ನಾವು ಮನೆಯಿಂದ ತಯಾರಿಸಿದ ಆಹಾರ ಬಿಟ್ಟು ಹೊರಗಡೆ ಖರೀದಿಸುವ ಯಾವುದೇ ಆಹಾರವನ್ನು ಸಹ ಆ ಆಹಾರವನ್ನು ಅರೋಗ್ಯಕರವಾಗಿ, ಸ್ವಚ್ಛವಾಗಿ (Rusk making video viral) ತಯಾರಿಸಿದ್ದಾರೆ ಎಂಬುದನ್ನು
ನಾವು ನಿರ್ಧಿಷ್ಟವಾಗಿ ಹೇಳುವುದು ಕಷ್ಟ. ಬಹುತೇಕವಾಗಿ ಹೆಚ್ಚಿನ ಕ್ವಾಂಟಿಟಿಯಲ್ಲಿ (Quantity) ಇಂಥಾ ಆಹಾರವನ್ನು ತಯಾರಿಸುವ ಕಾರಣ ಸ್ವಚ್ಛತೆಯತ್ತ ಹೆಚ್ಚು ಗಮನ ಕೊಡುವುದಿಲ್ಲ. ಆಹಾರ ತಯಾರಿಸುವ
ಸ್ಥಳ, ಆಹಾರ ತಯಾರಿಸುವ ರೀತಿ ಬಲ್ಕ್ ಪ್ರಮಾಣಲ್ಲಿ ತಯಾರಾಗುವ ಕಾರಣ ಸ್ಪಲ್ಪ ಮಟ್ಟಿಗಾದರೂ (Rusk making video viral) ಹದಗೆಟ್ಟಿರುತ್ತದೆ.

ಈ ಹಿಂದೆಯೂ ಈ ರೀತಿಯ ಫುಡ್ ಮೇಕಿಂಗ್ (Food Making) ವೀಡಿಯೋ ವೈರಲ್ (Viral) ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ (Social Media) ಮಂಡಕ್ಕಿ, ಪಾನಿಪುರಿಯ ಪೂರಿ,
ಬಟಾಣಿಯನ್ನು ಕೆಟ್ಟದಾಗಿ ತಯಾರಿಸುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿ ನೆಟ್ಟಿಗರು ಛೀ, ಥೂ ಎಂದು ಕ್ಯಾಕರಿಸಿ ಉಗಿದಿದ್ದರು.ಹಲವರ ಫೇವರಿಟ್ ಸ್ನ್ಯಾಕ್ (Favoirite Snack)
ರಸ್ಕ್ (Rusk) ಮಾಡುವ ವಿಡಿಯೋ ಇದೀಗ ಹಾಗೆಯೇ ವೈರಲ್ ಆಗಿದೆ.
ಬರಿಗೈನಲ್ಲೇ ರಸ್ಕ್ ಮಾಡುವ ವಿಡಿಯೋ ವೈರಲ್
ಇಷ್ಟೊಂದು ವೈರಲ್ ಆಗಿರುವ ವಿಡಿಯೋದಲ್ಲಿ ಕಾರ್ಮಿಕರು ಮೊದಲಿಗೆ ಹಿಟ್ಟಿನ ಹುಡಿಯನ್ನು ತಂದು ಸುರಿಯುತ್ತಾರೆ. ನಂತರ ಒಂದು ಬಕೆಟ್ನಿಂದ ಒಂದು ಮೆಶಿನ್ಗೆ ನೀರು ಸೇರಿಸುತ್ತಾರೆ. ಇದಕ್ಕೆ ಹಿಟ್ಟನ್ನು
(Flour) ತಂದು ಹಾಕುತ್ತಾರೆ. ಇದು ಮಿಕ್ಸ್ ಆಗುತ್ತಿದ್ದಂತೆ ಕೂಡಲೇ ಎಣ್ಣೆ ತಂದು ಸುರಿಯುತ್ತಾರೆ. ಈ ಹಿಟ್ಟನ್ನು ನಂತರ ಒಂದು ಕಡೆ ತಂದು ರಾಶಿ ರಾಶಿಯಾಗಿ ಸುರಿದು ಬಿಡುತ್ತಾರೆ.
ನಂತರ ಬರಿ ಕೈಯಿಂದಲೇ ಅದನ್ನು ಹೊಡೆದು ಹೊಡೆದು ಈ ಹಿಟ್ಟನ್ನು ನಾದಿಕೊಳ್ಳುತ್ತಾರೆ. ಬಳಿಕ ಇದನ್ನು ಆಯತಾಕಾರಕ್ಕೆ ಮಾಡುತ್ತಾರೆ ನಂತರ ಹಿಟ್ಟನ್ನು ಬೇಯಿಸುವ ಮೆಷಿನ್ನೊಳಗೆ ತಂದು ಸುರಿಯುತ್ತಾರೆ.
ಬೇಯಿಸುವ ಮೆಷಿನ್ನೊಳಗೆ ಇದನ್ನು ತಳ್ಳುತ್ತಾರೆ. ಅದರೊಳಗೆ ಸಂಪೂರ್ಣ ಬೆಂದಾದ ಬಳಿಕ ಹೊರಕ್ಕೆ ತೆಗೆದು ಕಟ್ ಮಾಡುತ್ತಾರೆ.
ಯಪ್ಪಾ..ಸ್ವಲ್ಪನಾದ್ರೂ ಸ್ವಚ್ಛತೆ ಕಾಪಾಡಿ ಎಂದ ನೆಟ್ಟಿಗರು
ಕಾರ್ಮಿಕರು ಯಾವುದೇ ಗ್ಲೌಸ್ ಧರಿಸದೆ ಇವಿಷ್ಟೂ ರಸ್ಕ್ ಮೇಕಿಂಗ್ ಚಟುವಟಿಕೆಯನ್ನು ಬರಿಗೈಯಲ್ಲೇ ಮಾಡುವುದನ್ನು ನೋಡಬಹುದು. ಕೈಯಲ್ಲೇ ಗುದ್ದಿ ಗುದ್ದಿ ಹಿಟ್ಟನ್ನು ಹದಕ್ಕೆ ತರುತ್ತಾರೆ. ಆ ನಂತರ ಕೈಯಲ್ಲೇ
ಆ ಹಿಟ್ಟಿಗೆ ಶೇಪ್ ಮಾಡುವ ಪ್ರಕ್ರಿಯೆಯನ್ನೂ ಸಹ ಮಾಡುತ್ತಾರೆ. ನಂತರ ಮತ್ತೊಂದು ಮೆಷಿನ್ಗೆ ಬರಿಗೈಯಲ್ಲೇ ಶಿಫ್ಟ್ ಮಾಡುತ್ತಾರೆ. ಒಟ್ಟಿನಲ್ಲಿ ಎಲ್ಲಿಯೂ ಕೂಡ ಸ್ವಚ್ಛತೆಯನ್ನು ಸಂಪೂರ್ಣ ರಸ್ಕ್ ಮಾಡುವ
ವಿಧಾನದಲ್ಲಿ ಕಾಪಾಡದಿರುವುದನ್ನು ನೋಡಬಹುದಾಗಿದೆ.
ಇದನ್ನೂ ಓದಿ : ಕನಿಷ್ಠ 7 ಭಾರತೀಯ ಕೆಮ್ಮು ಸಿರಪ್ ಗಳು ವಿಷಕಾರಿಯಾಗಿವೆ : ವಿಶ್ವ ಆರೋಗ್ಯ ಸಂಸ್ಥೆ
ಈ ರಸ್ಕ್ ಮೇಕಿಂಗ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಕೆಲವರು ‘ಥೂ, ನಮ್ಮಿಷ್ಟದ ಸ್ನ್ಯಾಕ್ಸ್ನ್ನು ಹೀಗೆಲ್ಲಾ
ಮಾಡಿದ್ರೆ ತಿನ್ನೋದು ಹೇಗಪ್ಪಾ’ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ಮನೆ ಮಂದಿಗೆ ಇದನ್ನು ಮೊದಲು ತೋರಿಸಬೇಕು, ಯಾವಾಗಲೂ ನಮ್ಮ ಮನೆಯಲ್ಲಿ ರಸ್ಕ್ ಮಾತ್ರ ಇರುತ್ತದೆ’ ಎಂದಿದ್ದಾರೆ.
ಮತ್ತೊಬ್ಬರು, ‘ಇವರು ಕೈಗೆ ಗ್ಲೌಸ್ನ್ನಾದರೂ ರಸ್ಕ್ ತಯಾರಿಯ (Preparation) ಸಂದರ್ಭ ಧರಿಸಬಹುದಿತ್ತು’ ಎಂದಿದ್ದಾರೆ.

ಮತ್ತೆ ಕೆಲವರು ‘ನಿಮ್ಮ ಮನೆಯಲ್ಲಿ ತಾಯಿ ಚಪಾತಿ ಮಾಡುವುದು ಕೂಡ ಹೀಗೇ ಅಲ್ಲವೇ, ಮತ್ತೆ ಇವರು ಬರಿಗೈಯಲ್ಲಿ ಆಹಾರ ತಯಾರಿಸಿದರೆ ಇದರಲ್ಲಿ ತಪ್ಪೇನಿದೆ ಎಂದು ‘ ಪ್ರಶ್ನಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ,
‘ಈ ರೀತಿ ಎಲ್ಲವನ್ನೂ ನಾವು ನೋಡುತ್ತಾ ಹೋದರೆ ನಾವು ಮನೆಯಿಂದ ಹೊರಗಡೆ ಯಾವ ಆಹಾರವನ್ನೂ ಕೂಡ ತಿನ್ನಲು ಸಾಧ್ಯವಿಲ್ಲ. ಯಾಕೆಂದರೆ ಇದೇ ರೀತಿ ಅಸ್ವಚ್ಛತೆಯಿಂದಲೇ ಎಲ್ಲಾ
ಆಹಾರವನ್ನು ಮಾಡಲಾಗುತ್ತದೆ’ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ರಶ್ಮಿತಾ ಅನೀಶ್