ಹಾಲ್ ಟಿಕೆಟ್ಗೆ ಬೇಡವಾದ ಹಿಜಾಬ್, ಪರೀಕ್ಷೆ ಬರೆಯಲು ಬೇಕಾ? : ಎಂ.ಪಿ ರೇಣಾಕಾಚಾರ್ಯ!

hijab

ರಾಜ್ಯದಲ್ಲಿ ದ್ವಿತೀಯ ಪಿಯುಸಿ(Second PUC) ಪರೀಕ್ಷೆ(Exam) ಆರಂಭಗೊಂಡಿದ್ದು, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ.

ಈ ನಡುವೆ ರಾಜ್ಯದ ಉಡುಪಿಯಲ್ಲಿ(Udupi) ಬುಗಿಲೆದ್ದ ಹಿಜಾಬ್(Hijab) ಘರ್ಷಣೆ ನ್ಯಾಯಲಯದ ಮೆಟ್ಟಿಲೇರಿ ವಸ್ತ್ರಸಂಹಿತೆ ನಿಯಮ ಪಾಲನೆಯ ತೀರ್ಪಿನ ಮೂಲಕ ಅಂತ್ಯವಾಗಿತ್ತು! ಆದ್ರೆ, ಹಿಜಾಬ್ ವಿದ್ಯಾರ್ಥಿನಿಯರು ಮಾತ್ರ ಹೈಕೋರ್ಟ್ ನಿಯಮವನ್ನು ಅನುಸರಿಸದೆ, ನಮಗೆ ಪರೀಕ್ಷೆ ಬರೆಯಲು ಹಿಜಾಬ್ ಅನುಮತಿ ಸೂಚಿಸಿ ಎಂದು ರಾಜ್ಯ ಸರ್ಕಾರದ ಮುಂದೆ ಮನವಿ ಇಟ್ಟಿದ್ದಾರೆ. ಇದಕ್ಕೆ ಸದ್ಯ ಯಾವುದೇ ರೀತಿಯ ಪ್ರತಿಕ್ರಿಯೇ ಕೂಡ ಲಭಿಸಿಲ್ಲ!

ದ್ವಿತೀಯ ಪರೀಕ್ಷೆಗೂ ಮುನ್ನ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಪರೀಕ್ಷಾ ಕೊಠಡಿಗೆ ಪ್ರವೇಶಿಸುವಂತಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್(BC Nagesh)ಆದೇಶ ಹೊರಡಿಸಿದ್ದರು, ಇದರಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರೂ, ಇನ್ನು ಕೆಲವರು ಬರೆಯದೇ ಮನೆಗೆ ಹಿಂದಿರುಗಿದರು. ಸದ್ಯ ಇದೇ ನಿಯಮದಂತೆ ಮತ್ತೊಮ್ಮೆ ಸಚಿವ ಬಿ.ಸಿ ನಾಗೇಶ್ ಅವರು 10ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ನಡೆದ ಪರೀಕ್ಷಾ ನಿಯಮದಂತೆಯೇ ದ್ವಿತೀಯ ಪಿಯುಸಿ ಪರೀಕ್ಷೆ ಕೂಡ ನಡೆಯಲಿದೆ.

ಮಸ್ಲಿಂ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶದಂತೆ ಹಿಜಾಬ್ ತೆಗೆದಿಟ್ಟು ಬರೆಯುವುದಾದರೆ ಪರೀಕ್ಷೆ ಬರೆಯಿರಿ, ಇಲ್ಲದಿದ್ದರೆ ಹೊರಡಿ ಎಂದು ಹೇಳಿದರು. ಉಡುಪಿಯಲ್ಲಿ ಮುಸ್ಲಿಂ ವಿದ್ಯಾರ್ಥಿನಿ ಆಲಿಯಾ ಅಸಾದಿ ಶಾಸಕ ರಘುಪತಿ ಭಟ್ ವಿರುದ್ಧ ಪ್ರತಿಭಟಿಸಿದ್ದು, ಪರೀಕ್ಷೆ ಬರೆಯಲು ಅನುಮತಿ ಕೊಡಿ, ಹಿಜಾಬ್ ಧರಿಸಿ ಬರೆಯಲು ಯಾಕೆ ಈ ಹಿಂಸೆ? ನಮ್ಮ ದೇಶ ಎತ್ತ ಸಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಬಿಜೆಪಿ ಶಾಸಕ ಎಂ.ಪಿ ರೇಣಾಕಾಚರ್ಯ ಕಿಡಿಕಾರಿದ್ದು, ನಾವು ಹಿಜಾಬ್ ತೆಗೆದು ಪರೀಕ್ಷೆ ಬರೆಯುತ್ತೇವೆ ಎಂದು ಹೇಳಿ ಹಿಜಾಬ್ ತೆಗೆದು ಹಾಲ್ ಟಿಕೆಟ್ ಪಡೆದಿದ್ದಾರೆ.

ಆದ್ರೆ ಪರೀಕ್ಷಾ ಕೇಂದ್ರಕ್ಕೆ ಬಂದ ಮೇಲೆ ಯಾಕೆ ಈ ಹೈಡ್ರಾಮಾ? ಹೈಕೋರ್ಟ್ ಆದೇಶ ಪಾಲಿಸದೇ ಪರೀಕ್ಷಾ ಕೇಂದ್ರದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿರುವ ಆ ಇಬ್ಬರು ವಿದ್ಯಾರ್ಥಿನಿಯರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ!

Exit mobile version