ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ ₹48,20,69,00,00,000 ಮೊತ್ತವನ್ನು ಲೂಟಿ ಮಾಡಿದೆ – ಬಿಜೆಪಿ ಆರೋಪ

New Delhi : ಭಾರತೀಯ ಜನತಾ ಪಕ್ಷವು (BJP) ‘ಕಾಂಗ್ರೆಸ್ (Congress) ಫೈಲ್ಸ್’ ನ ಎರಡನೇ ಸಂಚಿಕೆಯನ್ನು ಬಿಡುಗಡೆ ಮಾಡಿದ್ದು, “ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ” ಎಂಬ ವೀಡಿಯೊ ಸಂದೇಶದಲ್ಲಿ, ಕಾಂಗ್ರೆಸ್ ತನ್ನ 70 ವರ್ಷಗಳ ಆಡಳಿತದಲ್ಲಿ (Release of Congress files) ಸಾರ್ವಜನಿಕರಿಂದ ₹ 48,20,69,00,00,000 ದಿಗ್ಭ್ರಮೆಗೊಳಿಸುವ ಮೊತ್ತವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.

ಈ ಮೊತ್ತವನ್ನು 24 ಐಎನ್ಎಸ್ ವಿಕ್ರಾಂತ್ ಹಡಗುಗಳನ್ನು ನಿರ್ಮಿಸಲು, 300 ರಫೇಲ್ ಜೆಟ್ಗಳನ್ನು ಖರೀದಿಸಲು ಅಥವಾ 1000 ಮಂಗಲ್ ಮಿಷನ್ಗಳಿಗೆ ನಿಧಿಯಾಗಿ ಬಳಸಬಹುದಿತ್ತು.

ಆದರೆ, ಪ್ರಗತಿಯ ಬದಲು ದೇಶವು ಕಾಂಗ್ರೆಸ್ನ ಭ್ರಷ್ಟಾಚಾರದ ವೆಚ್ಚವನ್ನು ಭರಿಸಬೇಕಾಯಿತು ಎಂದು ಸಂದೇಶವನ್ನು (Release of Congress files) ಸೇರಿಸಲಾಗಿದೆ.

ಇದಲ್ಲದೆ, ಬಿಜೆಪಿಯು 2004-2014ರವರೆಗಿನ ಕಾಂಗ್ರೆಸ್ ಅಧಿಕಾರಾವಧಿಯನ್ನು “ಲಾಸ್ಟ್ ದಶಕ” ಎಂದು ಕರೆದಿದೆ.

ಎಫ್ಎಟಿಎಫ್ (FTF) ವರದಿಯನ್ನು ಉಲ್ಲೇಖಿಸಿ, ಯೆಸ್ ಬ್ಯಾಂಕ್ ಮಾಜಿ ಸಿಇಒ ರಾಣಾ ಕಪೂರ್ (Yes Bank CEO Rana Kapoor) ಅವರು ಜಾರಿ ನಿರ್ದೇಶನಾಲಯಕ್ಕೆ (ED) ನೀಡಿದ ಹೇಳಿಕೆಯನ್ನು ಬಿಜೆಪಿ ಉಲ್ಲೇಖ ಮಾಡಿದ್ದು,

ಇದನ್ನೂ ಓದಿ : https://vijayatimes.com/moringa-leaves-health-benefits/

ಇದರಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಅವರು, ಎಂಎಫ್ ಹುಸೇನ್ ಪೇಂಟಿಂಗ್ ಅನ್ನು ₹2 ಕೋಟಿಗೆ ಖರೀದಿಸಲು ಒತ್ತಾಯಿಸಿದ್ದರು.

ಅದಕ್ಕೆ ಪ್ರತಿಯಾಗಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ನೀಡುವ ಭರವಸೆಯನ್ನು ನೀಡಲಾಗಿತ್ತು ಎಂದು ರಾಣಾ ಕಪೂರ್ ಹೇಳಿದ್ದರು.

ಕಾಂಗ್ರೆಸ್ ಈಗಾಗಲೇ ರಾಣಾ ಕಪೂರ್ ಅವರ ಆರೋಪವನ್ನು “ರಾಜಕೀಯ ಸೇಡು” ಎಂದು ಬಣ್ಣಿಸಿದೆ ಮತ್ತು ಇಡಿ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದೆ.

63 ವರ್ಷದ ರಾಣಾ ಕಪೂರ್, ಯೆಸ್‌ಬ್ಯಾಂಕ್‌ ಸಿಇಒ ಆಗಿದ್ದಾಗ,

ಇದನ್ನೂ ಓದಿ : https://vijayatimes.com/udupi-assembly-election/

ಹೆಚ್ಚಿನ ಮೊತ್ತಕ್ಕೆ ಒದಗಿಸಿದ ಕೆಲವು ಸಂಶಯಾಸ್ಪದ ಸಾಲಗಳಿಗೆ ಪ್ರತಿಯಾಗಿ ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ

ಪಾವತಿಸಿದ ಕಿಕ್ ಬ್ಯಾಕ್ ಗಳು ಮತ್ತು ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿಯಿಂದ ಬಂಧಿಸಲ್ಪಟ್ಟ ನಂತರ ಮಾರ್ಚ್ 2020 ರಿಂದ ಮುಂಬೈ ಜೈಲಿನಲ್ಲಿ ಇರಿಸಲಾಗಿದೆ.

ಈಗಾಗಲೇ ಈ ಕುರಿತು ವಿವಿಧ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.

ಇನ್ನು ‘ಕಾಂಗ್ರೆಸ್ ಫೈಲ್ಸ್’ ನ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಹೊಸ ದಾಳಿಯನ್ನು ಪ್ರಾರಂಭಿಸಿತು.

ಅಧಿಕೃತ ಬಿಜೆಪಿ ಟ್ವಿಟ್ಟರ್ (Tweeter) ಹ್ಯಾಂಡಲ್ನಿಂದ ಮಾಡಿದ ಟ್ವೀಟ್ನಲ್ಲಿ, “ಕಾಂಗ್ರೆಸ್ ಆಡಳಿತದಲ್ಲಿ ಒಂದರ ನಂತರ ಒಂದರಂತೆ, ಭ್ರಷ್ಟಾಚಾರ ಮತ್ತು ಹಗರಣಗಳು ಹೇಗೆ ನಡೆದವು ಎಂಬುದನ್ನು ನೋಡಿ” ಎಂದು ವೀಕ್ಷಕರನ್ನು ಆಹ್ವಾನಿಸಿದೆ.

Exit mobile version