ಬೆಂಗಳೂರು: ಮದುವೆ ನಂತರ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದೈಹಿಕ ಸಂಪರ್ಕ(Physical Contact) ನಿರಾಕರಿಸುವುದು ಐಪಿಸಿ ಸೆಕ್ಷನ್ 498ಎ ಅಡಿಯಲ್ಲಿ ಅಪರಾಧವಲ್ಲ ಎಂದು ಕರ್ನಾಟಕ ಹೈಕೋರ್ಟ್(Karnataka High Court) ಮಹತ್ವದ ಆದೇಶ ಹೊರಡಿಸಿದೆ. ಆಧ್ಯಾತ್ಮಿಕ ಸಾಧನೆಯತ್ತ ಮುಖ ಮಾಡಿರುವ ಗಂಡನ ವಿರುದ್ಧ ಐಪಿಸಿ 498ಎ ಅಡಿಯಲ್ಲಿ ಪತ್ನಿ ದೂರು ನೀಡಿದ್ದಾರೆ. ಈ ಬಗ್ಗೆ ನ್ಯಾ. ಎಂ. ನಾಗಪ್ರಸನ್ನ(M Naga Prasanna) ಅವರಿದ್ದ ಏಕದಸದಸ್ಯ ಪೀಠ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

ಮಹಿಳೆಯೊಬ್ಬರು ಡಿಸೆಂಬರ್ 18, 2019 ರಂದು ವ್ಯಕ್ತಿಯೊಬ್ಬರನ್ನು ವಿವಾಹವಾದರು. ಅವರು ಮದುವೆಯಾಗಿ 28 ದಿನಗಳು ಕಳೆದಿವೆ. ಅದರ ನಂತರ, ಪತಿ ಆಧ್ಯಾತ್ಮಿಕ ಸಾಧನೆಯ ಕಡೆ ಹೋದರು ಅಲ್ಲದೆ, ದೇಹದ ಮೇಲಿನ ಪ್ರೀತಿಗಿಂತ ಆತ್ಮದ ಪ್ರೀತಿ ಮುಖ್ಯ ಎಂದು ನಂಬುವ ಪತಿ ಒಮ್ಮೆ ತನ್ನ ಹೆಂಡತಿಗೆ ಅಧ್ಯಾತ್ಮಿಕ ಸಾಧಕಿಯೊಬ್ಬರ ಉಪನ್ಯಾಸ ವೀಕ್ಷಿಸುವಂತೆ ಪತ್ನಿಗೆ ಹೇಳುತ್ತಿದ್ದರು.
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಮೆನು ಬದಲಾವಣೆ : ಹೊಸ ಸೇರ್ಪಡೆ ಪಟ್ಟಿ ಇಲ್ಲಿದೆ ನೋಡಿ
ಪತಿಯ ವರ್ತನೆಯಿಂದ ಮನನೊಂದ ಪತ್ನಿ ದೈಹಿಕ ಸಂಬಂಧ ಬಯಸದ ಪತಿ ವಿರುದ್ಧ ಐಪಿಸಿ 498ಎ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ, ಕ್ರೌರ್ಯದ ಕಾರಣಕ್ಕೆ ವಿಚ್ಚೇದನವನ್ನೂ(Divorce) ಪಡೆದರು. ಒಂದು ವೇಳೆ “ದೈಹಿಕ ಸಂಬಂಧ ನಿರಾಕರಿಸುವ ಕಾರಣಕ್ಕೆ ನೀವು ವಿಚ್ಚೇದನ ಪಡೆಯಬಹುದು. ಆದರೆ ಐಪಿಸಿ ಸೆ.498 ಎ ಅಡಿ ಇದು ಯಾವುದೇ ಕಾರಣಕ್ಕೂ ಅಪರಾಧವಾಗುವುದಿಲ್ಲ” ಎಂದು ಈ ಬಗ್ಗೆ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ.
ರಶ್ಮಿತಾ ಅನೀಶ್