ನಿಮ್ಮ ಬಳಿ ಹೆಚ್ಚು 500 ರೂ ನೋಟಿದ್ದರೆ ಎಚ್ಚರ ;ಅದು ನಕಲಿ ನೋಟಾಗಿರಬಹುದು ಆರ್​ಬಿಐ ವರದಿ

New Delhi: ಭಾರತದಲ್ಲಿ 500 ರೂ. ನಕಲಿ ನೋಟುಗಳು ಹೆಚ್ಚಾಗುತ್ತಿವೆ. 2022-23ರ ಆರ್ಥಿಕ ವರ್ಷದಲ್ಲಿ ಈ ಮುಖಬೆಲೆಯ ಸುಮಾರು ಒಂದು ಲಕ್ಷ ನಕಲಿ ನೋಟುಗಳನ್ನು(Note) ಗುರುತಿಸಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಇದು ಹಿಂದಿನ ವರ್ಷದ ನಕಲಿ ನೋಟುಗಳ ಆವಿಷ್ಕಾರಕ್ಕಿಂತ 14.6% ಹೆಚ್ಚಳವಾಗಿದೆ.

2,000 ರೂ ಮುಖಬೆಲೆಯ ಹೆಚ್ಚು ನಕಲಿ ನೋಟುಗಳಿರಬಹುದು ಎಂದು ಈ ಮೊದಲು ಭಾವಿಸಿತ್ತು ಆದರೆ ಈ ನಕಲಿ ನೋಟುಗಳು ಪತ್ತೆಯಾಗಿರುವ ಪ್ರಮಾಣ ಶೇ. 28ರಷ್ಟು ಈಗ ಕಡಿಮೆ ಆಗಿದೆ. ಈವರೆಗೆ ಒಟ್ಟು 91,110 500 ರೂ ಮುಖಬೆಲೆಯ ನಕಲಿ ನೋಟುಗಳು ಪತ್ತೆಯಾಗಿತ್ತು ಆದರೆ ಕೇವಲ 9,806 2000 ಮುಖಬೆಲೆ ನಕಲಿ ನೋಟುಗಳು ಪತ್ತೆಯಾಗಿದ್ದವು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನ ವಾರ್ಷಿಕ ವರದಿಯು ಪ್ರಕಟಿಸಿದೆ.

2021-22ರಲ್ಲಿ ಒಟ್ಟು 230,971 ನಕಲಿ ನೋಟುಗಳು ಪತ್ತೆಯಾಗಿವೆ. 2022-23ರಲ್ಲಿ ಈ ಸಂಖ್ಯೆ ಕಡಿಮೆಯಾಗಿದೆ, ಇದುವರೆಗೆ ಕೇವಲ 225,769 ನಕಲಿ ನೋಟುಗಳನ್ನು ಗುರುತಿಸಲಾಗಿದೆ. ಹೆಚ್ಚಿನ ನಕಲಿ ನೋಟುಗಳು ರೂ. 500 ಮತ್ತು ರೂ. 20 ಗಳಾಗಿವೆ.

2,000, ರೂ. 10, ಮತ್ತು ರೂ. 100 ನೋಟು (Note) ನಕಲಿ ರೂ.ಗಳ.ಇತ್ತೀಚೆಗೆ ಕಡಿಮೆಯಾಗಿದೆ. ಈ ನಕಲಿ ನೋಟುಗಳು ಎಲ್ಲಿ ಪತ್ತೆಯಾಗಿವೆ ಎಂಬುದನ್ನು ವರದಿಯು ಇವರೆಗೂ ನಿರ್ದಿಷ್ಟಪಡಿಸಿಲ್ಲ.ಬ್ಯಾಂಕ್ (Bank) ಮಟ್ಟದಲ್ಲಿ, ನಕಲಿ ನೋಟುಗಳ ಚಲಾವಣೆ ತಡೆಯಲು ಹಲವಾರು ಕ್ರಮಗಳನ್ನು ಅಳವಡಿಸಲಾಗಿದೆ.

ಬ್ಯಾಂಕಿಗೆ ಬರುವ ಪ್ರತಿ ನೋಟುಗಳನ್ನು ಸಹ ನಕಲಿ ನೋಟಿಗೆ ಪರಿಶೀಲಿಸಲಾಗುತ್ತದೆ.ಆದರೂ ಕೂಡ ಬ್ಯಾಂಕ್ (Bank) ಗಮನದಿಂದ ತಪ್ಪಿಸಿಕೊಂಡು ಬಹಳಷ್ಟು ನಕಲಿ ನೋಟುಗಳು ಆರ್​ಬಿಐನಲ್ಲಿ (RBI) ಪತ್ತೆಯಾಗಿವೆ.ಈ ಪೈಕಿ ಶೆ. 4.6ರಷ್ಟು ನೋಟುಗಳು 2022-23ರಲ್ಲಿ ಆರ್​ಬಿಐನಲ್ಲಿ ಪತ್ತೆಯಾಗಿತ್ತು.ಬ್ಯಾಂಕ್​ಗಳಲ್ಲೇ ಇನ್ನುಳಿದ ನಕಲಿ ನೋಟುಗಳನ್ನು ಕಂಡು ಹಿಡಿಯಲಾಗಿತ್ತು.

ಚಲಾವಣೆಯಲ್ಲಿರುವ ನೋಟುಗಳ ಮೌಲ್ಯ ಭಾರತದಲ್ಲಿ ಸದ್ಯ ನೋಡುವುದಾದರೆ ಶೇ. 87.9ರಷ್ಟು ಮೊತ್ತವು 500 ರೂ ಮತ್ತು 2,000 ರೂ ಮುಖಬೆಲೆಯ ನೋಟುಗಳೇ ಇವೆ.ಶೇ. 37.9ರಷ್ಟು ನೋಟುಗಳು ಒಟ್ಟಾರೆ ನೋಟುಗಳ ಸಂಖ್ಯೆಯಲ್ಲಿ ನೋಟುಗಳು 500 ರೂನದ್ದಾಗಿದೆ.ಅದಾದ ನಂತರ ಅತಿಹೆಚ್ಚು ನೋಟುಗಳಿರುವುದು 10 ರೂನದ್ದು ಮಾತ್ರ.

ರಶ್ಮಿತಾ ಅನೀಶ್

Exit mobile version