ಹೊಸ ಸೀಸನ್, ಹೊಸ ನಾಯಕ ಮತ್ತು ಹೊಸ ತಂಡದ ಹಾಡು ಎಲ್ಲವೂ ಹೊಸತನದಿಂದ ಕೂಡಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಹೌದು, ಮಂಗಳವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ತಮ್ಮ ಹೊಸ ತಂಡದ ಹಾಡಿಗೆ ಪಾದಾರ್ಪಣೆ ಮಾಡುವ ಮೂಲಕ ರೋಚಕ ವಿಜಯವನ್ನು ಆರ್ಸಿಬಿ ತಂಡ ಸಂಭ್ರಮಿಸಿದೆ. IPL 2022ರ ಸೀಸನ್ ಘನ ಆರಂಭದ ನಂತರ RCB ಆಟಗಾರರು ಹೆಚ್ಚಿನ ಉತ್ಸಾಹದಿಂದಲೇ ಮೈದಾನಕ್ಕೆ ಇಳಿದರು. ತಂಡದ ನಾಯಕ ಫಾಫ್ ಡು ಪ್ಲೆಸಿಸ್ ತಂಡವನ್ನು ಮುನ್ನಡೆಸುವಲ್ಲಿ ಯಶಸ್ವಿಯಾದರು.
ದಿನೇಶ್ ಕಾರ್ತಿಕ್ ಮತ್ತು ಯುವ ಬ್ಯಾಟ್ಸ್ ಮನ್ ಶಹಬಾಜ್ ಅಹ್ಮದ್ ಅವರ ಅತ್ಯಾಕರ್ಷಕ ಆಟವೇ ರಾಯಲ್ಸ್ ತಂಡದ ಮೇಲೆ ಗೆಲುವಿನ ಸವಾರಿ ಮಾಡಲು ಮುಖ್ಯ ಕಾರಣವಾಯಿತು. RCB ತಂಡ IPL 2022 ರಲ್ಲಿ 3 ಪಂದ್ಯಗಳಲ್ಲಿ ತಮ್ಮ 2 ನೇ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಐಪಿಎಲ್ ಅಂಕಪಟ್ಟಿಯಲ್ಲಿ ಪ್ರಮುಖ ಸ್ಥಾನದಲ್ಲಿದ್ದ RR ತಂಡದ ವಿರುದ್ಧ 170 ರನ್ಗಳ ಚೇಸನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ವಾಂಖೆಡೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಗೆಲುವಿನ ಜೊತೆಗೆ ತಂಡದ ನೂತನ ಹಾಡನ್ನು ಹಾಡುತ್ತಿರುವಂತೆ ಭಾಸವಾಗಿದೆ. ಈ ಮೂಲಕ RCB ತಂಡ ಗೆಲುವಿನ ಸವಾರಿ ಮಾಡುತ್ತ ತಮ್ಮ ನೆಚ್ಚಿನ ಅಭಿಮಾನಿಗಳ ಬಳಗವನ್ನು ಕೂಡ ಖುಷಿಪಡಿಸಿದ್ದಾರೆ.