ಬ್ಯಾಂಕ್ ಸಾಲ ಪಡೆದವರಿಗೆ ಗುಡ್‌ನ್ಯೂಸ್‌ : ಆರ್‌ಬಿಐ ಸಿಹಿ ಸುದ್ದಿ ! ರೆಪೋ ದರದಲ್ಲಿ ಬದಲಾವಣೆ ಇಲ್ಲ, 6.5% ಮುಂದುವರಿಕೆ!

ಬೆಂಗಳೂರು : ಇತೀಚೆಗೆ ಬಂದಿರುವ ಕೆಲವು ವರದಿಗಳು ಬ್ಯಾಂಕ್‌ಗಳ (Bank)ಬಡ್ಡಿ ದರ ಹೆಚ್ಚಾಗುತ್ತದೆ ಎಂದು ತಿಳಿಸಿತ್ತು ಆದರೆ ಇದೀಗ ಅದೇ ಆತಂಕದಲ್ಲಿದ್ದ ಗ್ರಾಹಕರು ಈಗ ನಿರಾಳವಾಗಿದ್ದಾರೆ.ಇಂದು ತನ್ನ ಹಣಕಾಸು ನೀತಿಯನ್ನು ರಿಸರ್ವ್ ಬ್ಯಾಂಕ್(Reserve Bank Of India) ಪ್ರಕಟಿಸಿದೆ. ಅದರಂತೆ 43ನೇ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ (ಎಂಪಿಸಿ ಸಭೆ) (ಆರ್‌ಬಿಐ) ರೆಪೊ(Repo) ದರದಲ್ಲಿ ಯಾವುದೇ ಸಹ ಬದಲಾವಣೆ ಮಾಡಿಲ್ಲ ಎಂದು ಘೋಷಿಸಿದ್ದಾರೆ. ರೆಪೊ ದರವನ್ನು ಹಳೆಯ ಮಟ್ಟದಲ್ಲಿಯೇ ಸತತ ಎರಡನೇ ಬಾರಿಗೆ ಇದೀಗ ಉಳಿಸಿಕೊಂಡಿದೆ.

ರಿವರ್ಸ್ ರೆಪೋ(Reverse Repo) ದರದಲ್ಲಿ ಮತ್ತು ಆರ್‌ಬಿಐ ರೆಪೋ(RBI Repo) ದರದಲ್ಲಿ ಯಾವುದೇ ಬದಲಾವಣೆ ಸಹ ಮಾಡದಿರುವುದರಿಂದ ಸಾಲಗಾರರಿಗೆ ಇದು ಅತ್ಯಂತ ಒಳ್ಳೆಯ ಸುದ್ದಿಯಾಗಿದೆ. ಏಕೆಂದರೆ ಈಗ ಬ್ಯಾಂಕ್‌ಗಳು ಸಾಲದ ಬಡ್ಡಿದರವನ್ನು(Interest Rate) ಹೆಚ್ಚಿಸಲು ಯಾವುದೇ ಕಾರಣವನ್ನು ಕಂಡುಕೊಂಡಿಲ್ಲ.

ಇದನ್ನೂ ಓದಿ : ಟಿವಿ ಸುದ್ದಿ ವಾಹಿನಿಗಳನ್ನು ನಿಯಂತ್ರಿಸುವಂತೆ ಅರ್ಜಿ ಸಲ್ಲಿಕೆ : ನಿಮಗೆ ಇಷ್ಟವಿಲ್ಲದಿದ್ದರೆ ನೋಡಬೇಡಿ ಎಂದ ಸುಪ್ರೀಂ ಕೋರ್ಟ್

ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ರೆಪೊ ದರವನ್ನು 6.5 ಪ್ರತಿಶತದಲ್ಲಿ ಉಳಿಸಿಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್(Governor) ಶಕ್ತಿಕಾಂತ ದಾಸ್(Shakthi kanth Das), ಹೇಳಿದರು. RBI ಮೇ 2022 ರಿಂದ ರೆಪೊ ದರವನ್ನು ಏರುತ್ತಿರುವ ಹಣದುಬ್ಬರ ದರವನ್ನು ನಿಯಂತ್ರಿಸುವ ಸಲುವಾಗಿ, ಎರಡೂವರೆ ಪ್ರತಿಶತದಷ್ಟು ಹೆಚ್ಚಿಸಿತ್ತು. ರೆಪೊ ದರ ಕಳೆದ ವರ್ಷ ಶೇ.4ರಷ್ಟಿತ್ತು ಆದರೆ ಈ ಬಾರಿ ಶೇ.6.5ಕ್ಕೆ ಏರಿಕೆಯಾಗಿದೆ.

ಪರಿಹಾರ ಯಾರಿಗೆ ಸಿಗಲಿದೆ? :

ಬ್ಯಾಂಕ್‌ಗಳಿಂದ ಸಾಲ ಪಡೆಯುವ ಗ್ರಾಹಕರು ಮತ್ತು ಈಗಾಗಲೇ ಸಾಲ ಪಡೆದಿರುವ ಗ್ರಾಹಕರು ರೆಪೊ ದರದಲ್ಲಿ ಯಾವುದೇ ಬದಲಾವಣೆಯಾಗದಿರುವ ಲಾಭವನ್ನು ಪಡೆಯುತ್ತಾರೆ. ಪ್ರಸ್ತುತ, ಬ್ಯಾಂಕ್‌ಗಳು ಯಾವುದೇ ರೀತಿಯ ಸಾಲದ ಮೇಲೆ ಬಡ್ಡಿದರವನ್ನು ಹೆಚ್ಚಿಸುವುದಿಲ್ಲ. ಆದರೂ ಆರ್‌ಬಿಐ ರೆಪೋ ದರವನ್ನು ಒಂದು ವೇಳೆ ಹೆಚ್ಚಿಸಿದರೆ ಗ್ರಾಹಕರಿಗೆ ನೀಡುವ ಸಾಲದ ಮೇಲೆ ಅದರ ಪರಿಣಾಮ ಬೀರುತ್ತದೆ.

ರೆಪೋ ದರ ಎಂದರೇನು? :

ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡಲಾಗಿರುವ ಸಾಲದ ದರವನ್ನು ರೆಪೊ ದರ ಎಂದು ಕರೆಯಲಾಗುತ್ತದೆ.ರೆಪೊ ದರವನ್ನು ಹೆಚ್ಚಿಸುವುದರಿಂದ ಆರ್‌ಬಿಐನಿಂದ ಬ್ಯಾಂಕ್‌ಗಳು ದುಬಾರಿ ದರದಲ್ಲಿ ಸಾಲ ಪಡೆಯುತ್ತವೆ. ಇದು ಕಾರು ಸಾಲ, ವೈಯಕ್ತಿಕ ಸಾಲ ಮತ್ತು ಗೃಹ ಸಾಲ ಇತ್ಯಾದಿಗಳ ಬಡ್ಡಿ ದರವನ್ನು ಹೆಚ್ಚಿಸುತ್ತದೆ, ಇದು ನೇರ ಪರಿಣಾಮವನ್ನು ನಿಮ್ಮ EMI ಮೇಲೆ ಬೀರುತ್ತದೆ.

ಷೇರುಪೇಟೆಯ ಸ್ಥಿತಿ :

ಷೇರುಪೇಟೆ ಕೊಂಚ ಕುಸಿತದೊಂದಿಗೆ ಇಂದು ಗುರುವಾರ(Thursday) ಬೆಳಗ್ಗೆ ಆರಂಭವಾಯಿತು. ಆದರೆ ಆರ್‌ಬಿಐ ಯಾವುದೇ ಬದಲಾವಣೆಯನ್ನು ರೆಪೊ ದರದಲ್ಲಿ ಮಾಡಿಲ್ಲ ಎಂದು ಪ್ರಕಟಿಸಿದ ನಂತರ ಷೇರುಪೇಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಸೆನ್ಸೆಕ್ಸ್ 162.52 ಅಂಕಗಳ ಏರಿಕೆಯೊಂದಿಗೆ ಬೆಳಗ್ಗೆ 10.20ರ ಸುಮಾರಿಗೆ 63,305.48 ಅಂಕಗಳ ಮಟ್ಟದಲ್ಲೂ, ವ್ಯವಹಾರ ನಿರತವಾಗಿದ್ದವು.

ರಶ್ಮಿತಾ ಅನೀಶ್

Exit mobile version