47ನೇ ಅರ್ಧ ಶತಕವನ್ನು ,ಅಗಲಿದ ಮುದ್ದು ನಾಯಿಗೆ ಅರ್ಪಿಸಿದ ನಾಯಕ ರೋಹಿತ್ ಶರ್ಮಾ

Guwahati: ನಿನ್ನೆ ನಡೆದ ಭಾರತ-ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ(RohitSharma century to pet dog) ವಿರುದ್ದ 67 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ(Rohit sharma) ತಮ್ಮ 47ನೇ ಅರ್ಧ ಶತಕವನ್ನು ದಾಖಲಿಸಿದ್ದಾರೆ. ಅವರು ಈ ಅರ್ಧ ಶತಕವನ್ನು ತಮ್ಮ ಅಗಲಿದ ಮುದ್ದು ನಾಯಿಗೆ ಅರ್ಪಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ(Social Media) ಬರೆದುಕೊಂಡಿರುವ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ(Ritika) ಅವರು, “ಸೋಮವಾರ ನಮ್ಮ ಜೀವನದ ಅತ್ಯಂತ ಕಠಿಣವಾದ ದಿನವಾಗಿತ್ತು.

ನಾವು ನಮ್ಮ ಜೀವನದ ಪ್ರೀತಿಯ ನಾಯಿಗೆ ವಿದಾಯ ಹೇಳಿದೆವು. ನಮ್ಮ ಮೊದಲ ಪ್ರೀತಿ, ಮೊದಲ ಮಗು, ಇದುವರೆಗೆ ಬದುಕಿದ್ದ ಅತ್ಯಂತ ಸೌಮ್ಯವಾದ ಜೀವ.

ನಿನ್ನನ್ನು ಮತ್ತೆ ಭೇಟಿಯಾಗುವವರೆಗೆ ನಮ್ಮ ಜೀವನದಲ್ಲಿ ಸಂತೋಷ ಕಡಿಮೆಯಿರುತ್ತದೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡು, ತಮ್ಮ ಸಾಕು ನಾಯಿಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ನಿನ್ನೆ ನಡೆದ ಭಾರತ-ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತ ತಂಡ(India Team)

ಮೊದಲ ವಿಕೆಟ್‌ಗೆ ಆರಂಭಿಕ ಜೋಡಿಯಾದ ರೋಹಿತ್‌ ಶರ್ಮಾ ಮತ್ತು ಶುಭಮನ್ ಗಿಲ್(Shubhman gil) ಅವರಿಬ್ಬರ ಉತ್ತಮ ಜೊತೆಯಾಟದಿಂದಾಗಿ,

118 ಎಸೆತಗಳಲ್ಲಿ 143 ರನ್‌ಗಳನ್ನು ಕಲೆ ಹಾಕಿತು. ರೋಹಿತ್ ಶರ್ಮಾ 83 ರನ್( 67 ಎಸೆತ, 9 ಬೌಂಡರಿ, 3 ಸಿಕ್ಸರ್) ಶುಭಮನ್ ಗಿಲ್ 70 ರನ್(60 ಎಸೆತ, 11 ಬೌಂಡರಿ) ಜೊತೆಯಾಟವಾಡಿ ನಿರ್ಗಮಿಸಿದರು.

ನಂತರ ಬಂದ ವಿರಾಟ್‌ ಕೊಹ್ಲಿ(RohitSharma century to pet dog) ಬಹುದಿನಗಳ ನಂತರ ತಮ್ಮ 73ನೇ ಶತಕ ದಾಖಲಿಸಿದರು.

ಅಂತಿಮವಾಗಿ ಭಾರತ ತಂಡ 373 ರನ್‌ಗಳ ಬೃಹತ್‌ ಮೊತ್ತವನ್ನು ಕಲೆ ಹಾಕಿತು.

ಭಾರತ ತಂಡ ನೀಡಿದ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ 8 ವಿಕೆಟ್‌ ಕಳೆದುಕೊಂಡು 306 ರನ್‌ಗಳನ್ನು ಗಳಿಸಿ, 67 ರನ್‌ಗಳಿಂದ ಸೋಲು ಕಂಡಿತು.

ಇನ್ನು ಬಾಂಗ್ಲಾದೇಶದ(Bangla desh) ವಿರುದ್ದದ ಸರಣಿಯಲ್ಲಿ ಗಾಯಗೊಂಡು ಶ್ರೀಲಂಕಾ ವಿರುದ್ದದ ಮೊದಲ ಏಕದಿನ ಪಂದ್ಯಕ್ಕೆ ಕಂಬ್ಯಾಕ್ ಮಾಡಿದ್ದ ರೋಹಿತ್ ಶರ್ಮಾ

ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 47ನೇ ಅರ್ಧ ಶತಕ ಬಾರಿಸಿದ ಬಳಿಕ ಆಕಾಶದತ್ತ ನೋಡುತ್ತಾ ತಮ್ಮ ಪ್ರೀತಿಯ ನಾಯಿಯನ್ನು ನೆನಪಿಸಿಕೊಂಡಿದ್ದಾರೆ.

Exit mobile version