ಉದ್ಯೋಗವಕಾಶ: ರಾಜ್ಯ ಕಂದಾಯ ಇಲಾಖೆಯಲ್ಲಿ 2000 ಹುದ್ದೆಗಳಿಗೆ ಅರ್ಜಿ ಆಹ್ವಾನ

Job Alert: ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ(Revenue Department) ಕೆಲಸ ಮಾಡಲು ಇಚ್ಛೆ ಇರುವ ಅಭ್ಯರ್ಥಿಗಳು ತಡ ಮಾಡಬೇಡಿ, ಈಗಲೇ ಅರ್ಜಿ ಹಾಕಿ. ಸರ್ವೇ ಸೆಟಲ್​ಮೆಂಟ್​ & ಲ್ಯಾಂಡ್​ ರೆಕಾರ್ಡ್ಸ್​ ಕರ್ನಾಟಕ(Survey Settlement and Land Records Karnataka) ಅರ್ಹ ಅಭ್ಯರ್ಥಿಗಳಿಂದ,

ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಡಿಪ್ಲೋಮಾ,ಬಿಇ,ಪಿಯುಸಿ,ಬಿ.ಟೆಕ್‌ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು,

ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್​ನ (Licensed Landlords) ಒಟ್ಟು 2000 ಹುದ್ದೆಗಳು ಖಾಲಿ ಇವೆ.

ಫೆಬ್ರವರಿ 20, 2023 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.

ಸಂಬಳ,ವಯೋಮಿತಿ,ವಿದ್ಯಾರ್ಹತೆ,ಹುದ್ದೆಯ ಕುರಿತಾಗಿ ಮಾಹಿತಿ,ಆಯ್ಕೆ ಪ್ರಕ್ರಿಯೆ,ಅರ್ಜಿ ಶುಲ್ಕ ಇವುಗಳ ಬಗ್ಗೆ ತಿಳಿದುಕೊಳ್ಳಬೇಕು,ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.  

ಯಾವ ಯಾವ  ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ?

ಒಟ್ಟು -2000 ಹುದ್ದೆಗಳು

ವಯೋಮಿತಿ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ವಯಸ್ಸು ಫೆಬ್ರವರಿ 20, 2023ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 65 ವರ್ಷ ಮೀರಿರಬಾರದು. ಅಭ್ಯರ್ಥಿಗಳಿಗೆ ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಶೈಕ್ಷಣಿಕ ಅರ್ಹತೆ:
ಲೈಸೆನ್ಸ್​ಡ್​​ ಲ್ಯಾಂಡ್​ಲಾರ್ಡ್ಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ(University) ಕಡ್ಡಾಯವಾಗಿ ಪಿಯುಸಿ, ಡಿಪ್ಲೋಮಾ, ಬಿಇ/ಬಿ.ಟೆಕ್​, ಐಟಿಐ ಪೂರ್ಣಗೊಳಿಸಿರಬೇಕು.

ಅನುಭವ:
ಅಭ್ಯರ್ಥಿಗಳು ಕರ್ನಾಟಕ ಸರ್ಕಾರದ ಲ್ಯಾಂಡ್ ಸರ್ವೇ ರೆವೆನ್ಯೂ ಸಿಸ್ಟಮ್​ನಲ್ಲಿ ಕನಿಷ್ಠವಾಗಿ 10 ವರ್ಷಗಳ ಕಾಲ ಕೆಲಸ ಮಾಡಿದ ಅನುಭವವನ್ನು ಹೊಂದಿರಬೇಕು.

ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳು 1000 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಪಾವತಿಸುವ ವಿಧಾನ: ಆನ್​ಲೈನ್​

ಇತರೆ ಶುಲ್ಕಗಳು:

ಟ್ರೈನಿಂಗ್ ಶುಲ್ಕ: 5000 ರೂ. (ಡಿಮ್ಯಾಂಡ್ ಡ್ರಾಫ್ಟ್​)
ಲೈಸೆನ್ಸ್​ ಶುಲ್ಕ:3000 ರೂ.

ಆಯ್ಕೆಯ ಪ್ರಕ್ರಿಯೆ:
ಲಿಖಿತ ಪರೀಕ್ಷೆ

ಆನ್​ಲೈನ್​ ಟೆಸ್ಟ್​

ವೇತನ:
ನಿಗದಿಪಡಿಸಿಲ್ಲ



Exit mobile version