‘ಭಯೋತ್ಪಾದಕ ಮತ್ತು ಉಗ್ರಗಾಮಿ’ ಸಂಘಟನೆಗಳ ಪಟ್ಟಿಯಲ್ಲಿ ಫೇಸ್ಬುಕ್ ಮೂಲ ಕಂಪನಿ ಮೆಟಾ ಹೆಸರು ಸೇರಿಸಿದ ರಷ್ಯಾ!

america

Russia : ಅಚ್ಚರಿಯ ಬೆಳವಣಿಗೆಯಲ್ಲಿ ಅಮೇರಿಕಾ(America) ಮೂಲದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿ ಮೆಟಾವನ್ನು ರಷ್ಯಾ(Russia) ಉಗ್ರಗಾಮಿ ಸಂಘಟನೆಗಳ(Russia over Meta) ಪಟ್ಟಿಗೆ ಸೇರಿಸಿದೆ. ರಷ್ಯಾದ ಈ ನಡೆಯನ್ನು ವಿಶ್ವದ ಅನೇಕ ದೇಶಗಳು ಖಂಡಿಸಿವೆ.

ಫೆಡರಲ್ ಸರ್ವಿಸ್ ಫಾರ್ ಫೈನಾನ್ಶಿಯಲ್ ಮಾನಿಟರಿಂಗ್ದ ಡೇಟಾಬೇಸ್(Data Base) ಪ್ರಕಾರ, ರಷ್ಯಾ ತನ್ನ ಭಯೋತ್ಪಾದಕ(Terrorism) ಮತ್ತು ಉಗ್ರಗಾಮಿ ಸಂಘಟನೆಗಳ ಪಟ್ಟಿಗೆ ಇನ್ಸ್ಟಾಗ್ರಾಮ್(Instagram) ಮತ್ತು ಫೇಸ್ಬುಕ್ನ ಮೂಲ ಕಂಪನಿಯಾದ ಮೆಟಾವನ್ನು ಸೇರಿಸಿದೆ.

ಈ ವರ್ಷದ ಆರಂಭದಲ್ಲಿ, ರಷ್ಯಾದ ನ್ಯಾಯಾಲಯವು ರಷ್ಯಾದಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಅನ್ನು ನಿಷೇಧಿಸಿದ್ದು, ಅದರ ಮೂಲ ಕಂಪನಿ ಮೆಟಾವನ್ನು ಉಗ್ರಗಾಮಿ ಎಂದು ಹೆಸರಿಸಿತ್ತು.

ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿದ ಹಿನ್ನೆಲೆಯಲ್ಲಿ ಅಮೇರಿಕಾ ಮೂಲದ ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿಗಳಾದ ಫೇಸ್ಬುಕ್ಮತ್ತು ಇನ್ಸ್ಟಾಗ್ರಾಮ್ ಮೇಲೆ ರಷ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು,

ಇದನ್ನೂ ಓದಿ : https://vijayatimes.com/kannada-rajyothsava-will-start-from-oct-28/

ಮೊದಲ ಹಂತವಾಗಿ ಎರಡು ಕಂಪನಿಗಳ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ರಷ್ಯಾದಲ್ಲಿ ಫೇಸ್ಬುಕ್ (Russia over Meta)ಮತ್ತು ಇನ್ಸ್ಟಾಗ್ರಾಮ್ ಅನ್ನು ನಿಷೇಧಿಸಿ, ಅವುಗಳ ಮೇಲೆ ತನಿಖೆ ನಡೆಸುವಂತೆ ಸೂಚಿಸಿತ್ತು.

https://youtu.be/NIbQmBVUfDo

ಇದಾದ ಒಂದು ತಿಂಗಳ ನಂತರ, ಏಪ್ರಿಲ್ನಲ್ಲಿ, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಅವರನ್ನು ರಷ್ಯಾದ ವಿದೇಶಾಂಗ ಸಚಿವಾಲಯವು ದೇಶಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿತು.

ಜ್ಯೂಕರ್ಬರ್ಗ್, ಹಲವಾರು ಉನ್ನತ ವ್ಯಕ್ತಿಗಳೊಂದಿಗೆ ರಶಿಯಾಫೋಬಿಕ್ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಯಿತು.

ಇದೀಗ ರಷ್ಯಾ ಮತ್ತು ಅಮೇರಿಕಾ ನಡುವಿನ ಯುದ್ದವು ಮತ್ತೊಂದು ತಿರುವು ಪಡೆದುಕೊಂಡಿದ್ದು, ಅಮೇರಿಕಾ ಮೂಲದ ಕಂಪನಿಗಳನ್ನು ಗುರಿಯಾಗಿಸಿಕೊಂಡು ರಷ್ಯಾ ಅನೇಕ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

Exit mobile version