London : ನಾನು ಇಂದು ಇಲ್ಲಿಗೆ ಪ್ರಧಾನಮಂತ್ರಿಯಾಗಿ ಅಲ್ಲ ಬದಲಾಗಿ ಹಿಂದೂ ಆಗಿ (Rishi sunnak at ramkatha) ಬಂದಿದ್ದೇನೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ
ಆಧ್ಯಾತ್ಮಿಕ ಬೋಧಕ ಮೊರಾರಿ ಬಾಪು ಅವರ ‘ರಾಮ್ ಕಥಾ’ (Rama Katha) ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ರಿಟನ್ ಪ್ರಧಾನಿ ರಿಷಿ ಸುನಕ್ (Rishi Sunak) ಹೇಳಿದ್ದಾರೆ.
ಅವರ ಈ ಹೇಳಿಕೆ ಇದೀಗ ಎಲ್ಲೆಡೆ ಭಾರೀ (Rishi sunnak at ramkatha) ವೈರಲ್ ಆಗುತ್ತಿದೆ.

ಕೇಂಬ್ರಿಡ್ಜ್ (Cambridge) ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಬೋಧಕ ಮೊರಾರಿ ಬಾಪು ಅವರ ‘ರಾಮ್ ಕಥಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಿಷಿ ಸುನಕ್,
ಭಾರತೀಯ ಸ್ವಾತಂತ್ರ್ಯ ದಿನದಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮೊರಾರಿ ಬಾಪು ಅವರ ರಾಮ್ ಕಥಾದಲ್ಲಿ ಇಂದು ಇಲ್ಲಿಗೆ ಬಂದಿರುವುದು ನಿಜವಾಗಿಯೂ ಗೌರವ ಮತ್ತು ಸಂತೋಷವಾಗಿದೆ
ಎಂದರು. ಇದೇ ವೇಳೆ ವೇದಿಕೆಯ ಮೇಲಿದ್ದ ಭಗವಾನ್ ಹನುಮಂತನ ಭಾವಚಿತ್ರವನ್ನು ಉಲ್ಲೇಖಿಸಿ ಬಾಪು ಅವರ ಮೇಜಿನ ಮೇಲೆ ಚಿನ್ನದ ಹನುಮಾನ್ ಇದ್ದಂತೆ, 10 ಡೌನಿಂಗ್ ಸ್ಟ್ರೀಟ್ನಲ್ಲಿರುವ ನನ್ನ
ಮೇಜಿನ ಮೇಲೆ ಗೋಲ್ಡನ್ ಗಣೇಶನು ಸಂತೋಷದಿಂದ ಕುಳಿತಿದ್ದಾನೆ.
ಡಾಕ್ಟರ್ ಎಡವಟ್ಟು: ಆಪರೇಷನ್ ನಂತರ ಗರ್ಭಿಣಿ ಹೊಟ್ಟೆಯಲ್ಲಿಯೇ ಕತ್ತರಿ ಬಿಟ್ಟು ಹೊಲಿಗೆ ಹಾಕಿದ ವೈದ್ಯರು !
ಇದಕ್ಕಾಗಿ ನಾನು ಹೆಮ್ಮೆಪಡುತ್ತೇನೆ. ಇನ್ನು ಭಗವಾನ್ ರಾಮನು ಯಾವಾಗಲೂ ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಲು, ನಮ್ರತೆಯಿಂದ ಆಡಳಿತ ಮಾಡಲು ಮತ್ತು ನಿಸ್ವಾರ್ಥವಾಗಿ
ಕೆಲಸ ಮಾಡಲು ನನಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾನೆ. ನಾನು ಪ್ರತಿದಿನ ಕೆಲಸ ಮಾಡಲು ಹೊರಡುವಾಗ, ರಾಮಾಯಣವನ್ನು ನೆನಪಿಸಿಕೊಂಡು ಹೊರಡುತ್ತೇನೆ. ಸದಾ ಭಗವದ್ಗೀತೆ
(Bhagavad Gita) ಮತ್ತು ಹನುಮಾನ್ ಚಾಲೀಸಾವನ್ನು ನೆನಪಿಸಿಕೊಳ್ಳುತ್ತೇನೆ. ಭಗವಾನ್ ರಾಮನು ಯಾವಾಗಲೂ ನನಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿರುತ್ತಾನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಇನ್ನು ಬ್ರಿಟನ್ (Britain) ಪ್ರಧಾನಿಯಾಗಿರುವ ರಿಷಿ ಸುನಕ್ ಅವರು, ಬ್ರಿಟನ್ನಲ್ಲಿಯೇ ಹುಟ್ಟಿ ಬೆಳೆದಿದ್ದರು ಕೂಡಾ, ಅವರು ಹಿಂದೂ ಧರ್ಮದವರಾಗಿದ್ದಾರೆ. ಅವರ ಅಜ್ಜ ಮತ್ತು ತಂದೆ ಹಿಂದೂಗಳಾಗಿದ್ದು,
ಭಾರತೀಯ ಮೂಲದವರಾಗಿದ್ದರು. ಹೀಗಾಗಿಯೇ ರಿಷಿ ಸುನಕ್ ಹಿಂದೂ ಧರ್ಮದ ಅನುಯಾಯಿಯಾಗಿದ್ದಾರೆ. ಇನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಬೋಧಕ
ಮೊರಾರಿ ಬಾಪು ಅವರ ‘ರಾಮ್ ಕಥಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಿಷಿ ಸುನಕ್ ಅವರು ವೇದಿಕೆಯಲ್ಲಿ ನಡೆದ ಆರತಿಯಲ್ಲಿ ಭಾಗವಹಿಸಿದ್ದರು. ಮೊರಾರಿ ಬಾಪು ಅವರಿಗೆ ಪವಿತ್ರ ಕೊಡುಗೆಯಾಗಿ
ಸೋಮನಾಥ ದೇವಾಲಯದಿಂದ ಪ್ರತಿಷ್ಠಿತ ಶಿವಲಿಂಗವನ್ನು ನೀಡಿದರು.