ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ : ರೆಹಮತ್‌ ತರೀಕೆರೆ

Mysuru : ಈ ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ ಎಂದು ಸಾಹಿತಿ(Author) ರೆಹಮತ್‌ ತರೀಕೆರೆ(Rehmat Tarikere Slashing Statement) ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್‌(Rehmat Tarikere Slashing Statement) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ದಲಿತರು ನೀರು ಕುಡಿದರೆಂದು ಇಡೀ ತೊಂಬೆಯನ್ನು ಶುದ್ಧೀಕರಿಸಿದ್ದು, ಸಮುದಾಯವೊಂದರ ಮೇಲೆ ದ್ವೇಷ ಹುಟ್ಟಿಸಲೆಂದೇ ಚರಿತ್ರೆಯನ್ನು ವಿಕೃತಗೊಳಿಸಿ ನಾಟಕ ಬರೆಯುವುದು, 

ಧರ್ಮ ರಕ್ಷಣೆಗೆಂದು ತಲೆತಿರುಕರು ಬಾಂಬ್ ಮಾಡುವುದು, ಇವು ಪರಸ್ಪರ ಸಂಬಂಧವಿಲ್ಲದ ಬಿಡಿಬಿಡಿ ಘಟನೆಗಳಂತೆ ಕಾಣುತ್ತವೆ. ಆದರೆ ಆಳದಲ್ಲಿ ಇವು ನಮ್ಮ ನಮ್ಮ ಜಾತಿಯ/ಧಾರ್ಮಿಕ ಸಮುದಾಯಗಳು, ತಮ್ಮೊಳಗಿನ ಕೇಡುಗಳನ್ನು ಎಚ್ಚರಿಕೆ ನಿಷ್ಠುರತೆ ವಿವೇಕಗಳಿಂದ ನಿವಾರಿಸಿಕೊಳ್ಳಲಾಗದ ಮತ್ತು ಪೋಷಿಸಿಕೊಂಡು ಬಂದ ಪರಿಣಾಮ ಕೂಡ ಆಗಿವೆ.

ಇದನ್ನೂ ಓದಿ : https://vijayatimes.com/talia-sinott-eats-biscuits-as-food/

ಹೀಗಾಗಿ ಈ ಕೆಲವರ ಕೃತ್ಯಗಳ ಮುಜುಗರ-ಅಪಮಾನದ ಫಲವನ್ನು ಇಡೀ ಸಮುದಾಯಗಳು ಉಣ್ಣಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಡಿಗೆ ಶಾಪಗಳಾಗಿರುವ ಈ ಜಾತಿವಾದ ಕೋಮುವಾದ ಮೂಲಭೂತವಾದಗಳು, ಮಡಿಲಲ್ಲಿ ಕಟ್ಟಿಕೊಂಡ ಕೆಂಡಗಳು.

ಇದನ್ನೂ ಓದಿ : https://vijayatimes.com/kantara-inspires-govt-officer/

`ತನ್ನ ಮನೆಯ ಸುಟ್ಟಲ್ಲದೆ ಪರರ ಮನೆಯ ಸುಡದ’ ಬೆಂಕಿಗಳು. ಹಿರೀಕರು ಕರ್ನಾಟಕವನ್ನು `ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕೆಂದು ಬಯಸಿದ್ದರು. ನಾವು ಅದನ್ನು ಮಸಣವಾಗಿಸುವತ್ತ ಹೊರಟಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಅವರ ಈ ಬರಹಕ್ಕೆ ಶಾಮ್‌ ಬಾಂಬೆ ಎಂಬುವವರು, “ಒಬ್ಬ ವ್ಯಕ್ತಿ ಸಮಾಜಕ್ಕೆ ಮಾರಕನಾಗುತ್ತಾನೆಂದರೇ ಅದಕ್ಕೆ ಸಮಾಜವೂ ಸಮ ಪಾಲುದಾರ.

ಎರಡು ಕೈ ಕೂಡಿದರೆ ತಾನೆ ಚಪ್ಪಾಳೆ. ಒಬ್ಬನಿಗೆ ಕಳ್ಳ ಎಂದು ಬೆಟ್ಟು ಮಾಡುವ ಮೊದಲು ನಮ್ಮ ಕಡೆ ಎಷ್ಟು ಬೆರಳುಗಳು ನಮ್ಮನ್ನೇ ಕಳ್ಳ ಎಂದು ಸೂಚಿಸುತ್ತವೆ ಎಂಬುದನ್ನು ಪ್ರತಿಯೊಬ್ಬರೂ ಅರಿಯಲೇಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ. ನಾರಾಯಣ್‌ ಎಂಬುವವರು,“ಅಂತರಾಳದ ತಲ್ಲಣ ಗುರುಗಳೇ..ಧರ್ಮ ಮತ್ತು ಬಂಡವಾಳ ಒಂದೇ ನಾಣ್ಯದ ಎರಡು ಮುಖಗಳು.

https://fb.watch/gYrk6qP-ec/ ಕೋಲಾರದಲ್ಲಿ ಸಾಗಿದ ‘ಪಂಚರತ್ನ’

ನಾವು ಅವಗಳನ್ನೇ ಉಸಿರಾಡುತ್ತಿದ್ದೇವೆ. ನಾಶ ಕಟ್ಟಿಟ್ಟ ಬುತ್ತಿ ತಪ್ಪಿದ್ದಲ್ಲ.. ಕೆಲವೊಮ್ಮೆ ನಮ್ಮದಲ್ಲದ ತಪ್ಪಿಗೆ…” ಎಂದು ಹೇಳಿದ್ದಾರೆ.

Exit mobile version