ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ( RR) ಸದ್ದಡಗಿಸಿದ ರಾಯಲ್ ಚಾಲೆಂಜರ್ಸ್ (RCB)

Bangalore: ಸೋಲಿನ ಕಹಿಯನ್ನು ಸಿಹಿಯಾಗಿಸಿತು RCB. ಯಸ್‌ ನಿನ್ನೆ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ನಡೆದ ಪಂದ್ಯದಲ್ಲಿ RCB ತಂಡ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಲಿಲ್ಲ. ಅತ್ಯಂತ ರೋಚಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ( RR) ತಂಡವನ್ನು 7 ರನ್‌ಗಳಿಂದ ಸೋಲಿಸಿ RCB RR thrilling match) ಅಭಿಮಾನಿಗಳ ಕಪ್‌ ಆಸೆಯನ್ನು ಮತ್ತೆ ಚಿಗುರುವ ಹಾಗೆ ಮಾಡಿತು.


ಟಾಸ್‌ ಗೆದ್ದು ಮೊದಲು ಬೌಲಿಂಗ್ ಆರಿಸಿಕೊಂಡ್ರು ಆರ್‌ಆರ್‌ ಕ್ಯಾಪ್ಟನ್‌ ಸಂಜು ಸಾಮ್‌ಸನ್ಸ್‌ (Sanju Samsons). ಆರ್‌ಸಿಬಿ ನೀಡಿದ್ದ 190 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಕೂಡಾ ಉತ್ತಮವಾಗಿರಲಿಲ್ಲ.

ಸ್ಪೋಟಕ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್, ಖಾತೆ ತೆರೆಯುವ ಮುನ್ನವೇ ಸಿರಾಜ್ (Siraj) ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಆದರೆ ಎರಡನೇ ವಿಕೆಟ್‌ಗೆ ಕನ್ನಡಿಗ ದೇವದತ್ ಪಡಿಕ್ಕಲ್ ಹಾಗೂ ಯಶಸ್ವಿ ಜೈಸ್ವಾಲ್‌ ಎರಡನೇ ವಿಕೆಟ್‌ಗೆ 98 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

ಆಕರ್ಷಕ ಬ್ಯಾಟಿಂಗ್ (Batting) ನಡೆಸಿದ ದೇವದತ್ ಪಡಿಕ್ಕಲ್ (Devadat Padikkal) ಕೇವಲ 34 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ

ಒಂದು ಸಿಕ್ಸರ್ ಸಹಿತ 52 ರನ್‌ ಬಾರಿಸಿ ಡೇವಿಡ್ ವಿಲ್ಲಿ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಇನ್ನು ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡಾ ಪೆವಿಲಿಯನ್‌ (RCB RR thrilling match) ಹಾದಿ ಹಿಡಿದರು.

ಜೈಸ್ವಾಲ್ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 47 ರನ್ ಬಾರಿಸಿ ಹರ್ಷಲ್‌ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು


ಗ್ಲೆನ್‌ ಮ್ಯಾಕ್ಸ್‌ವೆಲ್ (Glenn Maxwell) ಹಾಗೂ ಫಾಫ್ ಡು ಪ್ಲೆಸಿಸ್‌ ಸ್ಪೋಟಕ ಅರ್ಧಶತಕ ಹಾಗೂ ಹರ್ಷದ್ ಪಟೇಲ್ ಮೊನಚಾದ ದಾಳಿಯ ನೆರವಿನಿಂದ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ಎದುರು 7 ರನ್ ರೋಚಕ ಜಯ ಸಾಧಿಸಿದೆ.

ವಿರಾಟ್‌ ಕೊಹ್ಲಿ ನೇತೃತ್ವದಲ್ಲಿ ಆರ್‌ಸಿಬಿ ಸತತ ಎರಡು ಗೆಲುವು ದಾಖಲಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಮತ್ತೆ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ

ಒಟ್ನಲ್ಕಿ ನೆನ್ನೆ ನಡೆದ ಪಂದ್ಯ ಬಹಳ ರೋಚಕವಾಗಿದ್ದು ಇನ್ನೂ ಈ ಪಂದ್ಯದಲ್ಲಿ ಆರ್ ಸಿ ಬಿ (RCB) ಯವರು ಗೆಲುವಿನ ನಗೆ ಬೀರಿದೆ.


ಪಂದ್ಯದ ಗೆಲುವಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ(Virat Kohli) , ಆರ್‌ಸಿಬಿ ತಂಡದ ಮುಂದಿನ ಪಂದ್ಯಕ್ಕೆ ಜಾಶ್‌ ಹೇಝಲ್‌ವುಡ್‌ ಅಭ್ಯರಾಗಲಿದ್ದಾರೆಂದು ಹೇಳಿದ್ದಾರೆ.

ಆ ಮೂಲಕ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಮೊಹಮ್ಮದ್‌ ಸಿರಾಜ್‌ ಒಳಗೊಂಡ ವೇಗದ ಬೌಲಿಂಗ್‌ ವಿಭಾಗ ಇನ್ನಷ್ಟು ಬಲಿಷ್ಠವಾಗಲಿದೆ.

ರಂಜಿತಾ ಬಿ‌ ಆರ್

Exit mobile version