ಇದು ಆರಂಭದ ಗೆಲುವು ಖಂಡಿತ ` ಈ ಸಲ ಕಪ್ ನಮ್ದೇ’ : ಆರ್.ಸಿ.ಬಿ ಅಭಿಮಾನಿಗಳ ಘೋಷಣೆ!

rcb

ರಾಯಲ್ ಚಾಲೆಂಜರ್ಸ್ ಬೆಂಗಳೂರು(RoyalChallengersBengaluru) ತಂಡದ ಅಭಿಮಾನಿಗಳೇ ಹಾಗೇ, ಆರು ಸಲ ಸೋತ್ರುನೂ ಆರ್.ಸಿ.ಬಿ(RCB) ನೇ, 60 ಸಲ ಸೋತ್ರುನೂ ಆರ್.ಸಿ.ಬಿನೇ ಎಂದು ಕೂಗಿ ಹೇಳುವ ಹುಚ್ಚು ಅಭಿಮಾನಿಗಳು. ಎಷ್ಟೇ ಪಂದ್ಯ ಸೋತರು, ಐಪಿಎಲ್ ಟ್ರೋಫಿ(IPL Trophy) ಎತ್ತಿ ಹಿಡಿಯದಿದ್ದರೂ ತಂಡದ ಮೇಲೆ ಎಂದಿಗೂ ಬೇಸರ ಮಾಡಿಕೊಳ್ಳದೇ, ಅನ್ಯ ತಂಡದಂತೆ ತಮ್ಮ ತಂಡಕ್ಕೆ ಗೆದ್ದರೇ ಮಾತ್ರ ಪ್ರೋತ್ಸಾಹ ನೀಡುವುದು, ಇಲ್ಲದಿದ್ದರೇ ಚಪ್ಪಲಿ ಎಸೆದು ಆಕ್ರೋಶ ವ್ಯಕ್ತಪಡಿಸುವಂತ ತಂಡವಲ್ಲ!

ಇದೊಂದು ಅಪಾರ ಗೌರವ, ಪ್ರೀತಿ, ಪ್ರೋತ್ಸಾಹ ಕೊಡುವಂತ ಏಕೈಕ ಅಭಿಮಾನಿಗಳ ತಂಡವಾಗಿದೆ! ಸತತ ಸೋಲನ್ನು ನೋಡಿಕೊಂಡು ಬಂದಿರುವ ಆರ್.ಸಿ.ಬಿ ತಂಡವನ್ನು ನೆಚ್ಚಿನ ಅಭಿಮಾನಿಗಳು ಇಂದಿನವರೆಗೂ ಸತತವಾಗಿ ಬೆಂಬಲ ನೀಡುತ್ತಲೇ ಬಂದಿದ್ದಾರೆ. ತಂಡ ಸೋತರೇ ಕುಗ್ಗದೇ ಚೀರಾಡುತ್ತಾರೇ ಅಂದ್ರೆ ಗೆದ್ದಾಗ ಆ ಸಂಭ್ರಮ ಯಾವ ಮಟ್ಟಕ್ಕೆ ತಲುಪಬಹುದು ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ. ಆರ್.ಸಿ.ಬಿ ತಂಡಕ್ಕೆ ಅವರ ಅಭಿಮಾನಿಗಳು ಒಂದು ರೀತಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯಂತೆ.

ಹೌದು, ಸೋತಾಗ ಬೈಗುಳ ನೀಡದೇ ತಾಳ್ಮೆಯಿಂದ ಬೆಂಬಲ ನೀಡುವ ಅಭಿಮಾನಿಗಳು. ಒಂದು ಪಂದ್ಯ ಗೆದ್ದರೇ ದೇವರಿಗೆ ಪೂಜೆ ಸಲ್ಲಿಸಿ, ಸಿಹಿ ಹಂಚಿ ಹಬ್ಬದೂಟ ಹಾಕಿಸುತ್ತಾರೇ ಅಂದ್ರೆ ನೀವೇ ಊಹಿಸಿಕೊಳ್ಳಿ ಇನ್ನು ಫೈನಲ್ ಪ್ರವೇಶಿಸಿ ಐಪಿಎಲ್ ಟ್ರೋಫಿ ಗೆದ್ದರೇ ಸಂಭ್ರಮಾಚರಣೆ ಯಾವ ಹಂತಕ್ಕೆ ತಲುಪಬಹುದು ಎಂಬುದನ್ನು? ಸದ್ಯ ಟಾಟಾ ಐಪಿಎಲ್ 15ನೇ ಆವೃತ್ತಿ ಪ್ರಾರಂಭಗೊಂಡು 3 ವಾರಗಳನ್ನು ಕಳೆದಿದೆ. ಈ ನಡುವೆ ಆರ್.ಸಿ.ಬಿ ತಂಡ ಇಲ್ಲಿಯವರೆಗೂ 5 ಪಂದ್ಯಗಳನ್ನು ಆಡಿ, 3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ!

3 ಪಂದ್ಯಗಳನ್ನು ಗೆದ್ದು ಅಭಿಮಾನಿಗಳಲ್ಲಿ ವಿಶೇಷ ಭರವಸೆ ಮೂಡಿಸಿದ್ದು, ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆ ಮತ್ತಷ್ಟು ಗಟ್ಟಿಯಾಗಿಸಿದೆ ಎಂದೇ ಹೇಳಬಹುದು. ಆದ್ರೆ ಕಳೆದ ಪಂದ್ಯ ತಮ್ಮ ಕಟ್ಟಾ ಎದುರಾಳಿ ತಂಡವಾದ ಚೆನೈ ಸೂಪರ್ ಕಿಂಗ್ಸ್(Chennai Super Kings) ಮೇಲೆ ದೊಡ್ಡ ಮಟ್ಟದ ಸೋಲನ್ನು ಕಂಡಿತು. ಇದೊಂದು ಆರ್.ಸಿ.ಬಿ ತಂಡಕ್ಕೆ ಬೇಸರ ಮೂಡಿಸಿದ ಸಂಗತಿ! ಕಾರಣ, ತಮ್ಮ ಬಹು ವರ್ಷಗಳ ಎದುರಾಳಿಯ ಮೇಲೆ ಸೋತಿದ್ದು, ಆರ್.ಸಿ.ಬಿ ತಂಡದ ಅಭಿಮಾನಿಗಳಿಗೆ ಕೊಂಚ ಬೇಸರವಾಗಿದೆ.

ಈ ಬಾರಿ ದಿನೇಶ್ ಕಾರ್ತಿಕ್ ಸ್ಪೋಟಕ ಬ್ಯಾಟ್ಸ್ಮನ್ ಆಗಿ ಪ್ರತಿ ಪಂದ್ಯದಲ್ಲಿ ತಂಡದ ಗೆಲುವಿಗೆ ಶ್ರಮಿಸುತ್ತಿರುವುದು ಅಭಿಮಾನಿಗಳಿಗೆ `ಈ ಸಲ ಕಪ್ ನಮ್ದೇ' ಎಂಬ ವೇದವಾಕ್ಯ ಈಡೇರುವಂತೆ ಕಾಣಿಸುತ್ತಿದೆ ಎಂಬುದು ಅಭಿಮಾನಿಗಳ ಕ್ರೇಜ್ನಿಂದಲೇ ತಿಳಿಯಬಹುದಾಗಿದೆ. ದಿನೇಶ್ ಕಾರ್ತಿಕ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ಆರ್.ಸಿ.ಬಿ ಗೆಲುವಿಗೆ ಪ್ರಮುಖ ಕಾರಣ ಎಂದು ಒಂದಿಷ್ಟು ಅಭಿಮಾನಿಗಳು ಹೇಳಿದರೆ, ಮತ್ತೊಂದಿಷ್ಟು ಅಭಿಮಾನಿಗಳು ನಾಯಕ ಫಾಫ್ ದೂ ಪ್ಲೆಸಿಸ್, ಮಾಜಿ ನಾಯಕ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ ಬ್ಯಾಟಿಂಗ್ ವೈಖರಿ...

ನಮಗೆ 'ಈ ಸಲ ಕಪ್ ನಮ್ದೇ' ಎಂದು ಕೂಗಲು ಮತ್ತಷ್ಟು ಭರವಸೆ ನೀಡುತ್ತಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಆರ್.ಸಿ.ಬಿ ತಂಡ ಇದೇ ರೀತಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯಗಳನ್ನು ಗೆದ್ದರೇ, ಈ ಬಾರಿಯಾದರೂ ಅಭಿಮಾನಿಗಳ ಆಶಯದಂತೆ `ಈ ಸಲ ಕಪ್ ನಮ್ದೇ’ ಎಂಬುದು ಖಚಿತವಾಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ!

Exit mobile version