂಕಷ್ಟದಲ್ಲಿ ಇದ್ದ ಬಡ ಕುಟುಂಬದ ರಕ್ಷಣಾ ಕಾರ್ಯ !

ಕಳೆದ ಜುಲೈನಲ್ಲಿ ನಿಯತಕಾಲಿವೊಂದರ ಮುಖಪುಟಕ್ಕೆ ನೀಡಿದ ಚಿತ್ರದಲ್ಲಿ ನಟ ರಣವೀರ್‌ ಸಿಂಗ್‌ ನಗ್ನರಾಗಿ ಕಾಣಿಸಿಕೊಂಡಿದ್ದರು. ಈ ನಗ್ನ ಪೋಟೋಗಳು ಎಲ್ಲೆಡೆ ವೈರಲ್‌(Viral) ಆಗಿ, ತೀವ್ರ ಚರ್ಚೆಗೆ ಕಾರಣವಾಗಿದ್ದವು. ಬಾಲಿವುಡ್‌ನ ಅನೇಕ ನಟ-ನಟಿಯರು ರಣವೀರ್‌ ಸಿಂಗ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರೆ, ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

Exit mobile version