ಬಾಲಿವುಡ್ ಮಂದಿ ನಮ್ಮ ದಕ್ಷಿಣ ನಟರ ಬಗ್ಗೆ ಅಸೂಯೆ ಪಡ್ತಿದ್ದಾರೆ : ರಾಮ್ ಗೋಪಾಲ್ ವರ್ಮ!

kiccha sudeep

ಬುಧವಾರ(Wednesday) ಅಜಯ್ ದೇವಗನ್(Ajay Devgan) ಮತ್ತು ಕಿಚ್ಚ ಸುದೀಪ್(Kiccha Sudeepa) ನಡುವೆ ನಡೆದ ಟ್ವಿಟ್ಟರ್(Twitter) ವಾರ್ ಎರಡು ಭಾಷೆಗಳ ವಿಚಾರವಾಗಿ ತೀವ್ರ ಚರ್ಚೆಯಾಯಿತು.

ಸಾಮಾಜಿಕ ಜಾಲತಾಣವೇ ಕನ್ನಡ ಚಿತ್ರತಂಡ ಮತ್ತು ಹಿಂದಿ ಚಿತ್ರತಂಡದ ಮಧ್ಯೆ ಚರ್ಚೆಗೆ ಪ್ರಮುಖ ಕಾರಣವಾಯಿತು. ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ನಡೆದ ಟ್ವೀಟ್ ಸಮರದ ನಂತರ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ(Ram Gopal Varma) ಭಾರತ ಒಂದೇ ಎಂದು ಹೇಳಿದ್ದಾರೆ. ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ಅವರ ಟ್ವಿಟರ್ ವಾರ್ ನಿಂದ ರಾಮ್ ಗೋಪಾಲ್ ವರ್ಮಾ ಪ್ರಭಾವಿತರಾಗಿರಲಿಲ್ಲ. ಸುದೀಪ್ ಅವರ ಪರವಾಗಿ, ರಾಮ್ ಗೋಪಾಲ್ ವರ್ಮಾ ಅವರು ಬುಧವಾರ ತಡರಾತ್ರಿ ಟ್ವಿಟ್ಟರ್‌ನಲ್ಲಿ,

“ಸೂಪರ್ ಸುದೀಪ್ ಸರ್, ನಾರ್ತ್ ತಾರೆಯರು ಅಸುರಕ್ಷಿತರಾಗಿದ್ದಾರೆ ಮತ್ತು ದಕ್ಷಿಣದ ತಾರೆಯರ ಬಗ್ಗೆ ಅಸೂಯೆ ಪಡುತ್ತಿದ್ದಾರೆ. ಏಕೆಂದರೆ ಕನ್ನಡ ಡಬ್ಬಿಂಗ್ ಚಿತ್ರ #KGF2 50 ಕೋಟಿ ಆರಂಭಿಕ ದಿನವನ್ನು ಗಳಿಸಿದೆ ಮತ್ತು ಈ ಸಿನಿಮಾ ಹಿಂದಿಯಲ್ಲೂ ಹೆಚ್ಚು ಕಲೆಕ್ಷನ್ ಮಾಡಿದೆ. ಬಹುಶಃ ಇವೆಲ್ಲವೂ ಕಾರಣವಾಗಿದೆ. ಮತ್ತೊಂದು ಟ್ವೀಟ್‌ನಲ್ಲಿ, ಆರ್‌ಜಿವಿ ಭಾರತವು ಒಂದೇ ಎಂದು ಉಲ್ಲೇಖಿಸಿ ಹೇಳಿದ್ದಾರೆ.

ಇನ್ನು ಕಿಚ್ಚ ಸುದೀಪ್ ಅವರನ್ನು ಬೆಂಬಲಿಸಿದ ಆರ್‌ಜಿವಿ, ಸುದೀಪ್ ಅವರು ಅತ್ಯುತ್ತಮ ಉತ್ತರ ನೀಡಿರುವುದು ನನಗೆ ಸಂತಸ ತಂದಿದೆ ಎಂದಿದ್ದಾರೆ. ಒಟ್ಟಾರೆ ಹಿಂದಿ ರಾಷ್ಟ್ರಭಾಷೆ ಎಂದು ಹೇಳಿದ ಅಜಯ್ ದೇವಗನ್ ಅವರ ಮಾತಿಗೆ ಪರೋಕ್ಷವಾಗಿ ಉತ್ತರ ಕೊಟ್ಟ ಕಿಚ್ಚ ಸುದೀಪ್ ಅವರ ಮಾತಿಗೆ ಸಾಕಷ್ಟು ಮೆಚ್ಚುಗೆಗಳು ಹರಿದು ಬರುತ್ತಿವೆ.

Exit mobile version