ರಾಪಿಡೋ ಅಕ್ರಮ ; ನೀವು ಹೋದರೇ ಗಾಡಿ ಸೀಜ಼್ ಜೊತೆಗೆ ದಂಡ ಪಕ್ಕ!

ರಾಜ್ಯದಲ್ಲಿ ರಾಪಿಡೋ(Rapido) ಬೈಕ್ ಟ್ಯಾಕ್ಸಿ(Bike Taxi) ವಿರುದ್ಧ ಸಾಕಷ್ಟು ದೂರುಗಳು ಆಟೋ ಚಾಲಕರು ಮತ್ತು ಕ್ಯಾಬ್(Cab) ಚಾಲಕರಿಂದ ಕೇಳಿಬಂದಿತ್ತು. ಬಿಳಿ ಬೋರ್ಡ್(White Board) ಇರುವ ಬೈಕ್ಗಳೆಲ್ಲಾ ಟ್ಯಾಕ್ಸಿ ಮಾಡಿಕೊಂಡು ಹೋದರೆ ನಾವೇನು ಮಾಡಬೇಕು? ಆರ್.ಟಿ.ಓ(RTO) ಅವರು ಇಂಥವರಿಗೆ ಹೇಗೆ ಅನುಮತಿ ನೀಡಿದ್ದಾರೆ ಎಂದು ಪ್ರಶ್ನಿಸಿದ್ದರು. ಈ ಕುರಿತು ವಿಜಯ ಟೈಮ್ಸ್(Vijayatimes) ಮಾಧ್ಯಮ ಕೂಡ ಹಳದಿ ಬೋರ್ಡ್ ಹೊಂದಿರುವ ಟ್ಯಾಕ್ಸಿ ಮತ್ತು ಆಟೋ ಚಾಲಕರ ನೋವಿನ ಕೂಗಿಗೆ ಸ್ಪಂದಿಸಿತ್ತು. ರಾಪಿಡೋ ಟ್ಯಾಕ್ಸಿ ಓಡಿಸುವುದು ತಪ್ಪು ಎಂದು ಹೇಳಿದರು ಕೂಡ ಮುಲಾಜಿಲ್ಲದೆ ರಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ನಡೆಸುತ್ತಿದ್ದರು.

ಇದನ್ನು ನಮ್ಮ ತಂಡ ಅನೇಕ ಬಾರಿ ಆಟೋ ಚಾಲಕರ ಬಳಿ ಈ ಕುರಿತು ಅಭಿಪ್ರಾಯವನ್ನು ಕೇಳಿ ಅದನ್ನು ಜನರ ಮುಂದಿಟ್ಟಿತ್ತು. ಆರ್.ಟಿ.ಓ ಕೂಡ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದೆ ತಪ್ಪಿಸಿಕೊಳ್ಳುತ್ತಿತ್ತು. ಸದ್ಯ ಈಗ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಇದಕ್ಕೆ ಉತ್ತರ ನೀಡಿದ್ದಾರೆ. ಅವರು ಸುತ್ತೋಲೆಯಲ್ಲಿ ತಿಳಿಸಿರುವ ಮಾಹಿತಿ ಹೀಗಿದೆ.

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಖಾಸಗಿ ದ್ವಿಚಕ್ರ ವಾಹನಗಳು ಕೆಲವೊಂದು ಅನಧಿಕೃತ ಅಗ್ರಿಗೇಟರ್ App ಅನ್ನು ಬಳಸಿಕೊಂಡು ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಸಾಗಿಸುತ್ತಿರುವುದು ಕಂಡುಬಂದಿದ್ದು, ಅಂತಹ ವಾಹನಗಳ ವಿರುದ್ಧ ಇಲಾಖೆಯು ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಕಾನೂನುಬಾಹಿರವಾಗಿ ಆಚರಣೆ ಮಾಡುತ್ತಿರುವ ಇಂತಹ ವಾಹನಗಳ ಬಳಕೆಯನ್ನು ಮಾಡದಿರುವಂತೆ ವಿನಂತಿಸಿದೆ.

ಹಾಗೂ ದ್ವಿಚಕ್ರ ವಾಹನಗಳ ಮಾಲೀಕರು ಕೂಡ ತಮ್ಮ ವಾಹನಗಳನ್ನು ಇಂತಹ App ಮೂಲಕ ಬಾಡಿಗೆಗೆ ಒಡಿಸುತ್ತಿರುವುದನ್ನು ನಿಲ್ಲಿಸುವಂತೆ ತಿಳಿಸಿದೆ. ಹಾಗೂ ಕೆಲವೊಂದು ರೆಂಟ್-ಎ-ಕ್ಯಾಬ್ ಲೈಸೆನ್ಸ್ ಪಡೆದಿರುವ ಕಂಪನಿಗಳು ಖಾಸಗಿ ಮಾಲೀಕತ್ವದ ಲಘು ಮೋಟಾರು ವಾಹನಗಳನ್ನು ಕಂಪನಿ ಹೆಸರಿನಲ್ಲಿ ಸಾರ್ವಜನಿಕರಿಗೆ ಬಾಡಿಗೆ ನೀಡುತ್ತಿರುವುದು ಕಂಡಬಂದಿದ್ದು, ಇಲಾಖೆಯು ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳನ್ನು ಯಾವುದೇ ಕಂಪನಿಗಳಿಗೆ ಬಾಡಿಗೆಗಾಗಿ ನೀಡಬಾರದೆಂದು ತಿಳಿಯಪಡಿಸಿದೆ. ತಪ್ಪಿದಲ್ಲಿ ಇಂತಹ ವಾಹನಗಳ ವಿರುದ್ಧ ಕಾನೂನಿನಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

Exit mobile version